ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಿ ವಿ ಕುಲಕರ್ಣಿ

ಡಾ| `ಜೀವಿ’ಕುಲಕರ್ಣಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.(ಕನ್ನಡ ಮತ್ತು ಸಂಸ್ಕೃತ) ಪದವಿ ಹಾಗೂ ಎಲ್.ಎಲ್.ಬಿ. ಪಡೆದು ಮುಂಬೈಗೆ (1960) ಬಂದರು. ಖಾಲ್ಸಾ ಹಾಗೂ ಢಾಣೂಕರ್ ಕಾಲೇಜುಗಳಲ್ಲಿ ನಾಲ್ಕು ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಮಾಡಿ ನಂತರ 33 ವರ್ಷ ಅಂಧೇರಿಯ ಸರ್ ಎಂವಿ ಹಾಗೂ ಚೀನಾ0iÀiï ಕಾಲೇಜುಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಕೆಲಕಾಲ ಪ್ರಾಂಶುಪಾಲರಾಗಿ, ದುಡಿದು 1997 ನಿವೃತ್ತರಾದರು. ಮುಂಬೈ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ.ಪದವಿಯನ್ನು ಮತ್ತು ಪಿಎಚ್.ಡಿ.ಪದವಿಗಳನ್ನು ಪಡೆದರು. ಅವರ ಮಹಾಪ್ರಬಂಧದ ವಿಷಯ: `Sಡಿi ಂuಡಿobiಟಿಜo’s Iಟಿಜಿಟueಟಿಛಿe oಟಿ ಣhe Wಡಿiಣiಟಿgs oಜಿ ಗಿ.ಏ.ಉoಞಚಿಞ’ ಧಾರವಾಡದಲ್ಲಿದ್ದಾಗ ವರಕವಿ ಬೇಂದ್ರೆ ಹಾಗೂ ಸಮನ್ವಯಾಚಾರ್ಯ ವಿ.ಕೃ.ಗೋಕಾಕರ ನಿಕಟ ಶಿಷ್ಯರಾಗುವ ಭಾಗ್ಯ ಪಡೆದಿದ್ದರು. ಬೇಂದ್ರೆಯವರಿಂದ `ಜೀವಿ’ಎಂಬ ಕಾವ್ಯನಾಮ ಪಡೆದರು.

ಬಾಲಿವುಡ್‍ನ ಸುಪ್ರಸಿದ್ಧ ಕೇಶ ವಿನ್ಯಾಸಕ ಶಿವರಾಮ ಭಂಡಾರಿ ಅವರ ಜೀವನ ಗಾಥೆ“ಸ್ಟೈಲಿಂಗ್ ಅಟ್ ದಿ ಟಾಪ್’’ ಪೀಠಿಕೆ:ಶ್ರೀ ಶಿವರಾಮ ಭಂಡಾರಿ…