- ಸಸ್ಯ ವೈಶಿಷ್ಟ್ಯ - ಮೇ 3, 2020
ಜುಮ್ಮನಮರ
Zanthoxylum Thetsa (Indian pepper )
ಬಹುತೇಕ ಅರಣ್ಯದಲ್ಲಿ ಕಂಡುಬರುವ ಬಹಳ ಮುಳ್ಳಿನ ಮರವಾಗಿದೆ.
ಬಹಳ ಹಗೂರಮರವಾದ ಇದರ ಮುಳ್ಳನ್ನು ಯಕ್ಷಗಾನ ಆಭರಣ ತಯಾರಿಕೆಯಲ್ಲಿ ಬಳಸೋದು ಹೆಚ್ಚು.
ವಯಸ್ಸಾದ ಮರವು ತನ್ನಷ್ಟಕ್ಕೆ ದೊಡ್ಡದೊಡ್ಡ ಮುಳ್ಳನ್ನ ಉದುರಿಸುತ್ತದೆ.
ಕಾಳುಮೆಣಸಿನ ಪರಿಮಳವುಳ್ಳ ಇದರ ಬೀಜವನ್ನು ಸಂಬಾರ ವಸ್ತುವಾಗಿ ಬಳಸ್ತಾರೆ.
ಬೀದಿ ಮಾರುಕಟ್ಟೆಯಲ್ಲಿ ಸಿಗುವ ಇದನ್ನ ಮಾಂಸಾಹಾರಕ್ಕೆ ಹೆಚ್ಚು ಬಳಸ್ತಾರೆ ಅಂತ ಕೇಳಿದ್ದೆ.
ಬೀಜವನ್ನು ಬಾಯಲ್ಲಿ ಜಗಿದರೆ ಎಷ್ಟೋ ಹೊತ್ತು ಜುಮುಜುಮು ಆಗಿ ನಾಲಿಗೆ ಮರಗಟ್ಟಿದ ಅನುಭವ ಆಗುತ್ತದೆ.
ಹಿತಮಿತವಾಗಿ ಉಪ್ಪಿನಕಾಯಿ ಮತ್ತು ಸಂಬಾರಿಗೆ ಅಲ್ಪಪ್ರಮಾಣದಲ್ಲಿ ಬಳಸಲು ಯೋಗ್ಯವಾಗಿದೆ.
ಬಹಳ ಉಷ್ಣಗುಣದಿಂದ ಕೂಡಿ ನೆಗಡಿ ಅಜೀರ್ಣ. ಅಸ್ತಮಾ ಉಸಿರಾಟ ಸಮಸ್ಯೆಗೆ ಔಷಧಿ ಮೂಲವೂ ಹೌದು.
ಬಿಳಿಮುಳ್ಳಹಣ್ಣು
(ZIZIPHUS RUGOSA)
ಕುರುಚಲು ಅರಣ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಮುಳ್ಳಿನ ಬಳ್ಳಿಯಾಗಿದೆ.
ಎಪ್ರಿಲ್ ಮೇ ತಿಂಗಳಲ್ಲಿ ಇದರ ಹಣ್ಣುಗಳನ್ನು ತಿನ್ನುವುದು ಎಂದರೆ ಎನೊ ಖುಷಿ.
ಒಂದು ಬೀಜ ಇರುವ ಮೆತ್ತನೆಯ ಮೈಯುಳ್ಳ ರವೆರವೆಯಾದ ಹಾಗೂ ಸಿಹಿಯಾದ ಹಣ್ಣು.ಈ ಗಿಡದ ತೊಗಟೆ ಧಾತುಪುಷ್ಟಿ ಖಷಾಯಕ್ಕೆ ಬಳಸ್ತಾರೆ.
ಹಣ್ಣಿನಲ್ಲಿ ಸಹ ಪೌಷ್ಟಿಕ ಶಕ್ತಿ ಅಡಗಿದೆ.
ರಾಮಪತ್ರೆ
ಈ ವರ್ಷದ ಹೊಸ ಫಲ
ಮಲೆನಾಡಿನಲ್ಲಿ ಬಹುತೇಕ ಕಡೆ ಅರಣ್ಯವಾಸಿಯಾದ ಈ ಬೇಳೆ ನೆಟ್ಟು ಸಹ ಮಾಡಬಹುದು.
ಬೀಜದ ಗಿಡ ಸುಮಾರು ಎಳೆಂಟು ವರ್ಷಕ್ಕೆ ಫಲ ಬರುವದು. ಇದರ ಕಸಿ ಸಹ ಮಾಡಬಹುದು.
ಅಧಿಕ್ರತ ಮಾರುಕಟ್ಟೆ ಇಲ್ಲದಿದ್ದರು ಖರೀದಿ ಇದೆ.
ಇದು ಹತ್ತು ತಿಂಗಳ ಬೆಳೆ .ಬಹುಶಃ ಇದು ಬಣ್ಣ ಮತ್ತು ಸಂಬಾರ ಪದಾರ್ಥಕ್ಕೆ ಬಳಸಬಹುದು.
ಈ ವರ್ಷ 500 rs ಕೆ ಜಿ ಗೆ ಬೆಲೆ ಇದೆ.
ಬೆಳೆದ ಮರದಲ್ಲಿ ಸರಾಸರಿ ಎಳೆಂಟು ಕಿಲೊ ಪತ್ರೆ ಸಿಗುವದು. ನೂರಾರು ವರ್ಷ ಬಾಳುವ ಈ ಮರದಲ್ಲಿ 10 /15 ಕೆಜಿ ಪತ್ರೆ ಸಿಗುತ್ತದೆ. ಲಾಭದಾಯಕ ಅನಧಿಕೃತ ಅರಣ್ಯ ಕ್ರಷಿ
ಶ್ರೀತಾಳೆ
ಪುರಾತನ ಕಾಲದಲ್ಲಿ ಇದು ಪುಸ್ತಕದ ಹಾಳೆಯಾಗಿತ್ತು.ಇದನ್ನ ಸಂಸ್ಕರಿಸಿ ಇದರ ಮೇಲೆ ಬರೆದಿಟ್ಟ ಅಕ್ಷರ ನೂರಾರು ವರ್ಷ ಕಳೆದರು ಹಾಗೇ ಇದೆ.
ಗ್ರಾಮೀಣ ಭಾಗದಲ್ಲಿ ಈಗಲೂ ಕೆಲವರು ಮಳೆಗಾಲದಲ್ಲಿ ಕೆಲವು ಹೊದಿಕೆಯಸಲುವಾಗಿ ಬಳಸ್ತಾರೆ.ಹಿಂದೆ ಇದರ ಮರದ ಹಿಟ್ಟನ್ನೂ ಸಹ ತಿಂಡಿಗಾಗಿ ಬಳಸ್ತಾಇದ್ದರಂತೆ.
ಈಗ ಇದರ ಬಳಕೆ ಬಹಳ ಕಮ್ಮಿಯಾಗಿದೆ.
ಐವತ್ತು ವರ್ಷಗಳನಂತರ ಕೆಲವು ಮರಕ್ಕೆ ಗೊನೆಬಂದು ಅಪಾರ ಪ್ರಮಾಣದಲ್ಲಿ ನೆಲ್ಲಿಕಾಯಿಯಂತ ಗಟ್ಟಿಬೀಜವಾಗಿ ಮರ ಸಾಯುತ್ತದೆ.
ಕಾಡುಪೇರಳೆ
Lawulu fruit ಹಾಲೆ ಹಣ್ಣು ಮೇಣಪೇರಳೆ Indian star apple chrysophyllum Roxburghil
ಅಪರೂಪವಾಗುತ್ತಿರುವ ಕಾಡು ಹಣ್ಣಿನಲ್ಲಿ ಇದೂ ಸಹ.
ಎತ್ತರದ ಮರವಾಗುವ ಇದರಲ್ಲಿ ಮಾರ್ಚ ಎಪ್ರಿಲ್ ತಿಂಗಳಲ್ಲಿ ಹಣ್ಣಾಗಿ ನೆಲಕ್ಕೆ ಉದುರುತ್ತದೆ. ಅಳಿಲು ಮಂಗ ಇನ್ನೂ ಅನೇಕ ಪ್ರಾಣಿಗಳು ತಿನ್ನುವುದರಿಂದ ಹಣ್ಣು ಸಿಗುವುದು ಸಹ ಕಡಿಮೆ.
ಹಣ್ಣಿನ ಹೊರಭಾಗದಲ್ಲಿ ಬಹಳ ಮೇಣದಿಂದ ಕೂಡಿರುತ್ತದೆ.
ವಿಶಿಷ್ಟವಾದ ಪರಿಮಳ ಹೊಂದಿರುವ ಈ ಹಣ್ಣು ಸಿಹಿರುಚಿ ಹೊಂದಿದೆ.
ಸಾಮಾನ್ಯವಾಗಿ ಸೇಬು / ಎಗ್ ಪ್ರೂಟ್ /ರಾಮಫಲದ ಹಣ್ಣಿನಂತ ಹೋಲಿಕೆ ತಿರುಳನ್ನ ಹೊಂದಿದೆ.
ಒಂದು ತಿಂದಾಗ ಮತ್ತೊಂದು ತಿನ್ನಬೇಕೆಂದು ಅನಿಸುವ ಹಣ್ಣು.ಜೀರ್ಣಕ್ರಿಯೆಗೆ ಮತ್ತು ದೇಹ ತಂಪಾಗಲು ತುಂಬಾ ಒಳ್ಳೆಯದು
ಬದಲಾದ ಪರಿಸ್ಥಿತಿಯಲ್ಲಿ ಗಿಡಮರಗಳ ಬಗ್ಗೆ ಅವಿನಾಭಾವ ಸಂಬಂಧ ಇಟ್ಟುಕೊಂಡು ನೈಸರ್ಗಿಕವಾಗಿ ಬದುಕುವ, ತನ್ಮೂಲಕ “ಮರಳಿ ಮಣ್ಣಿಗೆ” ಮಾದರಿ ಮತ್ತೆ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಈ ನಡುವೆ ಪ್ರಕೃತಿಯ ಮಡಿಲಲ್ಲಿ ಇದ್ದುಕೊಂಡು ಅಪರೂಪದ, ಅರಿಯದ ಸಸ್ಯಗಳ ಬಗ್ಗೆ ಮಾಹಿತಿ ನೀಡುವ ಹವ್ಯಾಸ ಯಲ್ಲಾಪುರದ ಸೃಜನಶೀಲ ಕೃಷಿಕ ಶ್ರೀಕೃಷ್ಣ ಭಟ್ ಅವರದು. ಅವರು ಕಲೆಹಾಕಿದ ನೂರಾರು ಮಾಹಿತಿಗಳಲ್ಲಿ ಆಯ್ದ 5 ಜಾತಿಯ ಗಿಡಗಳ ಬಗ್ಗೆ ಇಲ್ಲಿ ಬರೆಯಲಾಗಿದೆ.
ಹೆಚ್ಚಿನ ಬರಹಗಳಿಗಾಗಿ
ಸಿಂಪಲ್ಲಾಗಿ ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ
ಮಂಗಳನ ಅಂಗಳದಲ್ಲಿ ಪರ್ಸಿವರೆನ್ಸ್!
ಮಾತೃಭಾಷೆ ಮತ್ತು ಶಿಕ್ಷಣ