ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಜ ಮಹಾರಾಜ

ಮೀರಾ ಜೋಶಿ
ಇತ್ತೀಚಿನ ಬರಹಗಳು: ಮೀರಾ ಜೋಶಿ (ಎಲ್ಲವನ್ನು ಓದಿ)

ಕುಶಾಗ್ರಮತಿಯರಾಟದಲಿ
ನಾ ಕಾಲಾಳು
ಚತುಷಷ್ಟಿ ಚೌಕಗಳಲಿ ಓಡಾಟ ಇಲ್ಲಿ
ಕಲ್ಲು ಮುಳ್ಳು ಕಣಿವೆ ಪರ್ವತಗಳಲಿ
ಪ್ರಾಣ ಪಣಕಿಡುವೆ ಅಲ್ಲಿ

ಕಪ್ಪಾದರೇನು ಬಿಳುಪಾದರೇನು
ಅಲ್ಲಿಯೂ ಇಲ್ಲಿಯೂ
ನನ್ನವರ ಕಾಪಾಡುವುದೇ ನನ್ನ ಉಸಿರು.

ಉಸಿರಿದೆ ಹೃದಯ ಮಿಡಿಯುತಿದೆ
ಮನ ಹೇಳುತಿದೆ ನೀನು ಸಜೀವಿ
ಅಂತೆಯೇ ಎಲ್ಲರ ಜೀವದ ಅರಿವಿದೆ
ನನ್ನ ಭೂಮಿ ನನ್ನ ಜನ ನನ್ನ ಪ್ರಾಣ
ಮಳೆ ಚಳಿ ಬಿಸಿಲೆನಗೆ ತೃಣ

ಕಾದುವೆ ನನ್ನವರ ಮನೆಗಳಲಿ
ದೀಪ ಬೆಳಗಲೆಂದು
ನಿರ್ಭಯದ ನಿದ್ರೆ ಪೊಂದಲೆಂದು
ನಾನೊಬ್ಬ ರಕ್ಷಕ
ಸ್ವಂತ ಸುಖವೆನಗೆ ಕ್ಷುಲ್ಲಕ

ರುಧಿರದ ಕಣ ಕಣದಲ್ಲಿಯ ಶೌರ್ಯ
ತಡೆಯಿತು ಉತ್ತರದಲ್ಲಿಯ ಕ್ರೌರ್ಯ

ಭಯ ನಿವಾರಿಸುತ ಜಯವ ಗಳಿಸುತ
ಸಾರ್ಥಕತೆಯ ಅನುಭವಿಸುತ
ಗರ್ವದಿಂದ ನೋಡಿದೆ ತನುವಿನೆಡೆಗೆ
ನಿಂತಿದೆ ಒಂದೇ ಕಾಲಿನಾಧಾರದಲಿ
ಭುಜವಾಗಿದೆ ನಿರಾಧಾರ

ಭಯವಾದರೂ ಹೊಸರೂಪವ
ಕನ್ನಡಿಯಲಿ ಕಂಡೆ
ಅದು ಹೇಳಿತು
ನೀನಲ್ಲ ಅಪಾಂಗ ಅತಿ ಸುಂದರಾಂಗ
ಮತ್ತೆ ಗಟ್ಚಿಯಾಗಿ ಹೇಳಿತು
ವಾಜಿಯಲಿ ರಾಜಿಮಾಡದೆ
ಜಯವ ತಂದ ನೀನೇ ರಾಜ ಮಹಾರಾಜ