ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಖಲೀಲ್ ಝೀಬ್ರಾನ್ ಕವಿತೆ!

ಅದೇನೋ ಹೇಳ್ತಾರಲ್ಲ, ಸಾಗರ ಸೇರುವ ಮುಂಚೆ ನದಿಗೂ ನಡುಕವಂತೆ!!
ಚಂಪೋ

ಅದೇನೋ ಹೇಳ್ತಾರಲ್ಲ,
ಸಾಗರ ಸೇರುವ ಮುಂಚೆ
ನದಿಗೂ ನಡುಕವಂತೆ!!

ಹಿಂತಿರುಗಿ, ತಾ ಹರಿದುಬಂದ
ದಾರಿಯನ್ನೊಮ್ಮೆ ನೋಡಿದಾಗ,
ಬೆಟ್ಟದ ತುದಿಯಿಂದ ಜಾರಿ ಅದೆಷ್ಟೋ
ಅಂಕುಡೊಂಕು ತಿರುವು, ಪ್ರಪಾತ
ಕಾಡು-ಮೇಡು ಊರುಗಳೇ ದಾಟಿವೆ.

ಮುಂದೇನಿದೆ?
ವಿಶಾಲ ವಿಸ್ಮಯ ಸಾಗರ
ಸೇರಿ ಕಣ್ಮರೆಯಾಗಬೇಕಷ್ಟೆ
ಬೇರೆ ದಾರಿಯೇನಿದೆ? ನದಿಗೆ ?
ಹಿಂದೆ ಹರಿಯಲಾಗದು!
ನಮಗೂ ಹಿಂದಿರುಗಲಾಗದೂ
ದಾಟಿ ಬಂದ ಅಸ್ತಿತ್ವಕ್ಕೆ!

ಅಪಾಯ ತಪ್ಪಿದ್ದಲ್ಲ, ಆದರೆ
ನದಿಗೆ, ಎದುರಿಸದೇ ವಿಧಿಯಿಲ್ಲ!
ಆಗಲೇ ಅಲ್ಲವೇ ಹರಿವುದು ಭಯ!
ಆಗಲೇ ತಾನೆ ಬರುವುದು,
“ಸಾಗರ ಸೇರಿ ಕಣ್ಮರೆಯಾಗುವುದಲ್ಲ
ಸಾಗರವೇ ತಾನಾಗುವುದು” ಎಂಬ ಅರಿವು!

ಕನ್ನಡ ಅನುವಾದ- ಚಂಪೋ