ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಿಂಚು ಹುಳ

ಮಿಂಚು ಹುಳದ ಸಾಲುಗಳು.. ...ಬಂದು ಒಳ ಹೊಕ್ಕು ಒಮ್ಮೆ… ನಿನ್ನನೆ ನೀ ಕಂಡು ಬೆರಗಾಗದಿರು ಅಷ್ಟೆ!
ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ಮಿಂಚು ಹುಳ
ನೀ ಮಿಂಚಾಗಿ ಬಾ…
ನನ್ನೆದೆಯ ಕೊರೆವ ಮಿಂಚು  
ಅದು ಸಾಧಾರಣವಿರದಿರಲಿ
 
ಕಡಿಮೆ ಎನಿಸಿದಲ್ಲಿ
ಗಗನದಲ್ಲೊಂದು ಗೀರಿಚ್ಚಿ
ಮಿಂಚಿನ ಹೆಗಲೇರಿ
ಹೊತ್ತು ತಾ…
ಗುಡುಗು ಗುಡುಗಾಡಿದರೇನು
ನೀ ಹೂಂಕರಿಸಿ ಎಡೆ ಬಿಡದೆ ಬಾ…
ಮಳೆಗೊಂದು ಚೂರು
ನೆನೆದು ಬಾ … ಧರ ಧರನೆ ಮಳೆಬಿಲ್ಲ ಧರಿಸಿ ಬಾ …
 
ಬೆಳಕಾಗುವುದೆ? 
ಭಸ್ಮಿಸುವುದೆ? ನನ್ನೀ ಅಂತರಂಗವ? 
ಬೆಂಕಿ ಒಳಗಿನದಾರುವುದೆ?
ತುಸು ನೊಡೋಣ ಬಾ…
 
ಹುಡುಕಾಟ ನನ್ನದು
ಕಿಚ್ಚಿನದಲ್ಲ, ಮಿಂಚಿನದು
ಕಿಡಿ ಆರದಿರಲಿ ಒಂತಿಷ್ಟು
ಬಂದು ಒಳ ಹೊಕ್ಕು ಒಮ್ಮೆ…
ನಿನ್ನನೆ ನೀ ಕಂಡು
ಬೆರಗಾಗದಿರು ಅಷ್ಟೆ!