ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬಯಿ

ಸಮತಾ ಆರ್.
ಇತ್ತೀಚಿನ ಬರಹಗಳು: ಸಮತಾ ಆರ್. (ಎಲ್ಲವನ್ನು ಓದಿ)

ಅಮಿತಾ ಭಾಗವತ ಬರೆದ ಮುಂಬೈ ಎಂಬ ಕವಿತೆಯನ್ನು ಸಮತಾ ಆರ್. ಅವರು ಇಂಗ್ಲಿಷ್ ಗೆ ತರ್ಜುಮೆ ಮಾಡಿದ್ದಾರೆ.

MUMBAI…

No identities here,
No clinking anklets in the feet,
Though road is treaded
No foot prints are left.
And the heart is not laden with any load.

Shocked to see the bandaged hand
Screamed at my little boy,
Asking for what happened
And who dressed it.
Pointing to the next door
Said he ” that aunty”.
But she is the one
who is always on a run,
And doesn’t have time even to smile
For a morning Hello.

A beauty with the flowing hair
disappearing in a flash in a Mercedes,
A slumboy searching for
some snacks in the garbage,
A nameless young man who
helping an old man to cross the road,
Doesn’t wait even for a ‘thank you’
And disappears,
Millions of souls hanging in
buses and trains,
None wants to grow to be a Titan
And crush the rest under the feet.

The sea is blowing a breath of fresh air,
The flood of people is parting
To make way for you and me.

Even if you want to wear one,
Masks are not on sale in the market,
And even our shadow doesn’t follow us.

Translated by- Samatha R

ಮುಂಬಯಿ

ಇಲ್ಲಿ ಗುರುತುಗಳಿಲ್ಲ
ಕಾಲಿಗೆ ಘಲ್ ಘಲ್ ಗೆಜ್ಜೆಗಳಿಲ್ಲ
ರಸ್ತೆಯು ಸವೆದರೂ ಮೂಡದ ಹೆಜ್ಜೆ
ಹೃದಯಕ್ಕಾಗದು ಒಜ್ಜೆ.

ಬ್ಯಾಂಡೇಜು ಕಟ್ಟಿದ ಕೈ ನೋಡಿ
“ಏನಾಯಿತೋ ಯಾರು ಕಟ್ಟಿದರೋ”
ಕೂಗಿದೆ.ಪಕ್ಕದ ಮನೆಯತ್ತ
ಕೈ ತೋರಿಸಿ”ಆಂಟಿ”ಎಂದ ಪುಟ್ಟ ಮಗ.
ಅವಳೇನೋ ಬೆಳಿಗ್ಗೆ “ಹಲೋ” ಎಂದರೆ
ನಗಲೂ ಪುರಸೊತ್ತಿಲ್ಲದೆ ಕೆಲಸಕ್ಕೆ
ಓಡಿ ಹೋಗುವವಳು.

ಮರ್ಸಿಡಿಸ್ಸಲ್ಲಿ ಕ್ಷಣಾರ್ಧದಲ್ಲಿ ಮಾಯ
ವಾಗುವ ಹಾರು ಕೂದಲಿನ ಬೆಡಗಿ,
ಕಚರ ರಾಶಿಯಲ್ಲಿ ಕುರುಕಲು ತಿಂಡಿ
ಹುಡುಕುವ ಝೋಪಡಿ ಹುಡುಗ,
ಮುದುಕನ ಕೈ ಹಿಡಿದು ರಸ್ತೆ ದಾಟಿಸಿ
ಥ್ಯಾಂಕ್ಸ್ ಗಾಗು ಕಾಯದೆ ಮಾಯವಾಗುವ
ಹೆಸರಿಲ್ಲದ ತರುಣ.
ಬಸ್ ಟ್ರೈನ್ ಗಳಲ್ಲಿ ಜೋತು ಬೀಳುವ
ಕೋಟಿ ಜೀವಗಳು….
ಯಾರಿಗೂ ತ್ರಿವಿಕ್ರಮ ನಾಗಿ ಬೆಳೆದು
ಉಳಿದವರನ್ನು ಕಾಲಡಿ
ದಬ್ಬುವ ಬಯಕೆಯಿಲ್ಲ.

ಉಸಿರುಗಳಿಗೆ ಪ್ರಾಣವಾಯು
ಸಮುದ್ರ ಹಾಕುತ್ತಿದೆ ಗಾಳಿ.
ಹರಿಯುವ ಜನಪ್ರವಾಹ ಬಿರಿದು
ನನಗೂ ನಿನಗೂ ದಾರಿ.

ಧರಿಸಬೇಕೆಂದರೂ ಮಾರುಕಟ್ಟೆಯಲ್ಲಿ
ಮುಖವಾಡಗಳು ಮಾರಾಟಕ್ಕಿಲ್ಲ.
ನಮ್ಮ ನೆರಳು ಕೂಡ
ನಮ್ಮನ್ನು ಹಿಂಬಾಲಿಸುತ್ತಿಲ್ಲಾ.


ಅಮಿತಾ ಭಾಗವತ್.

ಅಮಿತಾ ಭಾಗವತ

ಅಮಿತಾ ಭಾಗವತರವರು ವೃತ್ತಿ ಯಲ್ಲಿ ನ್ಯಾಯವಾದಿಗಳಾರೂ ಸಾಹಿತ್ಯಾಸಕ್ತರು. ಕುಮುದಾಳ ಭಾನುವಾರ ಇವರ ಪ್ರಕಟಿತ ಕವನ ಸಂಕಲನ. ಕಳೆದ 10 ವರ್ಷಗಳಿಂದ ಹವ್ಯಕ ಸಂದೇಶ ಮಾಸ ಪತ್ರಿಕೆಯ ಸಂಪಾದಕರಾಗಿ ತಮ್ಮ ವಿಚಾರಗಳಿಂದ ಜನರನ್ನು ಪ್ರಭಾವಿತಗೊಳಿಸುತ್ತಾರೆ. ಕರ್ನಾಟಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾಗತಿಕ ಮಹಿಳಾ ಸಮಾವೇಶ ಆಯೋಜಿಸುವದರಲ್ಲಿ ಪ್ರಮುಖ ಪಾತ್ರ ವಹಿಸಿ ಮಹಿಳೆಯರ ಅಭಿವೃದ್ಧಿ ಹಾಗೂ ಅಗತ್ಯವುಳ್ಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ಮುತುವರ್ಜಿ ವಹಿಸುತ್ತಾರೆ. ಸಾಹಿತ್ಯ ಬಳಗದಲ್ಲಿ ಸಕ್ರಿಯರಾಗಿ ಅನೇಕ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.