ಇತ್ತೀಚಿನ ಬರಹಗಳು: ಸ್ವಭಾವ ಕೋಳಗುಂದ (ಎಲ್ಲವನ್ನು ಓದಿ)
- ಬವಣೆಯ ಬೆದರು ಬೊಂಬೆ - ಆಗಸ್ಟ್ 6, 2022
- ತೀರದಲಿ ನಿಂತು - ಜುಲೈ 22, 2022
ಒಂದು ಕಡೆ ನಿನ್ನ ನೆನಪುಗಳು
ಈ ಮುಸುಕು ಮಳೆಯಂತೆ
ಬಿಟ್ಟೂ ಬಿಡದೆ ಜಿಟಿ ಜಿಟಿ
ಕವುಚಿ ಮಲಗಿದರೂ
ನುಸುಳಿ ಇರಿವ ಚೂರಿ ಚಳಿ
ಗಲ್ಲಗೈಯ್ಯಾಗಿ ಕುಕ್ಕರುಗಾಲಲ್ಲಿ
ಕುಳಿತು ಕನಸು ಕಟ್ಟಲು
ಈ ಗೋಳ ಭೂಗೋಳದ ಅಂಚಲಿ
ಅವ ಇಂಚಿಂಚಾಗಿ ತೆರೆ ಸರಿಸಿ
ಮಿಣುಕು ಬೆಳಕು ಮಿಂಚು ಹೊತ್ತಿಸಿದ್ದಾನೆ
ಹಟ್ಟಿಯ ರಂಗೋಲಿಯ ಮಧ್ಯ
ಹೂ ನಗುವ ಚೆಂದಿರನ ತುಂಟಾಟ
ಅದುಮಿಟ್ಟ ಭಾವಗಳ ಪರದಾಟ
ತೂಗಿ ತೊನೆದು ಬಿಟ್ಟ ತೆನೆಯಂಥ
ನಿನ್ನೊಡನೆ ಕಳೆದ ಗಳಿಗೆಗಳ ಆಟ
ಗಾಲುಗಲ್ಲದ ತುಟಿಯ ಬಯಕೆ
ಓರೆ ಮಾಡಿದ ಕದದ ಹಿಂದೆ ಅವಿತಂತಿದೆ
ಈ ತೋಳು ಎದೆ ಹಾಸು ಕಾಯುತ್ತಲೇ ಇದೆ
ಬರುವ ಇರುವ ಹಾದಿಯ ತಂಬಾ
ನವಿಲುಗಣ್ಣಿನ ಕನಸ ಗಾಯನ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ