- ಪರಿಮಳದ ಹಾದಿ - ಅಕ್ಟೋಬರ್ 22, 2022
- ಕಲ್ಲಾಗುವುದೆಂದರೆ - ಡಿಸಂಬರ್ 31, 2021
- ದುರಿತಕಾಲದ ದನಿ - ಡಿಸಂಬರ್ 24, 2020
*******
“ಕರ್ನಾಟಕ ಹಲವು ಸಂಸ್ಕೃತಿಗಳ ತಾಣ. ಕನ್ನಡವನ್ನೇ ಮಾತಾಡಿದರೂ ನಾವೆಲ್ಲರೂ ನಮ್ಮದೇ ಆದ ರೀತಿಯಲ್ಲಿ, ನಮ್ಮ ನಮ್ಮ ಪರಿಸರಕ್ಕನುಗುಣವಾಗಿ ಮಾತಾಡುತ್ತೇವೆ. ಕನ್ನಡದ್ದೇ ಪದಗಳು ಸಂಕ್ಷಿಪ್ತಗೊಂಡು ಒಂದು ಜನಾಂಗದ ಭಾಷೆಯಾಗಿ ರೂಪುಗೊಂಡು ಕ್ರಮೇಣ ಅದು ಒಂದು ಪ್ರದೇಶದ ಭಾಷೆಯಾಗಿ ಹರಡಿಕೊಳ್ಳುವ ಪ್ರಕ್ರಿಯೆ ಈ ನೆಲದಲ್ಲಿ ನಡೆಯಬಹುದಾದ ಒಂದು ಸುಂದರ ಸಾಂಸ್ಕೃತಿಕ ಸಂಭ್ರಮ. ಹೀಗೆ ರೂಪುಗೊಂಡ ಒಂದು ಭಾಷೆಯೆಂದರೆ ಅದು ‘ಅರೆ ಬಾಸೆ’. ಡಿಸೆಂಬರ್ ೧೫ರಂದು ‘ಅರೆ ಬಾಸೆ ದಿನ’ವನ್ನು ಆಚರಿಸಲಾಗುತ್ತದೆ. ಅದರ ನಿಮಿತ್ತ ಅರೆ ಭಾಷೆಯಲ್ಲಿ ಬರೆದ ಒಂದು ವಿಶೇಷ ಲೇಖನ ನಿಮಗಾಗಿ…”
*******
ಸಾಮಾನ್ಯವಾಗಿ ಸ್ವಲ್ಪ ಪಂಡ್ ನ ಕಾಲಕ್ಕೆ ಹೋದರೆ, ನಾವು ಯಾರೂ ಕಾಸ್ ಕೊಟ್ಟು ತರ್ಕಾರಿ, ಸಾಮಾನ್ ತಾತಿತ್ಲೆ. ಪೂರಾ ವರ್ಸಕಾಗುವಸ್ಟ್ ತರ್ಕಾರಿಗಳ್ನ ನಾವೇ ಬೆಳಿತಿದ್ದೋ, ಅಂದರೆ ಈ ಸೋಂತೆ ಕಾಯಿ, ಗೆಣ್ಸ್, ಕುಂಬಳಕಾಯಿ, ಸೋರೆಕಾಯಿ ಇಂತ ಹಾಳಾಗದ ತರಕಾರಿಗಳ್ನೆಲ್ಲಾ ನಾವು ಭತ್ತದ ಪತಾಯ ಇರುವ ಕೋಣೆಲಿ ಇಡ್ತಿದ್ದೊ. ಹಂಗಾಗಿ ದೊಡ್ಡ ದೊಡ್ಡ ಅಡಿಗೆಗಾಕನ ಇವೆಲ್ಲಾ ಅಟ್ಟಂದ ಇಳಿತಿದ್ದೊ. ಇನ್ನು ಮಾಮೂಲು ಗೈಪುಗೆ ನಾವು ಮಕ್ಕಳೇ ಹೋಗಿ ಹೊಳೆ ಬದಿಂದ ಚೆರ್ಮೆ ಕೊಡಿ, ಕೆಸುನ ದಂಟ್, ಚಗ್ತೆ ಸೊಪ್ಪು ,ಗಿಣಿಕೆ ಸೊಪ್ಪು ಹಿಂಗೆ ಬೇಕಾದಸ್ಟ್ ನಮೂನೆಗ ನಮ್ಮ ಹತ್ರ ಪತ್ರನೇ ಸಿಗ್ತಿದ್ದೊ. ಭತ್ತ ನಾವೇ ಬೆಳಿವ ಕಾರಣ ಉಂಬುವ ಹುಗ್ಗೆಗೆ ತಲೆಬಿಸಿ ಇತ್ಲೆ. ಇನ್ನ್ ಮಳೆ ಸುರು ಆಕನ ನಾಯಿ ಮರಿ ಅಣ್ಬು,ಹೆಗ್ಲಳುಂಬು, ಹುಲ್ಲಂಣ್ಬು, ಸುರ್ಳಿ ಅಣ್ಬು..ಹಿಂಗೆ ಇವೇ ನಮಿಗೆ ಬಾಳಾ ಗಮ್ಮತ್ತ್. ಮಣ್ಣ್ ನ ಅಳಗೆಲಿ ಮಾಡ್ರೆ ಅದರ ಒಂದು ರುಚಿನೇ ಬೇರೆ. ಇನ್ನು ಮಳೆಗಾಲ ಇಡೀ ನಮಿಗೆ ಪಣ್ಪುಳಿ ಹೆಕ್ಕುವ ಕೆಲ್ಸ. ಎಸ್ಟೋ ವರ್ಸಕ್ಕಾಗುವಸ್ಟು ಹುಳ್ನೀರ್ ಮಾಡಿ ಮಡ್ಗ್ ತ್ತಿದ್ದೊ. ದಿನ ಹೋದಂಗೇ ಹುಳಿ ನೀರ್ ನ ಕಡ್ಪು ಹೆಚ್ಚಾದು ಗಡ. ನೆಂಟ್ರ್ ಗಳ ಮನೇಲಿ ಹುಳಿ ಇಲ್ಲದಿದ್ದರೆ ಕುಪ್ಪಿಲಿ ತುಂಬುಸಿ ಕೊಡ್ತಿದ್ದೊ. ಮತ್ತೆ ಹುಳಿ ತೊಪ್ಪೆಗೂ ಅದರ ನೀರುಗೂ ಬಾರೀ ರೇಟ್. ಹಂಗೆ ಮಳೆಗಾಲದ ಕರ್ಚಿಗೆ ನಾವ್ವುಗೆ ಇದೇ ಸಾಕಾತಿತ್ತ್. ಹಂಗೆ ಈಚೆ ನಮ್ಮ ಕನ್ನಡ ಜಿಲ್ಲೆ ಕಡೆ ಬಂದರೆ ಅವು ಉಂಡೆ ಹುಳಿ ತೊಪ್ಪೆ ಸಣ್ಣಗೆ ಬಾಳಿ ಒಣ್ಗಿಸಿ ಮಡ್ಗುತ್ತಿದ್ದೊ. ಕೊಡ್ಗುನವು ಅವಿಕೆ ಹುಳ್ನೀರು ಕೊಟ್ಟರೆ ಅವು ಉಂಡೆ ಹುಳಿ ಹೊಡಿ ಮಾಡಿ ಕೊಡ್ತಿದ್ದೊ. ಎರಡಕ್ಕೂ ಅದರದೇ ಆದ ಬೇರೆ ರುಚಿ ಇತ್ತ್. ಅದೇ ಹೊತ್ತ್ಲಿಬೆದ್ರು ಹಿಂಡ್ಲಿಗೆ ಹೋಗಿ ಸುರೂಗೇ ಕಣಿಲೆ ನೋಡಿ ಹುಡ್ಕಿ ತರ್ತ್ತಿದ್ದೊ. ಅದರ ರುಚಿ ಹೇಳಿ ಸುಖ ಇಲ್ಲೆ.
ಎಲ್ಲಾ ಬುಟ್ಟು ನಮ್ಮವ್ವ ಗೈಪುಗೆ ಏನು ಇಲ್ಲೆ ಮಕ್ಕಳೆತಾ ಹೇಳಿರೆ ನಾವು ಹೊಳೆ ಬದಿಗೆ ಮೀನ್ ಹಿಡಿಯಕೆ,ಎಸುಂಡು ಹಿಡಿಯಕೆ ಹೋತಿದ್ದೊ.ಅದ್ ನಮಿಗೆ ಬಾರಿ ಕುಸಿನ ಕೆಲ್ಸ ಅದಿಕ್ಕೆ ನಮಿಗೆ ಸುಲಭಕ್ಕೆ ಸಿಗ್ತಿದ್ದದ್ದು ಮಣ್ಣ್ ಲಿ ಇರುವ ನುಕ್ಕುಳು. ಸ್ವಲ್ಪ ಮಣ್ಣು ಒಕ್ಕಿರೂ ಸಾಕ್,ಪಿತಪಿತ ತೇಳಿಕಂಡ್ ನುಕ್ಕುಳುಗ ಮೇಲೆ ಎದ್ದುಕಂಡ್ ಕುಣ್ದ್ ಕಂಡ್ ಬರ್ತಿದ್ದೊ. ಇನ್ನ್ ಚೂರು ಜಾಸ್ತಿ, ಕತ್ತಿಲೋ, ಕೊಟ್ಟುಲಿಯೋ, ಮಣ್ಣು ಒಕ್ಕಿಬುಟ್ಟರೆ ಮುಗ್ತು,ಎಲ್ಲಾ ಅರ್ಧ ತುಂಡಾಗಿ ಬುಡ್ತಿದ್ದೊ. ಆದರೆ ತುಂಡಾದರೂ ಸಹ ತಲೆ ಕಡೆನ ನುಕ್ಕುಳುಗ ಸಾಯತಿತ್ಲೆ. ನಾವು ಈ ನುಕ್ಕುಳುನ ಗಾಳಕ್ಕೆ ಸಿಕ್ಸಿ ಮೀನ್ ಹಿಡಿತಿದ್ದೊ. ಆ ದಿನ ಏನೋ ಹೊಳೆ ಮೀನ್,ಎಸುಂಡ್ ಸಿಗ್ತಿತ್ತು. ನಮಿಗೆ ಬರ್ಜರಿ ಊಟ, ಜಾಸ್ತಿ ಸಿಕ್ಕಿರೆ ಅವ್ವ ಅದನ್ನ ಬೆಸಗೆಲಿ ಒಣ್ಗಿಕೆ ಇಸಿ, ಯಾರಾರ್ ನೆಂಟ್ರ್ ಬಾಕನ ಬಟಾಟೆ ಗೈಪು ಒಟ್ಟಿಗೆ ಹಾಕಿ ಸಾರ್ ಮಾಡ್ರೆ, ತಿಂಬಕೆ ಹುಳ್ಳಹುಳ್ಳಂಗೆ ಆಗ್ತಿತ್ತ್. ಆದರೆ ಎಸ್ಟೋ ನಕ್ಕುಳುಗ ಮಾತ್ರ ಸತ್ತೊಗ್ತಿದ್ದೊ. ಮತ್ತೊಮ್ಮೆ ಮಣ್ಣ್ ಒಕ್ಕಿರೂ ನಮಿಗೆ ನುಕ್ಕುಳು ಸಿಕ್ಕಿ ಬುಡ್ತಿತ್ತ್. ಆದರೆ ಆಗ ನಮಿಗೆಲ್ಲ ನಮ್ಮ ಮಣ್ಣ್ ನ ಗೊಬ್ಬರ ಮಾಡ್ದು ಈ ನುಕ್ಕುಳ್ ಅಂತ ಗೊತ್ತೇ ಇತ್ಲೆ.
ಬೇಸಿಗೆಲಿ ನಾವು ಅಕ್ಕಿ ಗೆಣ್ಸ್ ಎಳ್ಳಿಕೆ ಬಾಣೆಗೆ ಕೊಟ್ಟು ಹಿಡ್ಕಂಡ್ ಹೋತಿದ್ದೊ. ಆ ಅಕ್ಕಿ ಗೆಣ್ಸ್ ಬೆಣ್ಣೆ ಬೆಣ್ಣೆನಂಗೆ ಒಳಗೆ ಇರ್ತಿತ್ತ್. ಬಳ್ಳಿನ ಬುಡ ನೋಡಿ ಮಣ್ಣು ಎಳ್ಳಿಕನ ಎಷ್ಟೊ ಎರೆಹುಳಗ ಸತ್ತೋಗುತ್ತಿದ್ದೊ. ನಮಿಗೆ ಅದರ ಬದ್ಕ್ಸಿಕೆ ಬೇರೆ ದಾರಿನೂ ಇತ್ಲೆ ಬುಡಿ. ಆದರೆ ಮುಂದೊಂದು ದಿನ ನುಕ್ಕುಳುಗ ಪೂರ ಕಡ್ಮೆ ಆಗಿ ನಮ್ಮ ಮಣ್ ಗೆ ಬಾರಿ ತೊಂದರೆ ಆದೇ ಅಂತ ನಾವುಗೆ ಗೊತ್ತೇ ಇತ್ಲೆ. ಈಗ ನಾವು ಮಣ್ಣ್ ಗೆ ಕಂಪೆನಿ ಗೊಬ್ಬರ, ಅದೂ ಇದೂ ಸುಡುಗಾಡ್ ಅಂತ ಹಾಕಿ, ಒಮ್ಮೆಗೇ ಜಾಸ್ತಿ ಪಸ್ ಲ್ ಪಡ್ದ್,ಕೈಲಿ ಹನೀಸ್ ಕಾಸ್ ಓಡಾಡುವ ಅಂಬೇರ್ಪುಲಿ ನಮ್ಮ ನುಕ್ಕುಳುಗ ಅಲ್ಲೇ ವಿಲ ವಿಲ ಒದ್ದಾಡಿ ಸತ್ತ್ ಹೋದ್ ನಮ್ಮ ಗಮನಕ್ಕೆ ಬಾತೇ ಇಲ್ಲೆ . ಈಗ ನೋಡಿ ನಮ್ಮ ಅವಸ್ಥೆ. ಯಾರಿಗೆ ಹೇಳೊಕು ಈಗ? ಎರೆಗೊಬ್ಬರ ಮಾಡುವ ಘಟಕಗಡ,ಮತ್ತೊಂದು ,ಮಗದೊಂದು ಅಂತ ಈಗ ದುಡ್ಡು ಮಾಡಿಕೆ ಮತ್ತೆ ಏನೆಲ್ಲಾ ಕಸರತ್ತ್ ಗ ಆಗುತ್ತೊಳೊ. ಏನೇ ಮಾಡಿರೂ , ಎಸ್ಟೇ ಕಸ್ಟ ಬಂದರೂ ಭೂಮಿಲೆ ಬೆಳೆ ಲಾಯಿಕ ಬೆಳಿಯೋದೇ ಇಲ್ಲೆಂತಾ ಎಲ್ಲರ ಬಾಯಿಲಿ ಮಾತ್. ಸಣ್ಣ ನುಕ್ಕುಳುಗ ನಮ್ಮ ಮೊಣ್ಣ್ ನ ಸಡ್ಲ ಮಾಡಿ ಬೇರ್ ಇಳಿಸಿಕೆ ಸಹಾಯ ಮಾಡ್ತಿದ್ದೊ ಗಡ. ಸಣ್ಣ ಹುಳದ ದೊಡ್ಡ ಕೆಲ್ಸ ನಮಿಗೆ ಗೊತ್ತೇ ಆತ್ಲೆ. ಈಗ ನಮ್ಮದ್ ಒಂದೇ ಹಾಡ್, ಈಗಿನ ತರಕಾರಿಗೆ ರುಚಿ ಇಲ್ಲೆ, ಗೆಣ್ಸ್ ಲಾಯಿಕಾ ಅದೇಲೆ, ಅಣ್ಬು ಸಿಕ್ಕುದೇ ಅಪರೂಪ ಆವುಟು. ಭೂಮಿನ ನುಕ್ಕುಳಿಗೆ ನಾವೇ ವಿಸ ಕೊಟ್ಟು ಸಾಯ್ಸಿದೋ ಅಂತ ನಮ್ಮ ಮನ್ಸಿಗೆ ಯಾಕೇ ಬಾದುಲೆನೋ ಗೊತ್ತ್ಲೆ. ನಮ್ಮ ಪ್ರಕೃತ್ತಿಲಿ ಇರುವ ಒಂದು ಸಣ್ಣ ಕ್ರಿಮಿ ಕೂಡ ನಮ್ಮ ಬೊದ್ಕಿಗೆ ಎಷ್ಟು ಮುಖ್ಯ ಅನ್ನುವಂತದ್ದು ನಮಿಗೆ ಈಗ ಗೊತ್ತಾದೆ.
ಅಂದು ಕರ್ಚಿಲ್ಲದೆ ಕಳ್ದ ನಮ್ಮ ಬೊದ್ಕುನ ಹಿಂದೆ ಸಣ್ಣ ಸಣ್ಣ ನುಕ್ಕುಳುಗ ಕೂಡ ಕೆಲ್ಸ ಮಾಡ್ತ ಇದ್ದಲೋ ಅಂತ ನೆನ್ಸಿಕನ,ಗಾಳಕ್ಕೆ ಸಿಕ್ಸಿದ ನುಕ್ಕುಳು, ಗೆಣ್ಸ್ ಎಳ್ಳಿಕನ ಸತ್ತೋದ ನುಕ್ಕುಳು ಎಲ್ಲಾ ಮನ್ಸೊಳೊಗೆ ಬಂದ್ ಯಾಕೋ ಎದೆಕಟ್ಟಿದೆ. ಕಣ್ಣ್ ಲಿ ಪಸೆ ಆಂಜಿದೆ. ನಮ್ಮ ಮೊಣ್ಣುಲಿ ಮತ್ತೆ ನುಕ್ಕುಳುಗ ಹುಟ್ಟಿಕಣಕು ಅನ್ನುವಂತದ್ದು ನನ್ನೊಳಗಿನ ದೊಡ್ಡ ಆಸೆ. ಅವರವರ ಪ್ರಪಂಚಕ್ಕೆ ಹೊಕ್ಕಿ ಅನಗತ್ಯ ಹಾಳ್ ಮಾಡುವ ಅದಿಕಾರ ನಾವ್ಯಾರಿಗೂ ಇಲ್ಲೆ.
ಹೆಚ್ಚಿನ ಬರಹಗಳಿಗಾಗಿ
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್
ನಂಬಿಕೆಯ ವರ್ಷಧಾರೆ