ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಂಗಳನ ಅಂಗಳದಲ್ಲಿ ಪರ್ಸಿವರೆನ್ಸ್!

ರಾಜೀವ್

ಮೊನ್ನೆ ಫೆಬ್ರವರಿ 18ರಂದು ಪರ್ಸಿವರೆನ್ಸ್ ಎಂಬ ಮತ್ತೊಂದು ರೋವರ್ ಮಂಗಳ ಗ್ರಹದ ಅಂಗಳವನ್ನು ಮುಟ್ಟಿತ ಕಳದ ವರ್ಷ ನಾಸಾ ಉಡಾವಣೆ ಮಾಡಿದ ಈ ರೋವರ್ ಸತತ 9 ತಿಂಗಳ ಪ್ರಯಾಣದೊಂದಿಗೆ ಅಲ್ಲಿ ಈದೀಗ ಇಳಿದಿದೆ.

ಪರ್ಸಿವರೆನ್ಸ್ ಮುಖ್ಯ ಉದ್ದೇಶ ಮಂಗಳ ಗ್ರಹದಲ್ಲಿ ಪುರಾತಣ ಕಾಲದಲ್ಲಿ ಜೀವಿಗಳ ಕುರುಹನ್ನು ಪತ್ತೆ ಹಚ್ಚುವುದಾಗಿದೆ. ಉಪಗ್ರಹ ಉಡಾವಣೆ ಮಾಡುವ ಮುಂಚಿನಿಂದಲೂ ಮಂಗಳನಲ್ಲಿ ಜೀವಿಗಳ ಇರಬಹುದು ಅಥವಾ ಇತ್ತು ಎಂಬ ವಿಜ್ಞಾನಿಗಳ ಸಂದೇಹ ಇದರೊಂದಿಗೆ ಒಂದು ಹಂತ ತಲುಪಲಿದೆ.

ಎಲ್ಲಾ ರೋವರಿನಂತೆ ಕೇವಲ ಬೇರೆ ಗ್ರಹದ ಮೇಲೆ ಓಡಾಡಿ ಅಲ್ಲಿನ ಫೋಟೋ ತೆಗೆದು ಕೆಲ ಪ್ರಯೋಗ ನಡೆಸೋದು ಮಾತ್ರವಲ್ಲದೆ ಪರ್ಸಿವರೆನ್ಸ್ ಇನ್ನು ಹಲವು ಕೆಲಸ ಮಾಡಲಿದೆ. ಅದರ ಮೊದಲ ಉದ್ದೇಶ ಅಲ್ಲಿನ ಸ್ಯಾಂಪಲ್ ಅನ್ನು ಸಂಗ್ರಹಿಸಿ ಭೂಮಿಗೆ ರವಾನಿಸೋದು ಆಗಿದೆ.

ಮಂಗಳನಲ್ಲಿ ಹಿಂದೊಮ್ಮೆ ನದಿ, ಕೆರೆಗಳು ಇದ್ದ ಕುರುಹುಗಳು ಇದ್ದು ಜೀವಿಗಳ ಇರುವಿಕೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಸುಮಾರು ಒಂದು ಕಾರ್ ಗಾತ್ರದ ಹಾಗು ಒಂದು ಟನ್ ತೂಕವಿರೋ ಈ ರೋವರ್ ಇದನ್ನು ಖಚಿತಪಡಿಸಲಿದೆ.

ಆದರೆ ಇಲ್ಲೊಂದು ಸಮಸ್ಯೆಯಿದೆ ರೋವರ್ ಸ್ಯಾಂಪಲ್ ಅನ್ನು ಸಂಗ್ರಹಿಸುತ್ತೆ ಆದರೆ ಅದು ನಮ್ಮನ್ನು ತಲುಪೋದು ಮಾತ್ರ 2031ರಲ್ಲಿ! ಕಾರಣ ಮಾತ್ರ ಹಲವಾರು ಒಂದು ಪರ್ಸಿವರೆನ್ಸಿಗೆ ಇದು ಒನ್ ವೇ ಟ್ರಿಪ್! ಅದು ಎರಡು ವರ್ಷದ ನಂತರ ನಿಷ್ಕ್ರಿಯ ಗೊಳಿಸಲಾಗುತ್ತದೆ., ಮತ್ತೊಂದು ಕಾರಣವಿದೆ ಅಂತರಾಷ್ಟ್ರೀಯ ಗ್ರಹಾಂತರ ನಿಯಮಗಳಂತೆ ನಾಸ ಗ್ರಹಗಳನ್ನು ಐದು ಕ್ಯಾಟಗರಿಯಾಗಿ ವಿಂಗಡಿಸಲಾಗಿದೆ.

ಮೊದಲನೆ ಕ್ಯಾಟಗರಿ ಗ್ರಹ ಅಥವಾ ಉಪಗ್ರಹವೆಂದರೆ ಅವುಗಳಲ್ಲಿ ಜೀವ ಇರುವ ಯಾವುದೇ ಲಕ್ಷಣವಿಲ್ಲದ, ಸುಳಿವಿಲ್ಲದ ಗ್ರಹಗಳು ಅಂತ ಈ ಕ್ರಮಾಂಕ ಕ್ರಮೇಣ ಹೆಚ್ಚಾಗುತ್ತೆ. ಅದೇ ಐದನೆ ಕ್ಯಾಟಗರಿ ಗ್ರಹದಲ್ಲಿ ಜೀವ ಇರೋ ಸುಳಿವೊ ಹೆಚ್ಚು ಅಂತ.

ನಮ್ಮ ಚಂದ್ರ ಕ್ಯಾಟಗರಿ 1 ರಲ್ಲಿ ಬರುತ್ತೆ ಕಾರಣ ಅಲ್ಲಿ ಜೀವಿಗಳೆ ಇಲ್ಲ ಎಂಬ ಖಚಿತತೆ ಆದರೆ ಮಂಗಳ ಗ್ರಹ ಕ್ಯಾಟಗರಿ 5ರಲ್ಲಿದೆ. ಅಂದರೆ ಜೀವಸಂಕುಲದ ಕುರುಹು ಅತ್ಯಂತ ಹೆಚ್ಚು ಅಂತ ಅದನ್ನು ಹೊರತುಪಡಿಸಿ ಗುರು ಹಾಗು ಶನಿಯ ಮೂರು ಉಪಗ್ರಹ ಐದನೇ ಕ್ಯಾಟಗರಿಯಲ್ಲಿದೆ.

ಯಾಕೇ ಹೀಗೆ? ಇದಕ್ಕೆ ಕಾರಣ ನಾವು ಅಥವ ಭೂಮಿಯಿಂದ ಹೋದ ಯಾವುದೇ ವಸ್ತು ಅಲ್ಲಿ ವಾತವರಣವನ್ನು ಸೇರಿದರೆ ಒಂದುವೇಳೆ ಆ ವಸ್ತುವಿನಲ್ಲಿ ನಮ್ಮ ಭೂಮಿಯ ಸಣ್ಣ ಏಕ ಕೋಶ ಜೀವಿಯಿದ್ದರೂ ಸಾಕು ಅಲ್ಲಿನ ವಾತವರಣ ಮಲಿನವಾಗುತ್ತೆ.

ಇದರ ಪರಿಣಾಮ ಆ ಗ್ರಹ ಜೀವಿಗಳನ್ನು ನಾಶ ಮಾಡಬಹುದು ಇದೇ ಕಾರಣಕ್ಕೆ ರೋವರ್ ಅಲ್ಲಿ ಕಳಸುವಾಗ ಜಾಗ್ರತೆ ವಹಿಸಲಾಗುತ್ತೆ ಇದಲ್ಲದೆ ಅಲ್ಲಿನ ಯಾವುದೇ ಜೈವಿಕ ವಸ್ತು ಭೂಮಿ ತಲುಪಿದರು ಅದು ನಮಗೆ ಸಹ ಅಪಾಯಕಾರಿ ಅದೇನಾದರು ಮಾರಣಾಂತಿಕ ವೈರಸ್ ಅಥವ ಬ್ಯಾಕ್ಟೀರಿಯ ಆಗಿದ್ದರೆ ಅದರ ಕನಿಷ್ಟ ಜೀನೊಯಿಕ್ ಸೀಕ್ವೆನ್ಸ್ ಸಿಗದೆ ನಾವೆಲ್ಲ ಸಾಯಬಹುದು.

ಇವೆಲ್ಲ ಅಪಾಯಕಾರಿ ಸಂಗತಿ ಹಿಡಿದ ರೋವರ್ ಸಂಗ್ರಹಿಸಿ ಸ್ಯಾಂಪಲ್ ಅನ್ನು ಹಲವು ನಿಯಮಗಳ ಅನುಸಾರವಾಗಿ ಜಾಗೃತೆವಹಿಸಿ ತರಬೇಕು ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಜೀವಿಗಳಿದ್ದರೆ ನಮ್ಮ ಇತಿಹಾಸದಲ್ಲಿ ಹೊಸ ಅಲೆ ಶುರುವಾಗಲಿದೆ ಬೇರೆ ಗ್ರಹದಲ್ಲಿ ಜೀವಿಗಳನ್ನು ಕಂಡ ಮೊದಲ ಜೆನರೇಶನ್ ನಮ್ಮದಾಗುತ್ತೆ ಹಾಗು ಬಹುದಿನ ನಮ್ಮ ಪ್ರಶ್ನೆಯಾದ ಅನ್ಯಗ್ರಹ ಜೀವಿಗಳಿವೆಯೆ? ಪ್ರಶ್ನೆಗೆ ಉತ್ತರ ಸಿಗಲಿದೆ.

ಮುಗಿಸೋ ಮುನ್ನ ಇದರ ಸಂಪೂರ್ಣ ಯಶಸ್ವಿ ನಮ್ಮ ಭಾರತೀಯರಾದ ಸ್ವಾತಿ ಮೋಹನ್ ರವರಿಗೆ ಸಲ್ಲುತ್ತದ ಅದರ ನ್ಯಾವಿಗೇಶನ್ ರುವಾರಿ ವಹಿಸಿದ್ದ ಇವರು ಅದು ಲ್ಯಾಂಡಿಂಗ್ ಆಗಿದ್ದನ್ನು ಸಹ ಮೊದಲು ತಿಳಿಸಿದ್ದು ಇವರೇ ಭಾರತದ ಸ್ತ್ರೀಯರ ಗೌರವವನ್ನು ಸ್ವಾತಿಯವರು ಇನ್ನು ಆಗ್ರ ಸ್ಥಾನಕ್ಕೆ ಏರಿಸಿರೋದು ನಮಗೆಲ್ಲ ಹೆಮ್ಮೆಯ ಸಂಗತಿ.