ಇತ್ತೀಚಿನ ಬರಹಗಳು: ರಶ್ಮಿ ಶಮಂತ್ (ಎಲ್ಲವನ್ನು ಓದಿ)
- ಅನಿರೀಕ್ಷಿತ - ಮಾರ್ಚ್ 22, 2026
ನಿರ್ಗಮಿಸುವರು
ಅವಕಾಶವಿಲ್ಲ ವಿದಾಯಕ್ಕೆ
ಕಂಬನಿಗೂ ತಾವಿಲ್ಲದಂತೆ
ಪರಮಾಶ್ಚರ್ಯವದು
ವಾಸ್ತವವನ್ನೂ ಪರೀಕ್ಷಿಸುವಂತೆ
ಬೇಧವಿಲ್ಲವವನಿಗೆ
ಮಕ್ಕಳು ಮರಿಗಳೆಂಬ
ಕರುಣೆಯೂ ಇಲ್ಲದೆ
ಸೆಳೆಯುತಿಹನು ಕಾಲರಾಯ
ಅದೇನು ಅವಸರ ಅವಗೆ
ಬದುಕಿ ಬಾಳುವವರ ಸೆಳೆಯಲು
ಉಳಿದಿರಲು ಮಾತುಗಳು ನೂರಾರು
ಕನಸು ಕಾದಿರಲು ಸಾವಿರಾರು
ಜವಾಬ್ಧಾರಿಯ ಹೊರೆಯಿರಲು
ನಂಬಿರುವ ಜೀವಗಳಿರಲು
ಮುಖ್ಯವಿದೆಯೇ ಹೊರತು ಇದೆಲ್ಲವ
ಆತ್ಮೀಯರ ಆಲಂಗಿಸದೆ
ಅಂತಿಮ ನಮನವ ಸಲ್ಲಿಸದೆ
ಕಂಬನಿಯ ಉರುಳಿಸದೆ
ಕೊನೆಯ ಸಂದೇಶ ಕೊಡಲಾಗದೆ
ಹೋದವರದೆಷ್ಟೋ
ಜೊತೆಗಿರಲು ಸಂಭಾಷಿಸಿ
ಕೊನೆಯ ಭೇಟಿಯೆಂಬಂತೆ
ಬದುಕು ಮನಬಂದಂತೆ
ತೀರಿಸು ಆಸೆ ಕನಸುಗಳ
ತಿಳಿದಿದೆಯೇ
ನಾವೆಷ್ಟನೆಯವರೋ ಈ ನಿಗೂಢ ಸರತಿಯಲಿ




ಹೆಚ್ಚಿನ ಬರಹಗಳಿಗಾಗಿ
ಹೂರಣವಿಲ್ಲದ ಹೋಳಿಗೆ
ಕನ್ನಡ ಕಾಂತಾರ..
ಒದ್ದೆ ಹಕ್ಕಿಯ ಹಾಡು ಮತ್ತು ಇತರ ಕವಿತೆಗಳು