ಇತ್ತೀಚಿನ ಬರಹಗಳು: ಎಸ್ ದಿವಾಕರ್ (ಎಲ್ಲವನ್ನು ಓದಿ)
- ಪುಸ್ತಕ - ಡಿಸಂಬರ್ 31, 2020
- ಹೌದಪ್ಪನ ಊರು ಮತ್ತು ಇಲ್ಲಪ್ಪನ ಊರು - ಸೆಪ್ಟೆಂಬರ್ 30, 2020
- ಕೆ.ವಿ.ತಿರುಮಲೇಶ್ - ಸೆಪ್ಟೆಂಬರ್ 8, 2020
ಪುಸ್ತಕ ಬೆಳೆಸಿಕೊಳ್ಳುತ್ತೆ ಕೈಯಿ
ಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳು
ಇಮ್ಮಡಿಸುತ್ತವೆ ಪುಸ್ತಕದ ಪುಟಗಳು
ಪುಟಗಳಲ್ಲಿರುವ ಎಲ್ಲವೂ…
ಕೈಯಾಡಿದಂತೆ ಕಣ್ಣಾಡಿದಂತೆ ಪುಸ್ತಕ
ಉಬ್ಬುತ್ತಾ ಉಬ್ಬುತ್ತಾ ಊದಿಕೊಳ್ಳುತ್ತ ,
ಬೀಳುತ್ತೆ ನೆಲಕ್ಕೆ; ನೆಲದಲ್ಲಿ ಗಿಡ ಹೂವು
ನದಿ ಕಾಡು ಗಿರಿ ಊರು ನಾವು ನೀವು
ಮೇಲೆ ಆಗಾಗ ಹುಬ್ಬು ಗಂಟಿಕ್ಕುವ ಆಕಾಶ
ಬೆಳೆಯುತ್ತೆ ಪುಸ್ತಕ ಇನ್ನೂ ದಪ್ಪ ದಪ್ಪಕ್ಕೆ
ಅದರೊಳಗೆಷ್ಟೋ ಕಪಾಟು
ಕಪಾಟುಗಳ ತುಂಬ ಊರು ದೇಶ ಕಾಲ ಸಮಸ್ತ
ಪುಸ್ತಕಗಳೇ ಮೊದಲು ಇದ್ದವಲ್ಲ ಒಳಗೆ
ಜ್ಞಾಪಿಸಿಕೊಳ್ಳುತ್ತೆ ಪುಸ್ತಕ ತಾನು
ಪುಸ್ತಕವಾದದ್ದನ್ನು;ಹಂಬಲಿಸಿ ಹಂಬಲಿಸಿ
ಸೊರಗಿ ಕೃಶವಾಗಿ ಪುಟಾಣಿಯಾಗುತ್ತೆ
ಕುಂಕುಮ ಡಬ್ಬಿಯಷ್ಟು.
ಈಗ ಪುಟಾಣಿ ಪುಸ್ತಕದೊಳಗೆ
ಗಜ್ಜುಗದಷ್ಟೂ ಇಲ್ಲದ ಜಗತ್ತು
ಇಟ್ಟುಕೊಳ್ಳಬಹುದು ಅಂಗೈಯಲ್ಲಿ
ಹುಷಾರು ಕಳೆದು ಹೋದೀತು ಜೋಪಾನ ..!
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..