ಗೋನವಾರ ಕಿಶನ್ ರಾವ್
ಗೋನವಾರ ಕಿಶನ್ ರಾವ್ ನಿವೃತ್ತ ಕನ್ನಡ ಉಪನ್ಯಾಸಕರು.ನೃಪತುಂಗ ಕನ್ನಡ ವಿದ್ಯಾ ಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ಸೇವೆ.ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ. ಅಂಕಣ ಬರಹ ಅನುವಾದ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಅನೇಕ ಕತೆ ನಾಟಕಗಳನ್ನು ಅನುವಾದಿಸಿದ್ದಾರೆ.ಇವರ ಕತೆಗಳು, ವಿಮರ್ಶಾ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟ.ಹೈದರಾಬಾದ್ ನ ಕರ್ನಾಟಕ ಸಾಹಿತ್ಯ ಮಂದಿರಕ್ಕಾಗಿ ಎಂಟು ವರ್ಷಗಳ ಕಾಲ 'ಪರಿಚಯ '
ಸಾಹಿತ್ಯ ಪತ್ರಿಕೆ ಸಂಪಾದಿಸಿ ಕೊಟ್ಟ ಹಿರಿಮೆ ಅವರದು.