ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇಸ್ರೇಲ್ ಕೆಣಕಿ ಗೆದ್ದವರಿಲ್ಲ

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ಪುಸ್ತಕ : ಇಸ್ರೇಲ್ ಕೆಣಕಿ ಗೆದ್ದವರಿಲ್ಲ
ಸಂಪಾದಕರು : ಕೆ ವಿ ರಾಧಾಕೃಷ್ಣ
ಪ್ರಕಾಶಕರು : ಸಮನ್ವಿತ, ಬೆಂಗಳೂರು
ಬೆಲೆ : ೧೫೦/-

ನಮ್ಮ ದೇಶ ಸ್ವಾತಂತ್ರ್ಯಗೊಂಡ ಸರಿ ಸುಮಾರಿಗೆ, ಮಧ್ಯ ಏಷ್ಯಾದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಹುಟ್ಟಾದರೂ, ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳ ಹುಟ್ಟಿಗೆ ಮೂಲಧಾತುವಾದರೂ ಅವರಿಂದಲೇ ಆಕ್ರಮಣಕ್ಕೆ ಒಳಗಾಗಿ ವಿಶ್ವದ ವಿವಿಧೆಡೆ ಹಂಚಿಹೋದ ಯಹೂದಿಗಳಿಗಾಗಿ ಉದಯಿಸಿದ, ಧರ್ಮದ ವಿಚಾರವಾಗಿ ವಿವಾದದ ಪುಟ್ಟ ಭೂಭಾಗ, ಇಂದು ಇಸ್ರೇಲ್ ಎಂದು ಕರೆಯುವ ದೇಶ ತನ್ನ ಸುತ್ತಲೂ ಶ್ರತುಗಳೇ…. ಇದ್ದರೂ ಅವರನ್ನು ಎದುರಿಸಿದ ರೀತಿ, ಪ್ರತಿ ಪ್ರಜೆಯೂ ದೇಶ ಮೊದಲು ಎಂಬ ನಿಲುವು, ತನ್ನೆಡೆಗೆ ಕಲ್ಲು ತುರಿದವರಿಗೆ ಗುಂಡಿನ ಮೂಲಕ ಪ್ರತ್ಯುತ್ತರ ನೀಡುವ, ಆಧುನಿಕ ತಂತ್ರಜ್ಞಾನವನ್ನು ಪುರಾತನ ಕೃಷಿಗಳಿಗೆ ಬಳಕೆ ಮಾಡುವ ರೀತಿ, ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತನೆ ಮಾಡುವ ವಿಧಾನ, ನಮ್ಮ ದೇಶಕ್ಕೆ ಖಂಡಿತ ಮಾದರಿ

ಕ್ರಿಸ್ತಶಕದಿಂದ ಮೊದಲುಗೊಂಡು, ಇಸ್ರೇಲ್ ಉದಯದವರೆಗೆ ಯಹೂದಿಗಳು ಪಟ್ಟ ಪಾಡು, ತದನಂತರ ಸ್ವತಂತ್ರ್ಯ ದೇಶವಾದ ನಂತರ ಅದು ಎದುರಿಸಿದ ಸವಾಲು, ಇಂದು ಆ ದೇಶದ ಪ್ರಜೆಗಳು ಪ್ರತಿ ಕ್ಷೇತ್ರದಲ್ಲಿ ಮೂಡಿಸಿರುವ ಛಾಪು, ಆ ದೇಶವು ನಡೆಸಿದ ಯುದ್ಧಗಳು ಮತ್ತು ಅದರ ತಂತ್ರಗಾರಿಕೆ, ಆ ದೇಶದ ಗುಪ್ತಚರ ಇಲಾಖೆಯ ಕಾರ್ಯ ವೈಖರಿ, ಮುಂದಿನ ದಿನಗಳಲ್ಲಿ ನಮ್ಮ ದೇಶ ಮತ್ತು ಇಸ್ರೇಲ್ ದೇಶದಿಂದ ವಿಶ್ವದ ಮೇಲಾಗುವ ಪರಿಣಾಮ ಹಾಗು ಇದು ನಮ್ಮ ಮೇಲೆ ಮಾಡಬಹುದಾದ ಅನುಕೂಲ ಮತ್ತು ಪ್ರತಿಕೂಲಗಳ ಕುರಿತು ಇಲ್ಲಿ,

ವಿಂಗ್ ಕಮಾಂಡರ್ ಸುದರ್ಶನ್, ಪ್ರಶಾಂತ ಭಟ್, ಶ್ರೀ ನಿಧಿ ಡಿ.ಎಸ್, ರೋಹಿತ್ ಚಕ್ರತೀರ್ಥ, ಶ್ರೇಯಾಂಕ ಎಸ್.ರಾನಡೆ,ರಾಘವೇಂದ್ರ ಸುಬ್ರಹ್ಮಣ್ಯ, ಶ್ರೀಕಾಂತ ಶೆಟ್ಟಿ, ತಮ್ಮ ಅಧ್ಯಯನ ನಡೆಸಿ ದಾಖಲಿಸಿರುವ ಲೇಖಕನಗಳ ಸಂಗ್ರಹ ಗುಚ್ಛವನ್ನು ರಾಧಾಕೃಷ್ಣ ಅವರು ಅಚ್ಚುಕಟ್ಟಾಗಿ ತಮ್ಮ ಕೆಲಸ ಮಾಡಿದ್ದಾರೆ ಎಲ್ಲ ಲೇಖಕರಿಗೆ ಧನ್ಯವಾದಗಳು.
ರಾಧಾಕೃಷ್ಣ ಅವರಿಗೆ ಕೃತಜ್ಞತೆಗಳು

ತಕ್ಷನ ಗಾಂಧಾರ ಮತ್ತು ಈ ಕೃತಿಯು ಮನರಂಜನೆಯ ಓದಿಗಾಗಿ ಅಲ್ಲ ಮತ್ತು ಇಸ್ರೇಲ್ ದೇಶವನ್ನು ಗುಣಗಾನ ಮಾಡಿ ಕೊಂಡಾಡುವ ಪುಸ್ತಕ ಇದಲ್ಲ, ಬದಲಾಗಿ ಒಂದು ದೇಶವನ್ನು ಕಟ್ಟಬೇಕಾದರೆ ನಾವು ನೀವು ಹಾದಿ ಬೀದಿಯಲ್ಲಿ ಮಾತಾನಾಡಿದಷ್ಟು ಸುಲಭವಲ್ಲ ಎಂಬುದು ಮುಖ್ಯವಾಗಿ ವಿದ್ಯಾರ್ಥಿ ಸಮೂಹಕ್ಕೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಓದಿ ಓದಿಸಬೇಕಾದ ಕೃತಿ ಅದುವೇ ಇಸ್ರೇಲ್ ಕೆಣಕಿ ಗೆದ್ದವರಿಲ್ಲ