ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಸಂತ ಬಂದ ಸಂತಸ ತಂದ

ಮೀರಾ ಜೋಶಿ
ಇತ್ತೀಚಿನ ಬರಹಗಳು: ಮೀರಾ ಜೋಶಿ (ಎಲ್ಲವನ್ನು ಓದಿ)

ಋತುಗಳ ರಾಜ ಬಂದ
ಸಂತಸ ಸಂಭ್ರಮ ತಂದ
ಮಾವಿನ ಮುಗಳು ಬೇವಿನ ಚಿಗುರು
ನವಿರು ವೀಜನಕೆ ತಲೆದೂಗವ ಸೊಗಸು

ವಿರಾಗಿಣಿಯಾದವಳು ಪರ್ಣಗಳ ಬಿಟ್ಟು
ಪರಿಣೀತಳಿವಳೀಗ ಹಸಿರು ಪತ್ತಲವನುಟ್ಟು
ಪ್ರಕೃತಿ ನಳ ನಳಿಸುತಿದೆ
ಹೊಸ ಹೂವ ಕಂಪು
ಕೋಗಿಲೆಯ ಕಂಠದ ಇಂಪು
ಋತುರಾಜ ಪ್ರಸರಿಸಿದ ಸೊಂಪು

ವರ್ಣ ವರ್ಣದ ಸುಮಗಳು
ಮುತ್ತುತ್ತ ಝೇಂಕರಿಸುವ ಮತ್ತಳಿಗಳು
ಹರಿತ್ತಿನಲಿ ಹಳದಿ ಕೇಸರಿ ಫಲಗಳು
ಮನೆಬಾಗಿಲಿಗೆ ಕಟ್ಟಿದ ತೋರಣ
ಬೇವು ಬೆಲ್ಲದ ಹೂರಣ
ಸುಖ ದುಃಖಗಳು ಸಮವೆಂಬ ಕಾರಣ

ಚೈತ್ರ ಮೂಡಿಸಿತು ಚಿತ್ತಾರಗಳ
ಎಲ್ಲೆಲ್ಲೂ ತುಂಬಿದೆ ಚೈತನ್ಯ
ನಡುಗಿಸಿದ ಶಾರ್ವರಿಗೆ ವಿದಾಯ
ಪ್ಲವದಲಿ ಆಶಿಸೋಣ ಅಭಯ