ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಿತೇಂದ್ರ ಬೇದೂರು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು,ಜಿತೇಂದ್ರ ಅವರ ಹುಟ್ಟೂರು.ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಔಷಧೀಯ ಸಂಸ್ಥೆಯಲ್ಲಿ ಉದ್ಯೋಗ.ಸಾಹಿತ್ಯದಲ್ಲಿ ಆಸಕ್ತಿ.ಜಾಲತಾಣಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ.

ಟೊಂಗೆಗಾದರೂ ಕೇಳಿಸಿತ್ತೇ? ತೊಟ್ಟು ಕಳಚಿದ ಸದ್ದು!?ಈಗಷ್ಟೇ ಉದುರಿದ, ತನ್ನದೇ ಎಲೆಯ ನಿಟ್ಟುಸಿರು?.ಅಥವಾ,ಹೊಸ ಚಿಗುರಿನ ಸಂಭ್ರಮದಲ್ಲಿದ್ದ  ಟೊಂಗೆಗೆಗಾಳಿಯೊಂದು ನೆಪವೇ? ಹೊತ್ತು ಸರಿಯಿತು..ಸದ್ದಿಲ್ಲದೇ ಕರಗಿದ…

ಹೊಳೆವ ದೀಪದ ಹಿಂದೆಸುಡುವ ಬತ್ತಿಯ ನೋವು,ಮಿನುಗು ತಾರೆಯ ಒಡಲಉರಿವ ಕೆಂಡದ ಕಾವು. ಮುಗಿಲೆತ್ತರ ಅಲೆಗಳಡಿಕಡಲ ‘ತೀರದ’ ಬಯಕೆ,ಮರಳ ದಡದುದ್ದಕ್ಕೂಮುಗಿಯದ ಕನವರಿಕೆ…

ಬಿಕರಿಗಿವೆ ಇಲ್ಲಿ ನೂರೆಂಟು ಮನಸುಗಳು,ಮನಸು ಮಾರುವ ಸಂತೆ ಇದು. ಖರೀದಿಸಿಬಿಡಿ ಬೇಗ,ಬೆಲೆ ಏರೀತು ಜೋಕೆ!..ನಿಮ್ಮ ಸಿರಿವಂತಿಕೆಗೆಕೇವಲ ಒಂದೇ ಸಾಕೇ?.. ಹಿಗ್ಗುವವು,ಕುಗ್ಗುವವು,ಬೇಕಾದಂತೆ…