ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ಆದಿ ಮತ್ತು ಅಂತ್ಯ
ಒಂದೇ ಪುಟದ ಪದ್ಯ
ಹಾಡುವವನಾರೊ…
ಆಡಿಸುವವನಾರೊ…

ಶೂನ್ಯವೆಂಬುದು ನಿಂತಲ್ಲೆ
ಸಿಗುವುದೆ? ಕುಂತಲ್ಲಿ?
ಹೊರಗೆಲ್ಲಿ? … ಅದು ಒಳಗೆ.

ಹಣಕ್ಕೂ ಹೆಣಕ್ಕೂ ಸಂಬಂಧ
ಬಹಳ ಹತ್ತಿರದೆ
ಎಲ್ಲಿಗಂತ ಹೊತ್ತೊಯ್ಯುತಿ
ಮಿತಿಯ ಪರವಾನೆ … ತೀರ ಹತ್ತಿರದು.

ಶೂನ್ಯದ ಅನಂತತೆ ಅಪಾರ
ವ್ಯೂಹದ ರಚನೆಗೆಲ್ಲಿ ಸೀಮೆ
ಶೂನ್ಯದ ಅಧೋಲೋಕ
ಮನ ತಿಳಿಯಲಾರದ
ಅನಂತದ ವಿಸ್ತಾರ ರೂಪ

ಅನಂತತೆಯ ಸೃಷ್ಟಿ ಎರಡೂ ಕೂಡಿಯೆ?
ಎರಡೂ ಒಂದೇ ಅಲ್ಲವೆ!
ಎರಡರ ರೂಪ ಅದರದೆ ಸೃಷ್ಟಿಯೆ.
ಶೂನ್ಯ ಆದಿಯಾದರೆ
ಅನಂತತೆ ಅಂತ್ಯವೆ?
ಸತ್ಯ ಎಂದಿಗೂ ಅನಮ್ತ ನಿರ್ವಾತ
ಆದಿ ಅಂತ್ಯವನೆ ಮೀರಿಹುದು
ಅದು ಎಂದಿಗೂ ಅನಂತತೆಯ ಪ್ರತಿರೂಪ
….ಶೂನ್ಯವೂ ಸಹ!