ಇತ್ತೀಚಿನ ಬರಹಗಳು: ಯಮುನಾ ಕಂಬಾರ (ಎಲ್ಲವನ್ನು ಓದಿ)
- ಕಪ್ಪಿನ ನಂಬಿಕೆ-ಭಾಮಿನಿ ಷಟ್ಪದಿಯ ಪದ್ಯ - ನವೆಂಬರ್ 23, 2023
- ಕರ್ಮದ ಧರ್ಮ - ಅಕ್ಟೋಬರ್ 24, 2023
- 99099 - ನವೆಂಬರ್ 20, 2022
ಈ ಕಲ್ಲುಗಳು ಕಡು ಬಿರುಸೆಂದು
ನೀ – ದೂರ ಸರಿಯಬಹುದು:
ನೀನರಸಿದ ಆ ಏಕಾಂತ ಬಯಲೂ ಕೂಡಾ- ಅಸಹನ ಮೌನವಾಗಿಹುದು…..!!
ಈ ಜವಾಬ್ದಾರಿಗಳು ಬಲುತೊಡುಕೆಂದು
ನೀ – ಹೆಗಲು ಕಳಚಬಹುದು ;
ಹಗುರ ಬಗಲುಗಳು – ಮಂಗ ಮರ್ಕಟಗಳಾಗಿಹವು…!!
‘ಮಧ್ಯ’ ಸಂತೋಷದ ಸಂಗಾತಿಯಂದು ನೀ- ಅರ್ಥೈಸಬಹುದು;
‘ಅದು’ ಲಗಾಮು ಇಲ್ಲದ ರಾಕ್ಷಸವಾಗಿಹುದು……..!!
“ಬದುಕು ” ಚಿಂತೆಯ ಸಂತೆಯಂತೆ
ನಿನಗೆ – ತೋರಬಹುದು;
ನಿನ್ನ” ಕಾಯಕದ ಕಸುಬಿಗೆ’ ಕಲ್ಪವೃಕ್ಷವಾಗಿಹುದು……!!
“ದುಡಿಮೆ ” ಕಬ್ಬಿಣದ ಕಡಲೆ
ಎಂದು ನೀ – ಭಾವಿಸಬಹುದು;
ನಿನ್ನ ” ಬೆವರ ಹನಿ ” ಹನಿದರೆ ಸಾಕು ; “ನೀ ನಸೆಯ ಮೂಲ” ಗುರುತಿಸಬಹುದು !!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ