- ಸಮಯ,ಗಡಿಯಾರ ನಿಲ್ಸಿ ಮತ್ತು ಇತರ ಕವಿತೆಗಳು - ಆಗಸ್ಟ್ 21, 2022
- MCMXIV ಸಹಿತ ಚಂಪೋ ಅನುವಾದಿಸಿದ ೪ ಕವಿತೆಗಳು - ಮಾರ್ಚ್ 6, 2022
- ಖಲೀಲ್ ಝೀಬ್ರಾನ್ ಕವಿತೆ! - ಫೆಬ್ರುವರಿ 5, 2022
೧. ದಿನಚರಿ
ಮತ್ತೊಂದು ದಿನ,
ಮತ್ತಿಷ್ಟು ಹಣ!
ಖರ್ಚಾಯ್ತು ಎಲ್ಲ!
ಬಾಡಿಗೆ ಮುಟ್ಟಿತಲ್ಲ.
ಕೆಲಸವೋ ಕಷ್ಟ!
ವೇತನ ಕನಿಷ್ಟ,
ಸುಮ್ಮನೇಕೀ ಬೇಗೆ
ಅದಿರುವುದೇ ಹಾಗೆ.
ಆಯುಷ್ಯ ಅರ್ಧ
ಸಮರ್ಪಣೆಗೆ ಸಿದ್ಧ
ಗಳಿಸಲು ಸಂಸಾರ
ಜೀವನದ ಆಧಾರ.
ಅದಕೇ, ನಿಧಾನ!
ತೊಗೊ ಮಜಾನ
ಗೊತ್ತಿಲ್ಲ ಏನೂ
ಸಾವು ಎಂದೇನ!
ಮೂಲ: Jimmy Osborne
ಕನ್ನಡಕ್ಕೆ: ಚಂಪೋ
೨. ಗಡಿಯಾರ ನಿಲ್ಸಿ:
ಗಡಿಯಾರ ನಿಲ್ಸಿ ಬಂದ್ ಮಾಡಿ ಫೋನ್
ತುಂಡ್ ಹಾಕಿ ನಿಲ್ಸಿ ನಾಯಿ ಬೊಗಳೋದನ್
ಊದದಿರಿ ಕೊಳಲು ಬಾರಿಸಬೇಡಿ ಡ್ರಮ್
ಕಟ್ಟಿ ಚಟ್ಟಕೆ ಉಕ್ಕಲಿ ಕಣ್ಣೇರಿನ ಡ್ಯಾಮ್
ತಲೆ ಮೇಲೆ ದುಂಡಗೆ ಹಾರಲಿ ಅಳುವ ಪ್ಲೇನ್
ಆಗಸದಿ ಬರೆಯಲಿ ಅವ ಸತ್ತ ಸುದ್ದೀನ್
ತೊಡಿಸಿ ಪಾರಿವಾಳದ ಕುತ್ತಿಗೆಗೆ ಬೋವ್
ಸಂಚಾರಿ ಪೊಲೀಸರ ಕೈಗೆ ಕರಿ ಗ್ಲೋವ್
ಅವ ನಂಗೆ ಪೂರ್ವ, ಪಶ್ಚಿಮ ಎಲ್ಲ ದಿಕ್
ರವಿವಾರದ ಸಡಗರ, ನನ್ ಆಫೀಸಿನ ವೀಕ್
ಮಧಾಹ್ನ, ರಾತ್ರಿ, ನನ್ ಹಾಡು, ನನ್ ಮಾತ್
ಪ್ರೀತಿ ಸಾಯದು ಅನ್ನೋ ನಂಬಿಗೆ ತಪ್ಪಾತ್
ಆರಿಸಿ ತಾರೆಗಳ ಬೇಕಿಲ್ಲ ಅವು ಏನ್
ಮುಚ್ಚಿ ಚಂದಿರನ ಕಿತ್ತಾಕಿ ಸೂರ್ಯನ್
ಬರಿದಾಗಿಸಿ ಸಾಗರಗಳ ಗುಡಿಸೀ ಜಗವನ್
ಇದ್ಯಾವ್ದೂ ಉಪಯೋಗ ಇಲ್ಲ ನನಗಿನ್
ಆಂಗ್ಲ ಮೂಲ: W H Auden
ಕನ್ನಡಕ್ಕೆ : ಚಂಪೋ
೩. ಸಮಯ
ಒಂದು ಹೆಚ್ಚಿನ ದಿನಕ್ಕೆ ಎಷ್ಟು ಕೊಡ್ತಿಯಾ?
ಹುಟ್ಟಿದ ಮಗುವನ್ನ ಸಮಯ ಕೇಳಿತು.
“ಒಂದ್ ಪೈಸೇನೂ ಇಲ್ಲ” ಮಗುವಿನ ಉತ್ತರ,
“ ನಾ ನಕ್ಕು ನಗಿಸುವ ಅಷ್ಟೂ ದಿನ ನನ್ನವೇ.”
ಒಂದು ಹೆಚ್ಚಿನ ದಿನಕ್ಕೆ ಎಷ್ಟು ಕೊಡ್ತಿಯಾ?
ಆಗಷ್ಟೇ ಹರೆಯಕ್ಕೆ ಕಾಲಿಟ್ಟ ಅದೇ ಮಗುವ ಕೇಳಿತು.
“ಏನೋ ಒಂದೆರಡು ರೂಪಾಯಿ ಅಷ್ಟೆ,
ನನ್ನವೇ ಬಹಳಷ್ಟು ದಿನಗಳಿವೆ ನನ್ಹತ್ರ.”
ಒಂದು ಹೆಚ್ಚಿನ ದಿನಕ್ಕೆ ಎಷ್ಟು ಕೊಡ್ತಿಯಾ?
ಸಾವಿನಂಚಿನಲ್ಲಿ ಸಮಯ ಕೇಳಿತು.
“ಎಲ್ಲಾ ಸಾಗರದ ಅಷ್ಟೂ ಮುತ್ತುಗಳು,
ಬಾನಲಿ ಮಿನುಗುವ ಆ ತಾರೆಗಳು.”
ಮೂಲ: Shell Silverstein
ಕನ್ನಡಕ್ಕೆ : ಚಂಪೋ
೪. ಯಾರೂ
ಯಾರೂ ನನ್ನ ಪ್ರೀತಿಸಲ್ಲ
ಯಾರೂ ಚಿಂತಿಸಲ್ಲ
ಯಾರೂ ನನಗೆ ಹಣ್ಣು ಹಂಪಲು ತರಲ್ಲ
ಯಾರೂ ಮಿಠಾಯಿ ಮಿಂಟು ತಗೋ ಅನಲ್ಲ
ಯಾರೂ ನನ್ನ ಹಾಸ್ಯಕ್ಕೆ ಮನಬಿಚ್ಚಿ ನಗಲ್ಲ
ಯಾರೂ ಜಗಳವಾದಾಗ ಬಂದು ಸಹಾಯ ಮಾಡಿಲ್ಲ
ಯಾರೂ ರಾತ್ರಿ ಬಂದು ನನ್ನ ಮನೆ ಕೆಲಸ ಮುಗಿಸಿಲ್ಲ
ಯಾರೂ ನನ್ನ ನೆನೆಸಲ್ಲ
ಯಾರೂ ಅಳಲ್ಲ
ಯಾರಿಗೂ ನಾ ಒಳ್ಳೆಯವನು ಅನ್ನೋ ಅಭಾವನೆಯಿಲ್ಲ
ಯಾರು ನನ್ನ ಗೆಳೆಯ ಅಂತ ಯಾವಾಗಾದ್ರೂ ಕೇಳಿ,
ಎದ್ದುನಿಂತು ನಾ ಹೇಳೋದು ಅಷ್ಟೇ, ಯಾರೂ ಇಲ್ಲ!.
ಆದ್ರೆ, ನಿನ್ನೆ ರಾತ್ರಿ ತುಂಬಾ ಭಯವಾಯ್ತು ಕಣ್ರೀ !
ಯಾಕೋ ಎಚ್ಚರವಾಯ್ತು ಯಾರೂ ಅಲ್ಲಿ ಇರಲಿಲ್ಲ,
ಕೂಗಿ ಕರೆದರೂ, ಯಾರೂ ಬಂದು ಕೈ ಹಿಡಿಯಲಿಲ್ಲ
ಕಾರ್ಗತ್ತಲಲ್ಲಿ ಯಾರೂ ನಿಲ್ಲರು, ಅಂಥ ಜಾಗದಲ್ಲಿ.
ಪೂರ್ತಿ ಮನೆಯ ಮೂಲೆ ಮೂಲೆಗೂ ಎಡತಾಕಿದೆ
ಪ್ರತಿ ಹುಡುಕಾಟದಲ್ಲೂ ಯಾರು ಯಾರನ್ನೋ ಕಂಡೆ,
ದಣಿವಾಗುವವರೆಗೂ ಹುಡುಕುತ್ತಲೇ ಇದ್ದೆ, ಮತ್ತೆ
ಸಂಜೆಯಾಗುತ್ತಲೇ, ಅನುಮಾನವೇ ಇಲ್ಲ
“ಯಾರೂ” ಇಲ್ಲ!
ಮೂಲ: Shell Silverstein
ಕನ್ನಡಕ್ಕೆ: ಚಂಪೋ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ