ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪೊರೆವ ತಂದೆ

ನಿರಂಜನ ಕೆ ನಾಯಕ
ಇತ್ತೀಚಿನ ಬರಹಗಳು: ನಿರಂಜನ ಕೆ ನಾಯಕ (ಎಲ್ಲವನ್ನು ಓದಿ)

ಹೆಗಲೇರಿ ಕುಳಿತರೆ ತಾಕುವ ಮುಗಿಲು
ದೇವರು ಕಳಿಸಿದ ಕಾಳಜಿಯ ಕಾವಲು
ತುಂಬುವ ಮಮತೆಯ ಜೀವನ ಬಟ್ಟಲು
ಬಾಗವು ಭಾರಕೆ ನೋವುಂಡ ಕೀಲು

ಗದರುವ ದನಿಯ ಹಿಂದಿನ ಭಾವ
ತೋರನು ಸುಲಭದಿ ಮನದ ನೋವ
ಅಡಗಿದ ಕಣ್ಣ ಹನಿಯ ತೇವ
ಅಪ್ಪ ಕಲ್ಲಾಗಿ ತಾನೇ ಸಮದೂಗಿಸುವ

ಹಾಕುವ ನಾಳೆಗೆ ಭದ್ರ ಅಡಿಪಾಯ
ಅಂಜನು ನೋಡಿ ದೇಹದ ಗಾಯ
ಹತ್ತಿಕ್ಕಿ ಸಾಗುವ ಮನದ ಭಯ
ಸಂಸಾರ ಹೊರುವ ಆತನ ಕಾಯ

ಆಲದ ಮರವಾಗಿ ನೆರಳ ನೀಡುವ
ತೆಂಗಿನ ಮರವಾಗಿ ಆಸೆಗಳ ಪೊರೆವ
ಮಾವಾಗಿ ರುಚಿಯ ಫಲವ ಕೊಡುವ
ತಂದೆ ತಾನು ಕುಟುಂಬಕಾಗಿ ದುಡಿವ