- (ಹುಸಿ)ನಿರೀಕ್ಷೆ - ಜನವರಿ 22, 2022
- ಇನ್ನೇನು ಬೇಕಿದೆ…? - ಏಪ್ರಿಲ್ 6, 2021
- ರಮ್ಯ- ಬಿಂದು - ಜನವರಿ 21, 2021
ಈಗೀಗ ಮಾತೆತ್ತಿದರೆ ನಿನ್ನ ಕೈಗೊಂಬೆ
ಯಾಗಿಬಿಟ್ಟಿದ್ದೇನೆ ಅಂತೀಯಲ್ಲಾ;
ನಮ್ಮೊಳಗೆ ಅಡಗಿರೋ ಮನಸನ್ನೇ ಕಟ್ಟಿ ಹಾಕೋದಕ್ಕೆ ಆಗದವರು ನಾವು.,
ಇನ್ನು ಕಣ್ಣಳತೆಗೂ ಸಿಗದಷ್ಟು ದೂರ ಇರುವ
ನಿನ್ನನ್ನು ಕಟ್ಟಿ ಹಾಕುವುದಾದರೂ ಸಾಧ್ಯವಿರುವ ಮಾತಾ?
ನಿಜಕ್ಕೂ ಇದು ಅ ಸಾಧ್ಯವಾ?
ಎಂದಾದರೂ ಸರಿಯಾಗಿ ಸಿಕ್ಕಿದ್ದರೆ
ಬಂಧಿಸಿ ಬಿಡುತ್ತಿದ್ದೆ. .
ದೂರುಗಳ ದೊಡ್ಡ ಪಟ್ಟಿಯೇ ಇದೆ
ಜೀವಾವಧಿ ಶಿಕ್ಷೆಯಂತೂ ಪಕ್ಕಾ!
ಜಾಮೀನು ಸಿಗದ ಆರೋಪಿ ನೀನು
ಅದಕ್ಕೇ ಇರಬೇಕು ಹೀಗೆ
ತಲೆ ಮರೆಸಿಕೊಂಡು ಓಡಾಡುವುದು..
ಮನದ ಎಲ್ಲ ಮೂಲೆಯಲ್ಲೂ
ನಿನ್ನದೇ ತಸ್ವೀರ್ ಅಂಟಿಸಿ ಹುಡುಕುತ್ತಿದ್ದೇನೆ,
ರಾಜಿಗೆ ಬಂದರೆ ಎಲ್ಲ ಸಜಾನೂ ಮಾಫಿ.
ನಿನ್ನೊಂದಿಗಿನ ಸಂಜೆ ರವಿಯನ್ನು ಸೆರೆಹಿಡಿವ
ವ್ಯರ್ಥ ಪ್ರಯತ್ನಗಳು ನಡೆದೇ ಇದೆ.,
ಲೆಕ್ಕವಿಟ್ಟಿಲ್ಲ;
ಸೆರೆಗೆ ಸಿಗದ ಅದೆಷ್ಟೋ ಸಂಗತಿಗಳಿವೆ.
ಬರುವ ಶಿಶಿರದಲ್ಲಾದರೂ ಬಯಸಿದ ಹೂವರಳೀತು.,
ಬಾಡುವ ಭಯವಿಲ್ಲ,
ಹುಸಿ ನಿರೀಕ್ಷೆಗಳೇ ತಾನೆ ಭರವಸೆಯ ಬುನಾದಿ..
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ