ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿಂತಾಮಣಿ ಕೊಡ್ಲೆಕೆರೆ ಹೊಸ ಕಥಾ ಸಂಕಲನ

ಇದೇ ಬರುವ ಭಾನುವಾರ ಅಂದರೆ ಏಪ್ರಿಲ್ 30, 2023 ರ ಬೆಳಿಗ್ಗೆ 10.30 ಕ್ಕೆ ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ ಹೊಸ ಕಥಾ ಸಂಕಲನ ಭರತದ ಮಧ್ಯಾಹ್ನ ಬಿಡುಗಡೆ ಕಾರ್ಯಕ್ರಮವನ್ನು ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ವರ್ಲ್ಡ್ ಕಲ್ಚರ್ , ಬಸವನಗುಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.. ಇದೇ ಸಂದರ್ಭದಲ್ಲಿ ಕಥೆಗಾರ ಶ್ರೀಧರ ಬಳಗಾರರ ಕಥಾ ಸಂಕಲನ, ಕಾದಂಬರಿ, ಅಲ್ಲದೆ 94ರ ಹರೆಯದ ಹಿರಿಯ ಎ ಎನ್ ನಾಗರಾಜ್ ಅವರ ಬಾಳಿನ ನೆನಪುಗಳನ್ನು ಹೊತ್ತ ಅನನ್ಯ ಪುಸ್ತಕ ಕೂಡ ಲೋಕಾರ್ಪಣೆಗೊಳ್ಳಲಿವೆ. ಈ ಬಿಡುಗಡೆ ಕಾರ್ಯಕ್ರಮದ ಎಲ್ಲ ವಿವರಗಳು ಇದರ ಜೊತೆಗಿರುವ ಆಮಂತ್ರಣದಲ್ಲಿವೆ. ಕನ್ನಡದ ಖ್ಯಾತ ಲೇಖಕರುಗಳಾದ ಜೋಗಿ, ಎನ್. ಎಸ್. ಶ್ರೀಧರಮೂರ್ತಿ ಹಾಗೂ ಎಚ್ ಎಸ್ ಸತ್ಯನಾರಾಯಣ ಪಾಲ್ಗೊಳ್ಳಲಿದ್ದಾರೆ.

ಡಾ. ಚಿಂತಾಮಣಿ ಅವರ ಈ ಸಂಕಲನದಲ್ಲಿರುವ ಕಥೆಗಳು ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಅನೇಕರ ಮೆಚ್ಚುಗೆ ಹಾಗೂ ವಿಮರ್ಶೆಗಳಿಗೆ ಪಾತ್ರವಾಗಿವೆ. ಈ ಕಥೆಗಳ ಜಗತ್ತನ್ನು ಅನನ್ಯವಾಗಿ ಪೋಷಿಸಿರುವ ಓದುಗರ ಪ್ರೀತಿ, ಅಭಿಮಾನ ಯಾವತ್ತೂ ಲೇಖಕರ ಅನನ್ಯ ಸಂಪತ್ತು. ಹೀಗಾಗಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಬಂದು, ಸಂಭ್ರಮದಲ್ಲಿ ಪಾಲುಗೊಂಡು ಕನ್ನಡ ಪುಸ್ತಕೋದ್ಯಮವನ್ನು ಬೆಂಬಲಿಸಬೇಕು ಎಂದೂ ಈ ಸಂಕ್ರಮಣ ಕಾಲದಲ್ಲಿ ವಿಶೇಷವಾಗಿ ಸರ್ವರಲ್ಲೂ ಅರಿಕೆ ಮಾಡಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಡಾ. ಚಿಂತಾಮಣಿ ಅವರನ್ನೂ ಸೇರಿದಂತೆ ಮೂವರು ಲೇಖಕರುಗಳಿಗೆ ಅಭಿನಂದನೆಗಳು ಹಾಗೂ ನಸುಕು.ಕಾಂ ಪರವಾಗಿ ಕಾರ್ಯಕ್ರಮಕ್ಕೆ ಶುಭ ಕೋರುತ್ತೇವೆ.