ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಜಿ.ಎನ್. ಉಪಾಧ್ಯ

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಶ್ರೀ ಗಣೇಶ ಉಪಾಧ್ಯ ಅವರು ಮೂಲತಃ ದಕ್ಷಿಣ ಕನ್ನಡದ ಉಡುಪಿಯ ಕೋಟಾದವರು.ಮುಂಬಯಿ ವಿಶ್ವವಿದ್ಯಾಲಯದ, ಪಿ.ಎಚ್.ಡಿ ಪಡೆದಿರುವ ಉಪಾಧ್ಯರದು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ. ಅವರು ಅತ್ಯುತ್ತಮ ಸಂಘಟಕ, ಕನ್ನಡ ಪರಿಚಾರಕ, ದಣಿವರಿಯದ ಸಂಶೋಧಕ. ಮುಂಬೈ ವಲಯದಲ್ಲಿ ಅತೀ ಹೆಚ್ಚಿನ ಕನ್ನಡ ಚಟುವಟಿಕೆಗಳು ಹಾಗೂ ಯಶಸ್ಸಿನ ಹಿಂದೆ ಉಪಾಧ್ಯರ ಆಸಕ್ತಿ, ನಿಸ್ವಾರ್ಥ ಶ್ರಮ ಹಾಗೂ ಅವರಲ್ಲಿರುವ ಸಾಹಿತ್ಯ ಅಭಿರುಚಿ ಕೂಡ ಕಾರಣ. ಸ್ವತಃ ಉತ್ತಮ ಸಾಹಿತಿ ಲೇಖಕ ವಿಮರ್ಶಕರಾದ ಉಪಾಧ್ಯರು ಅನೇಕ ಪುಸ್ತಕಗಳನ್ನ ಲೋಕಾರ್ಪಣೆ ಗೊಳಿಸಿದ್ದಲ್ಲದೆ,ಇತರ ಬರಹಗಾರರಿಗೆ ಸ್ಫೂರ್ತಿಯಾಗಿ, ಬೆಂಗಾವಲಾಗಿ ಮುಂಬೈನಿಂದಲೆ ಕನ್ನಡದ ಕೆಲಸವನ್ನು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಬಂದಿದ್ದಾರೆ.

ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವದ ಈ ಶುಭ ಸಂದರ್ಭದಲ್ಲಿ ನಸುಕು ಮುಂಬೈ ಮಹಾ ಸಂಚಿಕೆಯ ಮೂರನೆಯ ಎಸಳು ʻಮುಂಬಾ ಆಯಿಯ ಮಡಿಲಲ್ಲಿʼ…

ಜಗತ್ತಿನ ಮಹಾನಗರಗಳಲ್ಲಿ ಮುಂಬೈ ಸಹ ಒಂದು. ‘ನರರ ಶ್ರೇಷ್ಠ ನಗರವಾಗಿ ಮೆರೆಯುತ್ತಿದ್ದ ಬಾಂಬೆಪುರದಿ’ ಎಂಬುದಾಗಿ ಕವಿ ಡೇಂಗಾ ದೇವರಾಯ ನಾಯ್ಕ…

ವೈದ್ಯರೆಂದರೆ, ಡಾಕ್ಟರ್ ಎಂದರೆ ಹೀಗಿರುತ್ತಾರೆ ಎಂದು ಹೆಸರೆತ್ತಿ ಹೇಳಬಹುದಾದವರು ಪದ್ಮಭೂಷಣ ಡಾ|| ಬಿ.ಎಂ. ಹೆಗ್ಡೆ. ಅವರ ಜೀವನ ಸಾಧನೆ ನಾಡಿಗೆ…