- ಪೊರೆವ ತಂದೆ - ಜುಲೈ 8, 2024
- ತರಗತಿ ಕೋಣೆ - ಡಿಸಂಬರ್ 31, 2023
- ಸರ್ವಧರ್ಮ ಸಮನ್ವಯ - ನವೆಂಬರ್ 4, 2023


ದಯೆಯ ಬೋಧಿಸದ ಧರ್ಮವಿರದು ಜಗದಿ
ಮೂಲ ಮಂತ್ರ ಒಂದೇ ಸೌಹಾರ್ದತೆ ನಿಜದಿ
ತಂತ್ರ ಮಂತ್ರಗಳ ನೆಪದಿ ಕಟ್ಟಿಹರು ಗಡಿಯ
ಕಲ್ಮಶಗಳ ಕಿತ್ತೊಗೆದು ಬೆಳಗಿ ಎದೆಯ ಗುಡಿಯ
ಜಗವ ಕುಟುಂಬವೆಂದ ಧೀಮಂತ ಮಣ್ಣಿದು
ಅಂಗುಲಿಮಾಲನ ಅಪ್ಪಿದ ಬುದ್ಧನ ನೆಲೆಯಿದು
ಆತ್ಮದಿ ಭೇದವ ಕಾಣದ ಜಿನನ ಬೀಡಿದು
ಎಲ್ಲರೂ ದೇವರ ಮಕ್ಕಳೆಂದ ನಾನಕರ ನಾಡಿದು
ಹೊಲಗೇರಿ ಶಿವಾಲಯಕೆ ನೆಲವೊಂದೆಂದ ವಚನ
ಕುಲವೆಂದು ಬಡಿದಾಡದಿರೆಂಬ ದಾಸ ಕೀರ್ತನ
ಸರ್ವಧರ್ಮವ ಸತ್ಯ ಸಮವೆಂದ ವಿವೇಕವಾಣಿ
ಬೆಳಗು ಅರಿವ ಜ್ಯೋತಿ ಆತ್ಮೋನ್ನತಿಯ ಏಣಿ
ಈ ಮಣ್ಣಲಿ ಬೆರೆತಿದೆ ಇಸ್ಲಾಂನ ಶ್ರೇಷ್ಠ ತತ್ವ
ಸೋದರತೆ ಹೆಚ್ಚಿಸಿದೆ ಈ ನೆಲದ ಸತ್ವ
ಪ್ರೀತಿಯ ಸಾರುವ ಶಿಲುಬೆಯ ಸಂದೇಶ
ನೀರೆರೆದಿದೆ ಮನುಜತ್ವಕೆ ಬಯಸಿ ಸರ್ವರ ಹಿತ
ಸುವಿಚಾರಗಳೆಲ್ಲ ನದಿಗಳು ಬೆರೆತ ಶರಧಿಯಂತೆ
ಆಳ ಅಗಲಗಳ ಅರಿತವ ನಿಜದಿ ಜ್ಞಾನಿಯಂತೆ
ಎಲ್ಲವೂ ಒಂದೇ ಬಳ್ಳಿಯ ಹಲವು ಸುಮಗಳಂತೆ
ಸೇರುವ ನೆಲೆಯೊಂದೇ ದೇವನ ಪಾದದಡಿಯಂತೆ
ಅರಿತು ಬಾಳಿದರೆ ಸಕಲ ಧರ್ಮಗಳ ಸಾರ
ದ್ವೇಷ ಅಳಿದು ಬದುಕು ಬಲು ಸಸಾರ
ರಾಮ-ರಹೀಮ, ಕನಕ-ಕಬೀರರೆಲ್ಲ ನಮ್ಮವರೆ
ಸತ್ಯದರ್ಶನವ ಸಂಧಿಸಿ ತಾರೆಗಳಾಗಿ ಮೆರೆದವರೆ
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು