ಇತ್ತೀಚಿನ ಬರಹಗಳು: ಬೆಂಶ್ರೀ ರವೀಂದ್ರ (ಎಲ್ಲವನ್ನು ಓದಿ)
- ಸಮಾಧಿ ಸಡಗರ - ಜನವರಿ 22, 2022
- ನಿಬ್ಬು ಮುರಿದು ಹಾರಿತು - ಸೆಪ್ಟೆಂಬರ್ 25, 2021
- ಮತ್ತೆ ಬಂತು ಆಷಾಢ - ಜುಲೈ 21, 2021
ಇಂದು ಬರುವನು ಬೇಂದ್ರೆ ತಾತನು
ನಿಮ್ಮ ಮನೆ ಪಡಸಾಲೆಯೊಳಗೆ
ನಿಮ್ಮ ಒಳಗಣ್ಣ ಅರಿವಿನೊಳಗೆ
ಕರಿಯ ಕೋಟಿನ ಜಾದುಗಾರನು
ಕಚ್ಚೆಹಾಕಿ ಕಂನಾಡ ಪೇಟವಿಟ್ಟಿಹನು
ಮುಂಗೈ ಕೊಡೆ, ಚಡಾವು ಹಾಕಿಹನು
ಬೊಚ್ಚು ಬಾಯಲಿ ಮಾತೆ ಮಂತ್ರವು
ನಗುವ ನೇಗಿಲ ಅರ್ಥ ಧ್ವನ್ಯಾತೀತವು
ಧನ್ಯರೈದೆಯರು ಕುಣಿವ ವರಕವಿಯು
ನಾಕುತಂತಿಯ ಮೀಟಿ ಎದೆಗೆ ಕೈಯಿಕ್ಕಿ
ಕೃಷ್ಣೆ ಕಾವೇರಿಯ ಹೊಸ ಅಲೆಯನೆತ್ತಿ
ವಿಹರಿಸಿ ವಿಸ್ತರಿಸಿಹ ಸಿರಿ ಕನ್ನಡದ ಭಿತ್ತಿ
ಕರುನಾಡ ಕೆಂಕಪ್ಪು ನೆಲದೊಳಗೆ
ಬೇರನಿಂ ಹೀರಿ ಸಾರವ ಮುಗಿಲಿಗೆ
ಮೊಗವಿಟ್ಟು ಕನ್ನುಡಿಯ ಬೆಳಗಿಹನು
ಹತ್ತು ಹತ್ತು ದನಿಗಳಲಿ ಅರಳಿ ನಾದ
ಭಾವಲೋಕದಿ ತೇಲುತ ಆಗಿರಿ ಹದ
ನುಡಿಗೆ ಹಚ್ಚಿ ನವಿಲು ಬಣ್ಣದ ಚಂದ
ಎದೆ ಕಿವಿಯ ತೆರೆದು ಜಂಜಡ ತೊರೆದು
ಮೌನದಲಿ ನುಡಿ ಗಾರುಡಿಗನ ಧೇನಿಸಿ
ಬೇಂದ್ರೆ ತಾತನಿಗೆ ಮನವಿಟ್ಟು ನಮಿಸಿ
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..