- ಕಪ್ಪಿನ ನಂಬಿಕೆ-ಭಾಮಿನಿ ಷಟ್ಪದಿಯ ಪದ್ಯ - ನವೆಂಬರ್ 23, 2023
- ಕರ್ಮದ ಧರ್ಮ - ಅಕ್ಟೋಬರ್ 24, 2023
- 99099 - ನವೆಂಬರ್ 20, 2022
ಊರು,ಕೇರಿಯ ದಾಟಿ
ಬೀದಿ, ಮೈಲುಗಲ್ಲುಗಳ ಮೀರಿ
ತೋಟ ಗದ್ದೆಯನು ಸರಿಸಿ – ಈ ಗಿಡ ಮರ
ಪ್ರಾಣಿ, ಪೊದೆಗಳತ್ತ – ಇವರ ಹೆಜ್ಜೆ…..!!
ಅದೇ ….ಆ ಮನೆ, ಅದೇ… ಟಿಪಾಯಿ
ಟಿ.ವಿ. ಮೊಬೈಲು ಮರೆತು,
ಮತ್ತೆ ಸಿಡುಕು, ಕೆಂಗಣ್ಣು ನೋಟಗಳ ಬಿಟ್ಟು
ಕ್ಷಣವಾದರೂ – ನಿರ್ಲಿಪ್ತ, ಶಾಂತ ಪ್ರಶಾಂತ ಹಸುರಿನತ್ತ ಹೆಜ್ಜೆ….!!
ಇಲ್ಲಪ್ಪ …, ನಾ ಹೋಗುವದಿಲ್ಲ ಪುಟ್ಟಾ
ನಿನ್ನ ಬಿಟ್ಟು. ಅಲ್ಲಿಗೆ ಆ ಆಶ್ರಮಕೆ…
ಬೇರೊಂದು ಲೋಕಕೆ – ಹಣ್ಣು ಹೂವು ಪರಿಮಳವಿಲ್ಲದ
ಅಪರಿಚಿತ ಆ ಅರಣ್ಯಕೆ…..ಅಲ್ಲಿ ನೋಡು ಪಕ್ಕಿಗಳ ಕಲರವ ಕುಹು ಕುಹು ಕೋಗಿಲೆ ….ಹಾ….ಹಾ….ಹಾ….!!
ಅಜ್ಜಾ, ನನಗೆ ಗಿಳಿ, ಚಿಟ್ಟೆ
ಮತ್ತೆ ಪಾರಿವಾಳ ಕೊಡು
ಆ ರಾಕ್ಷಸ,ಗವಿ ಅಲ್ಲಾಉದ್ದೀನ ದೀಪ ಕತೆ ಹಾಡು ಬಿಡಿಸು
ಆ ಕೊಳ್ಳ ಈ ಬೆಟ್ಟ ನಟ್ಟ ನಡುವಿನ ನೀರು ಜುಳುಜುಳು…..!!
ಅದೋ…ಆ ಮರ ಕೈ ಮೀರಿ
ತಲೆ ಏರಿ…..ಮತ್ತೆ ಮತ್ತೆ ಆಗಸದೆತ್ತರಕೆ.
ಗೊತ್ತೇನು ಅದರ ಚಿತ್ರದ ಚಿತ್ತ
ಕಿರು ಬೆರಳಿಗೂ ಕಿರುದಾದ ಬೀಜ…. ಅದರ ಸೂತ್ರ ನೆಲದ ಮರೆಯ ಪಾತ್ರ…..!!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ