ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವ್ಯೂಹ

ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ಯಾವುದನ್ನೂ ಹೊತ್ತು
ಕೊಂಡೊಯ್ಯುವಂತಿಲ್ಲ
ಸಾವು ನಿಶ್ಚಿತ..
ಆದರೂ ಕಾದಾಟ..
ನಾನು, ನನ್ನದೆನ್ನುವುದು
ಅತಿ ಪ್ರಿಯ.

ಪರವಾನೆ ಪತ್ರ,
‘ನನ್ನದೆನ್ನುವದ’
ಹೊತ್ತು ಕೊಂಡೊಯ್ಯಲು ದಕ್ಕದು
ಎಂಬ ವಿಷಯವೇನು ಹೊಸತಲ್ಲ!
ಆದರೂ ಪರದಾಟ
ತನ್ನ ಹತ್ತು ತಲಮಾರು ತಿಂದು
ತೇಗಲೆಂದೆ ಬಡದಾಟ…

ಸಹಾಯ ಹಸ್ತದಲಿ,
ಜೀತದ ಆಳ್ವಿಕೆಯ
ಸೊತ್ತೆ ಮೇಲು.
ಆಳ್ವಿಕೆಯ ಹಂಗು..
ಮಂಗನ ಆಟವಾಡಿಸಿತೊ
ನಿನ ಕೈಯಲಿ, ಒಮ್ಮೆ ತಿರುಗಿ
ನೋಡಿ ನೀ ಜಾಣನಾಗ ಬಾರದೆ
ಎಂಬ ತತ್ವವೂ ಹಳೆಯದೇ…

ಯಾರಿಗೂ ತಿಳಿಯದ
ವಿಷಯವೇನು ಇದಲ್ಲ
ಆದರೂ ವ್ಯೂಹದ ರಚನೆಯ
ಒಡೆಯ ತಾನೆ,
ತನ್ನದೆನ್ನುವುದಷ್ಟೆ ಅತಿ ಪ್ರಿಯ!