ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಉಸಿರಿಗೂ ಉಸಿರಿದೆಯೇ!

ಉಸಿರು ಅನ್ನುವದೇ ಒಂದು ಅದ್ಭುತ ವಿಧ್ಯಮಾನ. ಇದರ ಬಗ್ಗೆ ಉಸಿರಾಡುವ ಕವಿತೆ ಬರೆದಿದ್ದು ರಾಮ್...!
ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ಉಸಿರಿಗೂ ಉಸಿರಿದೆಯೇ!
ನೆಮ್ಮದಿಯ ನಿಟ್ಟುಸಿರಿದೆಯೇ?
ಜೀವವಿದು, ಕಲ್ಪನೆಯ ಬಾಹ್ಯಾಕಾಶ
ಮೀರಿದ ಜೀವನದಿಯಿದು

ಜೀವಕ್ಕೆ ಪ್ರಥಮ ಆಗಮ ಉಸಿರು
ಕೊನೆಯ ನಿರ್ಗಮವೂ, ಉಸಿರೇ
ಇದರ ಹಿಡಿತಕ್ಕೆ ಎಣೆಯೆಲ್ಲಿ?

ಈ ಜೀವಕ್ಕೆ ಉಸಿರಿದು,
ಜೀವವಿದು, ದೈವವಿದು
ಆತ್ಮಕ್ಕೂ ಉಸಿರಿರಬಹುದೇ!
ನಾಮವಷ್ಟೇ ಅಸ್ಪಷ್ಟ
ಇರುವಿಕೆ ನಿರಮ್ತರ

ಇರಬಹುದೇ,
ಆತ್ಮಕ್ಕೂ ಉಸಿರಿರಬಹುದೇ?
ಇರಬಹುದೇ,
ಉಸಿರಿಗೂ ಉಸಿರಿರಬಹುದೇ?