ಇವತ್ತಿನ ಸವಾಲಿನ ಪರಿಸ್ಥಿತಿಯಲ್ಲಿ ಸಾಮಾಜಿಕ ಮಾಧ್ಯಮಗಳು ಸಾಕಷ್ಟು ಸುಳ್ಳು ಇಲ್ಲವೇ ತಪ್ಪು ಮಾಹಿತಿಯನ್ನು ಅತಿ ವೇಗವಾಗಿ ಹರಡುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ, ಒಂದು ಜವಾಬ್ದಾರಿಯುತ ಮಾಧ್ಯಮವಾಗಿ ಈ ಕೆಳಗಿನ ವಾಸ್ತವ ಸಂಗತಿಗಳನ್ನು ಓದುಗರ ಮುಂದಿಡುತ್ತಿದ್ದೇವೆ. ಹೆಚ್ಚಿನ ಜನರಿಗೆ ಈ ವಾಸ್ತವ ಸಂಗತಿ ತಿಳಿಯಲು ಸಹಕರಿಸಿ. ಹಾಗೆಯೇ ಕೊರೊನಾ ಕುರಿತಂತೆ ಬೇರೆ ಯಾವುದೇ ರೀತಿಯ ಸುಳ್ಳುಗಳು ನಿಮ್ಮ ಗಮನಕ್ಕೆ ಬಂದರೆ ನಮಗೆ ತಿಳಿಸಲು ಕೋರುತ್ತೇವೆ.
ನಸುಕು.ಕಾಮ್
☛ ೨೫ ಡಿಗ್ರಿ ಗಿಂತ ಮೇಲಿನ ಉಷ್ಣತೆ ಇದ್ದಾಗ, ಸೂರ್ಯನ ಪ್ರಖರ ಬಿಸಿಲು ಇದ್ದಾಗ ಅಥವಾ ಬಿಸಿ ನೀರಿನ ಸ್ನಾನದಿಂದ ಇಲ್ಲವೇ ಡ್ರೈಯರ್ ಉಪಯೋಗಿಸುವುದರಿಂದ ಕೊರೋನಾ ಬರುವುದಿಲ್ಲ ಎಂಬುದು ಸುಳ್ಳು. ಸಾಮಾನ್ಯ ಮನುಷ್ಯನ ಉಷ್ಣತೆಯೇ 36 ತಿಂದ 37 ಡಿಗ್ರಿಯವರೆಗೆ ಇದ್ದರೂ ವೈರಸ್ ಜೀವಂತವಾಗಿರುತ್ತವೆ. ಜಾಸ್ತಿ ಉಷ್ಣತೆ ಇರುವ ದೇಶಗಳಲ್ಲೂ ಸಹ ವೈರಸ್ ವೇಗವಾಗಿ ಹಬ್ಬಿದ ನಿದರ್ಶನಗಳಿರುವುದರಿಂದ ಇದು ಮಿಥ್ಯ. ಈ ವರೆಗೆ ತಿಳಿದು ಬಂದಿರುವ ಪ್ರಕಾರ ಎಲ್ಲ ರೀತಿಯ ಹವಾಮಾನದಲ್ಲೂ ಕೊರೋನಾ ಪ್ರಸಾರ ಕಂಡುಬರುತ್ತಿದೆ.
☛ ಹತ್ತು ಸೆಕೆಂಡು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಉಸಿರು ಹಿಡಿದಿಟ್ಟುಕೊಂಡಾಗ ಕೆಮ್ಮು ಅಥವಾ ಆಯಾಸ ಕಂಡು ಬರದೇ ಇದ್ದರೆ ಕೊರೋನಾ ಇಲ್ಲ ಎನ್ನುವುದು ಮಿಥ್ಯ. ಕೇವಲ ಲ್ಯಾಬ್ ಪರೀಕ್ಷೆಯೊಂದೇ ಕೊರೋನಾ ಇರುವಿಕೆಯನ್ನು ಖಚಿತವಾಗಿ ತಿಳಿಬಲ್ಲ ವಿಧಾನ.
☛ 75 ಅಥವಾ ಹೆಚ್ಚು ಶೇಕಡಾ ಆಲ್ಕೋಹಾಲ್ ಇರುವ ತೊಳೆವ ದ್ರವ ಹಾಗೂ ಮಾರ್ಜಕ ಗಳು ವೈರಸಗಳನ್ನು ನಾಶಪಡಿಸಿ ಕೈಗಳ ಶುದ್ದೀಕರಣಕ್ಕೆ ನೆರವಾಗುತ್ತವೆಯೇ ಹೊರತು, ಆಲ್ಕೋಹಾಲ್ ಅಥವಾ ಯಾವುದೇ ಮದ್ಯ ಸೇವಿಸುವುದರಿಂದ ಕೊರೋನಾ ತಡೆಗಟ್ಟುವುದಾಗಲಿ, ಗುಣಪಡಿಸುವುದಾಗಲಿ ಸಾಧ್ಯವಿಲ್ಲ.
☛ ಸೊಳ್ಳೆಗಳಿಂದ ಕೊರೊನಾ ಹರಡುತ್ತದೆ ಎಂಬುದು ಸುಳ್ಳು. ಸೋಂಕಿತ ವ್ಯಕ್ತಿ ಕೆಮ್ಮುವುದರಿಂದ ಇಲ್ಲವೇ ಸೀನುವುದರಿಂದ ಇಲ್ಲವೇ ಮಾತನಾಡುವಾಗ ಚಿಮ್ಮಿದ ಸೂಕ್ಷ್ಮ ಹನಿಗಳ ಮೂಲಕವೇ ಕೊರೊನಾ ಹರಡಿರುವುದು ಹೆಚ್ಚಿನದಾಗಿ ಕಂಡು ಬಂದಿವೆ.
☛ ಏರ್ ಪೋರ್ಟ್ ಹಾಗೂ ಕೆಲ ಸ್ಥಳಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿರುವುದನ್ನು ನೋಡಿರಬಹುದು. ಅದರಿಂದ ಕೇವಲ ಜ್ವರದ ಲಕ್ಷಣ ಮಾತ್ರ ಕಂಡು ಬಂದು ಜಾಗರೂಕರಾಗಬಹುದೇ ಹೊರತು ಕೊರೋನಾ ಸೋಂಕಿತರಲ್ಲ ಎನ್ನುವುದು ಖಂಡಿತ ತಿಳಿಯಲಾಗುವುದಿಲ್ಲ. ಅನೇಕರಲ್ಲಿ ಕೊರೋನಾ ಸೋಂಕಿತರಾದಾಗ್ಯೂ ಜ್ವರ ಸಮೇತ ಯಾವುದೇ ಲಕ್ಷಣಗಳು ಕಂಡು ಬರಲು ಸುಮಾರಾಗಿ ಎರಡರಿಂದ ಹತ್ತು ದಿನಗಳು ಬೇಕಾಗಬಹುದು.
☛ ಕ್ಲೋರಿನ್ ಅಥವಾ ಆಲ್ಕೋಹಾಲ್ ಅನ್ನು ಮೈ, ಮುಖದ ಮೇಲೆ ಸಿಂಪಡಿಸುವದರಿಂದ ಕೊರೋನಾ ವೈರಸ್ ನ್ನು ಕೊಲ್ಲಲು ಸಾಧ್ಯವಿಲ್ಲ.ಉಪ್ಪು ಅಥವಾ ಸಲೈನ್ ನೀರಿನಿಂದ ಮೂಗು ತೊಳೆಯುವುದರಿಂದಲೂ ವೈರಸ್ ನಿರ್ಮೂಲನೆ ಅಸಾಧ್ಯ. ಪದೇ ಪದೇ ನೀರು ಕುಡಿಯುವುದು ಒಳ್ಳೆಯ ಅಭ್ಯಾಸವಾದರೂ ಸಹ, ಅದರಿಂದ ಕೋರೋನಾ ವೈರಸ್ ನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ.
☛ ನ್ಯೂಮೋನಿಯಾ ಅಥವಾ ಎಚ್ ಐ ಬಿ ಚುಚ್ಚುಮದ್ದು ನೀಡುವುದರಿಂದ ಕೊರೋನಾ ತಡೆಗಟ್ಟಲು ಸಾಧ್ಯವಿಲ್ಲ.
ಉಪ್ಪು ಅಥವಾ ಸಲೈನ್ ನೀರಿನಿಂದ ಮೂಗಿನೊಳಗೆ ತೊಳೆಯುವುದರಿಂದಲೂ ವೈರಸ್ ನಿರ್ಮೂಲನೆ ಅಸಾಧ್ಯ.ಎಂಟಿ ಬೈಯೋಟಿಕ್ ಕೇವಲ ಬ್ಯಾಕ್ಟೀರಿಯಾ ಚಿಕಿತ್ಸೆಯೇ ಹೊರತು ಯಾವತ್ತೂ ವೈರಸ್ ಗಳಿಗೆ ನೀಡಲಾಗುವದಿಲ್ಲ. ಕೊರೋನಾಗೆ ತಕ್ಕ ಔಷಧಿಗಾಗಿ ಸಂಶೋಧನೆ ವೇಗವಾಗಿ ಮುಂದುವರೆದಿದೆ.
☛ ಬೆಳ್ಳುಳ್ಳಿ ಆರೋಗ್ಯಕಾರಿ ಎನ್ನುವುದೇನೋ ನಿಜ ಆದರೆ ಇದರಿಂದ ಕೊರೋನಾ ಗುಣ ಪಡಿಸಬಹುದು ಅನ್ನುವ ಯಾವುದೇ ಪುರಾವೆಗಳಿಲ್ಲ.
☛ ಕೊರೋನಾ ಎಲ್ಲ ತರದ ವಯಸ್ಸಿನವರಿಗೂ ತಟ್ಟ ಬಲ್ಲುದು. ವಯಸ್ಸಾದವರು ಅದರಲ್ಲೂ ಹೃದಯ ಸಂಬಂಧಿ, ಅಸ್ತಮಾ, ಸಕ್ಕರೆ ಕಾಯಿಲೆ ಗಳಿಂದ ನರಳುವವರಿಗೆ ಹೆಚ್ಚಿನ ಅಪಾಯ ತರಬಲ್ಲುದು.ಸಾಮಾಜಿಕ ಅಂತರ, ಸರಿಯಾದ ಉಸಿರಾಟ ಪದ್ಧತಿ, ಕೈ ಗಳನ್ನು ಸ್ವಚ್ಛವಾಗಿರಿಸುವುದು ಹಾಗೂ ಪದೇ ಪದೇ ಮೂಗು, ಬಾಯಿ ಕಣ್ಣುಗಳಿಗೆ ಕೈಗಳನ್ನು ಸ್ಪರ್ಶಿಸದಿರುವುದು -ಇತ್ಯಾದಿಗಳಿಂದ ಕೊರೋನಾ ದಿಂದ ದೂರವಿರಬಹುದು.
☛ 5G ಮೊಬೈಲ್ ನೆಟ್ ವರ್ಕ್ ಗಳಿಂದ ಕೊರೋನಾ ಹರಡಲು ಸಾಧ್ಯವಿಲ್ಲ , ಇತ್ತೀಚಿನ ಬಹು ದೊಡ್ಡ ಮಿಥ್ಯೆಗಳಲ್ಲಿ ಒಂದಾಗಿದೆ.
☛ ಕೊರೋನಾ ಸೋಂಕಿತರಾದ ತಕ್ಷಣ ಸಾಯುವುದು ಖಂಡಿತ ಅಥವಾ ಜೀವನ ಪೂರ್ತಿ ರೋಗಗ್ರಸ್ತ ರಾಗಿರಬೇಕೆಂಬುದೇನೂ ಇಲ್ಲ. ಹೆಚ್ಚಿನ ಸಂಖ್ಯೆಯ ಜನ ಕೊರೋನಾ ದಿಂದ ಗುಣಮುಖರಾಗಿದ್ದಾರೆ.ಒಂದು ವೇಳೆ ಕೊರೋನಾ ಸೋಂಕು ಕಾಣಿಸಿದಲ್ಲಿ ಗಾಬರಿಯಾಗದೆ ವೈದ್ಯರ ಹಾಗೂ ಆಸ್ಪತ್ರೆಯ ನಿರ್ದೇಶನಗಳನ್ನೂ ಪಾಲಿಸಿ ಆದಷ್ಟು ಬೇಗ ಗುಣ ಮುಖರಾಗಿ.
ಹೆಚ್ಚಿನ ಬರಹಗಳಿಗಾಗಿ
ಹಿಂದಿ ಹೇರಿಕೆ ಸರಿಯೇ?
ಸ್ವೀಡನ್ ಚುನಾವಣಾ ಸಮರ ೨೦೨೨
ಸ್ವಾತಂತ್ರ್ಯದ ಅಮೃತೋತ್ಸವ – ೭೫ ರ ಭಾರತ