ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೌರೀಶ್ ಅಬ್ಳಿಮನೆ
ಇತ್ತೀಚಿನ ಬರಹಗಳು: ಗೌರೀಶ್ ಅಬ್ಳಿಮನೆ (ಎಲ್ಲವನ್ನು ಓದಿ)

ಸೊರಗಿದ ಹೂವಿನ ಪಾತ್ರದ ಮೌನಕೆ
ತಾಳೆ ಎನ್ನಲು ಸಾಧ್ಯವೆ?

ಚಂದ್ರಗಿರಿಯಲಿ‌ ಚಿಟ್ಟೆ ಹಾರಾಡಿತು
ಸಿಂಹಧ್ವನಿಯನು ಕೇಳಿ ಕಲ್ಲಾಯಿತು
ಚಿತ್ರಾಂಗಿಯ ಚಿತ್ರವಧೆ ತಡೆಯೋಣ ತಾಳು;
ಸಮಯವು ನಮ್ಮನು ಕಾಯುವುದೆ?

ತಿಳಿನೀರ ಕೊಳದಲ್ಲಿ ನಾರಿಯಂದವ ನೋಡುತ
ಕೊಚ್ಚೆಯೆರಚಲು ಹೊರಟರೆ ತಾಳುವುದೆ? ಸಾಯುವುದೆ?
ತಾಳು, ಮೌನಕೆ ಶರಣಾಗು ನೀನು;
ಸ್ತ್ರೀ ಮೆಟ್ಟಿದ ಗರ್ವಕ್ಕೆ ಮನ್ನಣೆಯು ಏಕೆ?

ಅಂದಗಾತಿ ಚಂದ್ರಮೂರ್ತಿ ಚಿತ್ರಕಲಾ ಚಂಚಲಾ
ಕಾವ್ಯಕನ್ನಿಕೆ ಬಂದಳು ಬಾನಿನಲ್ಲಿ, ಆತುರಾತುರದಲ್ಲಿ ಬಲಾತ್ಕಾರ!
ಒಮ್ಮೆ ಕೂತು ಕಣ್ಣ ಮುಚ್ಚಿ ಚಿತ್ರಾಂಗದೆಯಂದವ ಅಭ್ಯಸಿಸು;
ಸಿಕ್ಕ ಬೆಣ್ಣೆಯ ರುಚಿಯ ಎಲ್ಲರಿಗೂ ಹಂಚು

ಅಂತರಂಗದ ಮಾತನು ಕೇಳುವುದೇಕೊ?
ಆಂತರ್ಯದ ಸಂಗದಲಿ ಸಾಯುವುದೇಕೊ?
ತಾಳು ಹೆಣ್ಣೆ, ನೀನೊಬ್ಬಳೆ ಸಾಕು;
ದೇವರಿಲ್ಲದ ಗುಡಿಯು ನಿನಗೆ ಬೇಕೆ?

ಬಾಡುವ ಹೂವವಳು, ಅಲ್ಲ ಬಾಡದ ಹೂವವಳು;
ಅಲ್ಲೆನ್ನುತ ತಾಳುತ ಕೂರಲು ಆಗುವುದೆ?