ಇತ್ತೀಚಿನ ಬರಹಗಳು: ಜಿತೇಂದ್ರ ಬೇದೂರು (ಎಲ್ಲವನ್ನು ಓದಿ)
ಹೊಳೆವ ದೀಪದ ಹಿಂದೆ
ಸುಡುವ ಬತ್ತಿಯ ನೋವು,
ಮಿನುಗು ತಾರೆಯ ಒಡಲ
ಉರಿವ ಕೆಂಡದ ಕಾವು.
ಮುಗಿಲೆತ್ತರ ಅಲೆಗಳಡಿ
ಕಡಲ ‘ತೀರದ’ ಬಯಕೆ,
ಮರಳ ದಡದುದ್ದಕ್ಕೂ
ಮುಗಿಯದ ಕನವರಿಕೆ
ಹುಸಿ ನಗುವ ಕಂಗಳಲಿ
ತಡೆ ಹಿಡಿದ ಕಣ್ಣೀರು,
ಮನಸಲ್ಲೇ ಮುಚ್ಚಿಟ್ಟ
ನೋವುಗಳು ನೂರಾರು.
ಹಣ್ಣು, ಹೂ, ಕಾಯಿ,
ನಳನಳಿಸುವ ಚಿಗುರು,
ಅಡಿಯಲ್ಲೇ ಉಳಿದಿತ್ತು
ಪೊರೆವ, ತಾಯಿ ಬೇರು.




ಹೆಚ್ಚಿನ ಬರಹಗಳಿಗಾಗಿ
ಮುಂದುವರೆಯುವುದು ಮತ್ತು ಉದ್ದಾರ ಎನ್ನುವ ಎರಡು ಕವಿತೆಗಳು
ಅನಿರೀಕ್ಷಿತ
ಹೂರಣವಿಲ್ಲದ ಹೋಳಿಗೆ