ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಿ ವಿ ಅರುಣ

ಯಂತ್ರಶಾಸ್ತ್ರದಲ್ಲಿ ಪದವಿ, ಆಡಳಿತ ನಿರ್ವಹಣಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಭಾರತ ಸರ್ಕಾರದ ಮಿನಿ ನವರತ್ನ ಉದ್ದಿಮೆಯಾದ ಮೆಕಾನ್ ಲಿಮಿಟೆಡ್‌ನಿಂದ ಮಹಾ ಪ್ರಬಂಧಕರಾಗಿ ನಿವೃತ್ತಿ. ಕಬ್ಬಿಣ ಹಾಗೂ ಉಕ್ಕು, ತೈಲ ಮತ್ತು ನೈಸರ್ಗಿಕ ಅನಿಲ, ಮೂಲಸೌಕರ್ಯ ಅಭಿವೃದ್ದಿ, ರಕ್ಷಣಾ ಕ್ಷೇತ್ರವೂ ಸೇರಿದಂತೆ ಅನೇಕ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ. ಅನೇಕ ಕನ್ನಡದ ಮಾಸ, ವಾರ, ದಿನ ಪತ್ರಿಕೆಗಳಲ್ಲಿ ಜಿ ವಿ ಅರುಣ ಅವರ ಸಣ್ಣ ಕತೆ, ವೈಜ್ಞಾನಿಕ ಲೇಖನ, ಕವಿತೆ, ಮಕ್ಕಳ ಕತೆ, ಹಾಗೂ ಹಾಸ್ಯ ಲೇಖನಗಳು ಪ್ರಕಟವಾಗಿವೆ. ಈಗ ಓದು, ಬರವಣಿಗೆ ಹಾಗೂ ಕೆಲವು ಸೇವಾಸಂಸ್ಥೆಗಳ ನಿರ್ವಹಣೆಯಲ್ಲಿ ಒಂದಷ್ಟು ಕೆಲಸ ಮಾಡಿಕೊಂಡಿದ್ದಾರೆ. ಪ್ರಕಟಿತ ಪುಸ್ತಕಗಳು: ೧) ಇಂಧನಗಳು ೨) ಕನ್ನಡಕ್ಕೆ ಅರ್ಥವನ್ನು ತಿಳಿಸಿದ ಪ್ರೊ ಜಿ ವೆಂಕಟಸುಬ್ಬಯ್ಯನವರು ೩) 'ವಸುಂಧರೆಗೆ ವಿಜ್ಞಾನದ ಕಿರೀಟ' ಇ-ಪುಸ್ತಕವಾಗಿ ಪ್ರಿಸಂ ಬುಕ್ ಹೌಸ್‌ನಿಂದ ಇಷ್ಟರಲ್ಲೇ ಪ್ರಕಟವಾಗಲಿದೆ. ಸಂಸ್ಥೆಗಳ ಜೊತೆ: 1) ಸಂವಾದ ಟ್ರಸ್ಟ್‌ನ ‌ಆಡಳಿತ ಮಂಡಲಿಯ ಸದಸ್ಯ 2) ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ (ಶತಮಾನ ಕಂಡಿರುವ ಉಚಿತ ವಿದ್ಯಾರ್ಥಿ ನಿಲಯ) ಆಡಳಿತ ಮಂಡಲಿಯ ಸದಸ್ಯ 3) ಇಂಡಿಯನ್ ಫೌಂಡ್ರಿ ಅಸೋಸಿಯೇಷನ್‌ನ ಕೇಂದ್ರ ಸಮಿತಿಯ ಮಾಜಿ ಗೌರವ ಖಜಾಂಚಿ