ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವ್ಯಸನ

ಅಮೃತಾ ಮೆಹೆಂದಳೆ
ಇತ್ತೀಚಿನ ಬರಹಗಳು: ಅಮೃತಾ ಮೆಹೆಂದಳೆ (ಎಲ್ಲವನ್ನು ಓದಿ)

ತನ್ನ ಜಾತಿಯೇ ಮುಂದೆ ಅನ್ಯರು ಹಿಂದೆ
ಮತ್ತೊಂದು ನೀತಿಗೆ ಪರನಿಂದೆ
ಹಿಂದುಳಿಯುವುದೇ ಒಂದು ವರವಿಂದು
ನಿನ್ನೆ ಹಿಂದಿದ್ದುದು ಇಂದು ಮುಂದು

ವೈಟ್ ಕಾಲರ್ ಜಾಬಲ್ಲೂ ಬೆವರಿನ ಕಮಟು
ಜೋಮುಹಿಡಿದ ಬೆನ್ನಿನ ಹೃದಯಕೈ ಒರಟು
ಕೀಲಿಮಣೆ ಕುಟ್ಟುವವರ ಗತ್ತಲ್ಲೂ ಕುತ್ತು
ಪೇಪರ್ ಪೆನ್ನು ಹಿಡಿದವರಿಗೆ ಎಲ್ಲಾ ಗೊತ್ತು?

ಪ್ರಾಣಿಹಿಂಸೆ ಮಹಾಪಾಪ ಅವರನ್ನುತ್ತಿದ್ದರು
ಕುರಿಕೋಳಿಗಳು ಪಾಪ ಇವರಣಕಿಸುತಿಹರು
ಬರೇ ಸೊಪ್ಪು ಸದೆ ಪುಳ್ಚಾರು ಎಂಬ ಕ್ಯಾತೆ
ಗಿಡಮರಗಳಿಗೂ ಜೀವವಿದೆ ಮರೆತೇಹೋಯಿತೇ

ಉತ್ತಿ ಬಿತ್ತಿ ಬೆಳೆವುದೇ ಶ್ರೇಷ್ಠ
ಓದಿ ಬರೆದು ಬೆಳೆವುದೂ ಉತ್ಕೃಷ್ಟ
ವ್ಯಾಪಾರ ವ್ಯವಹಾರ ಅಲ್ಲ ನಿಕೃಷ್ಟ
ನಮ್ಮ ಕಾಯುವ ಯೋಧರು ಸರ್ವಶ್ರೇಷ್ಠ

ಕಾಯಕವೇ ಮತ್ತೊಮ್ಮೆ ಯುಗಧರ್ಮವಾಗಬಾರದೇ
ಬೆಳೆಯಬಾರದೆ ನಾವು ಮೀರಿ
ಶ್ರೇಷ್ಠತೆಯ ವ್ಯಸನ
ಕರೆಗಟ್ಟಿದ ಕನ್ನಡಿಯೊರೆಸಿ
ತೋರಬೇಕಿದೆ
ಕಲೆಯೊಂದಿಗಿನ ಸಹಜ ವದನ…