- ಕನ್ನಡ ಕಾಂತಾರ.. - ಅಕ್ಟೋಬರ್ 8, 2025
- ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ - ನವೆಂಬರ್ 12, 2023
- ಕುವೆಂಪು ಕನಸಿನ ಸಚಿವ ಮಂಡಲ - ಡಿಸಂಬರ್ 29, 2021
ಇದು ಪರ್ಣಕುಟಿ
ಇಲ್ಲಿ ಮಹಾತ್ಮರ ಚರಕ ತಿರುಗುತ್ತದೆ
ಭಾರತದ ಮಾನ ಮುಚ್ಚುಲು. !
ಇಲ್ಲಿ ಬುಟ್ಟಿ ಗಳನು ಹೆಣೆಯಲು
ಬೆರಳುಗಳೂ ಶ್ರಮಿಸುತಿವೆ.
ಮಣ್ಣು ಮಡಿಕೆಗಳಿಗೆ ತಿಗರಿ
ತಿರುಗುತಿದೆ..!
ಕುಲುಮೆಯ ತಿದಿಗಳು ಉಸಿರಾಡುತಿವೆ..!
ಕಲ್ಲರಳಿಸಿ ಹೂವು ಮಾಡುವ
ಸುಣ್ಣ ದ ಭಟ್ಟಿಗಳು ನಿಂತಿವೆ
ಮನೆ ಮನೆ ಬೆಳಗಲು..!
ಕೈ ಗಳು ದುಡಿಯುತಿವೆ
ಹೊಟ್ಟೆ ಹೊರೆಯಲು..!
ನಮ್ಮ ಅನ್ನವ ನಮ್ಮ
ನಾಡಿಗೇ ನೀಡಲು..!!
ಇಲ್ಲಿ ಗೋಡೆಗಳು ಇದ್ದೂ ಇಲ್ಲದಂತೆ
ಇಲ್ಲಿ ಬಾಗಿಲು ಎಂದರೆ
ಸದಾ ತೆರೆದಿರುವದೆಂದೇ ಅರ್ಥ..!
ರಸ್ತೆ ಗಳೆಂದರೆ ವಿಶಾಲ ಮನಸ್ಸು.. !
ಕೆರೆಗಳು ಸರೋವರಗಳು
ಅಮೃತದ ಮಡುವುಗಳು…!
ಮಣ್ಣು ತಾಯಿಯಾಗಿದೆ
ತೂಗು ತೊಟ್ಟಿಲ ಜೋಗುಳವಾಗಿದೆ..!
ಮಾತುಗಳ ಹೃದಯ ಸತ್ಯ
ನಡೆ ನುಡಿ ಯಲಿ ಪ್ರೀತಿ
ಇಲ್ಲಿರುವ ಬೆಳಕು ದಯೆಯ ನಗುವು
ಅಹಿಂಸೆಯ ನೆಲೆಗಟ್ಟಿನ
ಪರ್ಣಕುಟಿ.. ನಮ್ಮ ಪ್ರೀತಿಯ ಭಾರತ ..!!


ಜಲವರ್ಣ ಚಿತ್ರ ಕೃಪೆ
ನಾ. ರೇವಣಸಿದ್ದಪ್ಪನವರು.
ಚಿತ್ರ ಕಲಾವಿದರು. ಬೆಂಗಳೂರು..
ಹೆಚ್ಚಿನ ಬರಹಗಳಿಗಾಗಿ
ಹೂರಣವಿಲ್ಲದ ಹೋಳಿಗೆ
ಕನ್ನಡ ಕಾಂತಾರ..
ಒದ್ದೆ ಹಕ್ಕಿಯ ಹಾಡು ಮತ್ತು ಇತರ ಕವಿತೆಗಳು