- ಮೈಖೇಲ್ ಜಾಕ್ಸನ್ ಎಂಬ ಲೋಕ ಕಂಡ ಮಾಂತ್ರಿಕ - ಡಿಸಂಬರ್ 21, 2021
- ಪ್ರೀತಿ ಹಂಚುತ ಸಾಗು - ನವೆಂಬರ್ 24, 2021
- ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ - ನವೆಂಬರ್ 3, 2021
ಮಳೆಯಲ್ಲಿ ತೊಯ್ದು ಗುಬ್ಬಚ್ಚಿಯಾದ ಕಡಲಿನ ಹೃದಯದ ನಕ್ಷತ್ರ ನೀನು!
ಕಾರಿರುಳ ದಟ್ಟ ಕಾಡಿನ ಕಾಡುವ ನಿರವ ಮೌನದ ಬಿಸಿ ಉಸಿರು ನಾನು!
ಬಿಸಿಲ ಚಳಿಗೆ ರಾಗವಾಗುವ ಅಮಲು ಹತ್ತಿದ ಯೋಗ ನಿದಿರೆ ನೀನು!
ಹೊಸ್ತಿಲ ಬಾಗಿಲಿಗೆ ಹಚ್ಚಿದ ಹಳದಿ ಬಣ್ಣದ ಹಳೆಯ ನೆನಪು ನಾನು!
ಕರಗುವ ಕನಸಬಳ್ಳಿಯ ಕನವರಿಕೆಯ ಆರದ ಸುಗಂಧದ ಅತೀತ ನೀನು!
ಕಣ್ಣರೆಪ್ಪೆ ನಿರ್ದಯವಾಗಿ ಕೆಡವಿದ ಅನಾಥ ಕಂಬನಿಯ ಅರ್ತನಾದದ ಮುಗುಳ್ನಗೆ ನಾನು!
ಗಿರಿಯ ರೆಕ್ಕೆಯ ಸ್ಪರ್ಶದ ತುತ್ತ ತುದಿಯ ನೆಮ್ಮದಿಯ ಅನಂತ ಆಕಾಶ ನೀನು!
ಗಾಳಿಗೆ ಪಟಪಟಿಸಿ ಹರಿದು ಚಿಂದಿಯಾಗಿ ದಿಕ್ಕಿಲ್ಲದಂತೆ ಹಾರಿದ ಧ್ವಜದ ನಿರ್ಗತಿಕ ತುಣುಕು ನಾನು!
ಕಡಲ ತೀರದಲ್ಲಿ ಕಾಲುಚಾಚಿ ಅಂಗಾತವಾಗಿ ಮುಗಿಲಿನ ಚುಕ್ಕಿಗಳ ಮುಡಿಯುವ ಸವಿ ನೆನಪು ನೀನು!
ಹಾದಿಬದಿಯ ಹುಣಸೆಮರದ ಬುಡದಲ್ಲಿ ಓಡಾಡಿ ಆಹಾರ ಹೊಂಚುವ ಕಪ್ಪು ಇರುವೆ ನಾನು!
ಅರಳದ ಮೊಗ್ಗಿನ ದುಂಬಿಯ ದಾಹದ ಮಧುವಿನ ಶತಮಾನದ ಮೋಹ ನೀನು!
ಗೀತೆಯ ನಡುವೆ ಅರ್ಥವೆ ಇಲ್ಲದ ಸುಪ್ತವಾದ ವ್ಯರ್ಥ ಶ್ಲೋಕದ ಸ್ಮೃತಿ ನಾನು!
ಮೇಘದ ಹೃದಯಕೆ ಮುತ್ತಾಗುವ ಸಂಭ್ರಮದ ಅಮೃತ ಘಳಿಗೆಯ ಡವ ಡವ ನೀನು!
ಒಣಮರದ ತಾಜಾ ಬೇರಿನ ನಿರ್ಲಿಪ್ತ ಹಸಿರು ಧ್ಯಾನದ ಕೋನರೊಡೆದ ಅಂಕುರ ನಾನು!
ಬಾಣದ ವೇಗದ ಮೇಲೊಡುವ ಅಶ್ವದ ಹೆಜ್ಜೆ ಗುರುತುಗಳ ಬಿಳಿ ನೆರಳು ನೀನು!
ಬಯಲಲ್ಲಿ ಹಚ್ಚಿದ ಬೆಂಕಿಯ ಮೇಲಿನ ಸುಟ್ಟ ಕಾವಲಿಯ ಕಳೆಬರಹ ನಾನು!
ಮನದ ಅಲಮಾರಿಯಲ್ಲಿನ ಹೊತ್ತಿಗೆಯ ಪುಟಗಳ ನಡುವಲ್ಲಿ ಅರಳಿದ ಕುಸುಮ ನೀನು!
ಮಸಣದ ಕಣಗಿಲೆ ಗಿಡದ ಅಡಿ ಕೂತು ಬದುಕನ್ನು ಗುನುಗುವ ಫಕೀರ ನಾನು!
ನಗೆಯ ಒಲುಮೆಯ ನಾಚಿಕೆಯ ಉನ್ಮಾದದ ಸಂಚಲನದ ಉದ್ರೇಕ ಪಿಸುಮಾತು ನೀನು!
ಕಾಲದ ಕ್ಷಣಗಳೊಂದಿಗೆ ಕೂಡಿ ಘಟಿಸುವ ಮೇಣದ ಪ್ರತಿರೂಪದ ಪ್ರತಿಬಿಂಬ ನಾನು!
ಮಿಂಚಿನ ಓಟದ ಜಿಂಕೆಯ ಕಣ್ಣಿನ ಹೊಳಪಿನ ಫಿರ್ಯಾದಿನ ಗುಂಗು ನೀನು!
ಮರದಕೊಂಬೆಯ ಸಂಗ ಕಳಚಿ ಉದುರಿ ಬೀಳುವ ಎಲೆಯ ನಿಶಾಂತ ಏಕಾಂತ ನಾನು!
ಎಂದಿಗೂ ಕಾಣದ, ಸಿಗದ ಗಮ್ಯದ ಗಹನತೆಯ ಮಹೋನ್ನತ ಅನೂಹ್ಯ ನೀನು!
ಕೈಜಾರಿ ಒಡೆದು ಚುರುಚೂರಾದ ಮಡಿ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ