ಇತ್ತೀಚಿನ ಬರಹಗಳು: ಜಿತೇಂದ್ರ ಬೇದೂರು (ಎಲ್ಲವನ್ನು ಓದಿ)
ಬಿಕರಿಗಿವೆ ಇಲ್ಲಿ ನೂರೆಂಟು ಮನಸುಗಳು,
ಮನಸು ಮಾರುವ ಸಂತೆ ಇದು.
ಖರೀದಿಸಿಬಿಡಿ ಬೇಗ,
ಬೆಲೆ ಏರೀತು ಜೋಕೆ!..
ನಿಮ್ಮ ಸಿರಿವಂತಿಕೆಗೆ
ಕೇವಲ ಒಂದೇ ಸಾಕೇ?..
ಹಿಗ್ಗುವವು,ಕುಗ್ಗುವವು,
ಬೇಕಾದಂತೆ ಬಗ್ಗುವವು,
ಸತ್ಯ,ಮಿಥ್ಯೆಗಳ ಹಂಗಿಲ್ಲ,
ಲಾಭದೆಡೆ ನುಗ್ಗುವವು.
ಎಷ್ಟು ಹೊಳೆಯುತಿವೆ ನೋಡಿ,
ಏನು ಥಳುಕು ಬಳುಕು!
(ಶ್.. ಕೆದಕಲೇ ಬೇಡಿ ಒಳಗೆ ಹುಳುಕು,
ಮುಖವಾಡದ ಬದುಕು).
ಹೆಚ್ಚಿನ ಬರಹಗಳಿಗಾಗಿ
ಹೂರಣವಿಲ್ಲದ ಹೋಳಿಗೆ
ಕನ್ನಡ ಕಾಂತಾರ..
ಒದ್ದೆ ಹಕ್ಕಿಯ ಹಾಡು ಮತ್ತು ಇತರ ಕವಿತೆಗಳು