ಇತ್ತೀಚಿನ ಬರಹಗಳು: ಚಂಪೋ (ಎಲ್ಲವನ್ನು ಓದಿ)
- ಸಮಯ,ಗಡಿಯಾರ ನಿಲ್ಸಿ ಮತ್ತು ಇತರ ಕವಿತೆಗಳು - ಆಗಸ್ಟ್ 21, 2022
- MCMXIV ಸಹಿತ ಚಂಪೋ ಅನುವಾದಿಸಿದ ೪ ಕವಿತೆಗಳು - ಮಾರ್ಚ್ 6, 2022
- ಖಲೀಲ್ ಝೀಬ್ರಾನ್ ಕವಿತೆ! - ಫೆಬ್ರುವರಿ 5, 2022
ಕಂಡೆ ನಾನೊಂದು ಕನಸ ಕಂಡೆ
ವ್ಯಕ್ತಿ ವೈಚಿತ್ರರ ಚಿತ್ತ ಚಂಚಲರ
ಚಪಲ ಚೇಲರ ಚಿತ್ರವನು ಕಂಡೆ
ಅರಿಯದೆ ಅಲ್ಲಗಳೆವರನು ಕಂಡೆ
ಉರಿಯದೆ ಹುರಿದು ಬೀಳೋರ ಕಂಡೆ
ನಾರುತಲೇ ನಾಕಕ್ಕೇರೊ ಅತಿಆಸೆಯ
ಮತಿಹೀನ ಏತಿ ಮನುಜರ ಕಂಡೆ
ಅಪಕಾರಿ ಅಪಾಯಕಾರಿಗಳನು ಕಂಡೆ
ಉಪಯೋಗರಹಿತ ಉಪವಾಸಿಗಳ ಕಂಡೆ
ಮಾನವೀಯತೆ ಬಿಟ್ಟು ಮಾರುದ್ದ ಮನೆಕಟ್ಟೊ
ರಸಾಯನಪ್ರಿಯರ ದಾನದ್ಹುಸಿಮಾತ ಕಂಡೆ
ತನ್ನ್ಹಿತವನೇ ಬಯಸೋ ಹಪಹಪಿಗಳ ಕಂಡೆ
ಪರರ್ಹಿತವ ಕಸಿದು ನಲಿಯೋರ ಕಂಡೆ
ನರನೊಳಗೆ ನುಸುಳಿ ಎಸಳಾಗೇ ಇರುವ
ಹುಸಿ ಮಾನವನ ಹಸಿ ಮನಸನ್ನ ಕಂಡೆ.
ದ್ವೇಷಕ್ಕೆ ದಾಸ ಕ್ಲೇಷಕಾರಿಗಳ ಕಂಡೆ
ಹರಿನಾಮವನೇ ಹರಿದು ತಿನ್ನೋರ ಕಂಡೆ
ಹುಸಿನುಡಿದು ತಾ ಹೆಸರಾದ ಮಾತ್ರಕ್ಕೆ
ಹಸಿರನ್ನೇ ಕೊಲ್ಲುವ ಹೇಸಿ ದುರಾತ್ಮರ ಕಂಡೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ