- ಕಪ್ಪಿನ ನಂಬಿಕೆ-ಭಾಮಿನಿ ಷಟ್ಪದಿಯ ಪದ್ಯ - ನವೆಂಬರ್ 23, 2023
- ಕರ್ಮದ ಧರ್ಮ - ಅಕ್ಟೋಬರ್ 24, 2023
- 99099 - ನವೆಂಬರ್ 20, 2022
ಜಾತಕ ಪಕ್ಷಿ………!!!!
ಈ ಸದನ ಹೀಗೆಯೇ
ಸದಾ ಗುಡುಗುತ್ತದೆ , ಗದ್ದರಿಸುತ್ತದೆ.
ಕುರ್ಚಿ ಯಾರೇ ಏರಿದರೂ-
ಇದಕ್ಕಿಲ್ಲ ಶಾಂತಿ , ಪ್ರೀತಿ
ಸಹೋದರತೆ , ಕನಿಷ್ಟ ಮಾನವೀಯತೆ …..!!!!
ಏಕೆಂದರೆ ,
ಅದೂ ಕಲಿತಿದೆ ಆಧುನಿಕ ಶಬ್ದಗಳನ್ನು
ಕೃತಹ ಸಂಬಂಧ
ಒಣ ಕೈ ಕುಲುಕುವಿಕೆಯನ್ನು
ದಂತಗಳ ಮೇಲಿನ ನಗುವನ್ನು
ತುಂಡರಿಸಿದೆ ರಾಜ ಬೀದಿಗಳನ್ನು
ದಿಕ್ಕರಿಸಿದೆ – ಕಿ.ಮೀಟರಗಳನ್ನು
ಹುಡುಕಿದೆ – ಕವಲುದಾರಿಗಳನ್ನು
ಅಲ್ಲೊಂದು ಮಧ್ಯದಂಗಡಿ
ಮಟನ್ ಶಾಫ
ನಾಲ್ಕುಗೋಡೆಗಳ ಮಧ್ಯದ ನೃತ್ಯ ಮಂಟಪವನ್ನು ಬಳೆಗಳ ಸದ್ದು
ಗೆಜ್ಜೆಗಳ ನಾದ – ” ತನ್ನದೇ ಹಗಲುಗನಸಿನ ಲೋಕವನ್ನು ” !!
ಬಯಲು
ಬಯಲು
ಶುಭ ಹಾರೈಸುತಿದೆ –
ಬಿದ್ದ ದಾರಿಯೇ ಸಾಗಲಿಯಂದು
ಅಲ್ಲಿ ಜೇನು ಸ್ಪುರಿಸಲಿಯಂದು
ಹೂಗಳರಳಲಿ ವಸಂತ ಸುಳಿಯಲಿ
ಚೈತ್ರ ಪಲ್ಲವಿಸಲೆಂದು
‘ಜಾತಕ ಪಕ್ಷಿ ‘
ಎವೆಯಿಕ್ಕದೇ ದಿಟ್ಟಿಸುತಿದೆ
ಹುಡುಕುತ್ತಿದೆ
ತಡಕುತ್ತಿದೆ
“ಜೀವಪೊರೆವ ತುನುಕುಗಳಿಗೆ
ಗಂಟಲ ತೃಷೆಯ ಜಲಕ್ಕೆ” !!
ಆದರೂ…….,
ದಾರಿಗಳು ಲಂಭಿಸುತ್ತಿಲ್ಲ
ಬೆಳೆಗಳು ಬೆಳೆಯುತ್ತಿಲ್ಲ
ಮಳೆ ಆದದ್ದೂ ಅಲ್ಲ
ಹೋದದ್ದೂ ಅಲ್ಲ
“ಸುಮ್ಮ ಸುಮ್ಮನೇ ಗಂಟಲ ನರಗಳ ಕೂಗು,
ಪೈಶಾಚಿಕ ದನಿ
ಧರಿಸಿದೆ – ಮುಖವಾಡ
ಅತ್ತರ ಪೌಢರ ಹಚ್ಚಿಕೊಂಡು” !!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ