ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)
- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
ಗಾಂಧಿ ಎನ್ನುವದೇನು ?
ವ್ಯಕ್ತಿ? ಶಕ್ತಿ ?
ಉಹೂಂ
ಗಾಂಧಿ ಎಂದರದು,
ಗಾಯತ್ರೀ!
ಗಾಂಧಿ ಎನ್ನುವ ಪ್ರಸ್ತುತ
ಅಪ್ರಸ್ತುತ ವಾಗಿರುವದೇ
ವಿಪರ್ಯಾಸ !!
ಗಾಂಧಿ, ಗಾಂಧಿ ಗಳ ಗುಂಪಿನಲಿ
‘ಗಾಂಧಿ ಗಿರಿ’ಗಳಲಿ
ಕಳೆದು ಹೋದದ್ದುಸತ್ಯ
ಜಗತ್ತಿಗೇ ಅಹಿಂಸೆ ಬೋಧಿಸುವ
ಗಾಂಧಿ ದೇಶದಲಿ ಹಿಂಸೆಯ ಕುಣಿದಾಟ
ಗಾಂಧಿ ಚೌಕಗಳಿಂದು
ಅವಾಂತರಗಳ
ಆಗರ.
ಪ್ರತಿ ಅಕ್ಟೋಬರ್ ಎರಡು
ಹಾರಗಳ ತೂರಾಟ
ಅಮೂರ್ತ ವಾಗಿದ್ದು
ಮೂರ್ತಿಯಾಗುಳಿದ
ಸ್ಥಿತ್ಯಂತರ
ಹೀಗಾದರೇನು ಗತಿ
ಸ್ವಾಮಿ ಗತಿ ಇಲ್ಲ
ಗೋತ್ರಗಳಿಲ್ಲ
ಪುಣ್ಯ
ಗಾಂಧಿ ಇಂದಿಲ್ಲ
ಇದ್ದರೆ
ಅವರ ಆತ್ಮಹತ್ಯೆ
ಕಾಣಬೇಕಿತ್ತು !!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ