- ಸಮಾಧಿ ಸಡಗರ - ಜನವರಿ 22, 2022
- ನಿಬ್ಬು ಮುರಿದು ಹಾರಿತು - ಸೆಪ್ಟೆಂಬರ್ 25, 2021
- ಮತ್ತೆ ಬಂತು ಆಷಾಢ - ಜುಲೈ 21, 2021
ಅವನು ಚೆಂದದ ಹುಡುಗ
ಕನಸುಗಣ್ಣಿನ ಪ್ರಶಾಂತ ವದನ
ಉತ್ಸಾಹುದುತ್ಸವ ಚಿಲುಮೆ.
ಬೆಳದಿಂಗಳನ್ನೇ ಹೀರುತ್ತಿದ್ದ
ಶುಕ್ಲಪಕ್ಷದ ರಾತ್ರಿಗಳೆಂದರೆ ಬಲುಪ್ರೀತಿ
ಹುಣ್ಣಿಮೆಯ ಹಿಗ್ಗಿನಲಿ ಮೀಯುತ್ತಿದ್ದ
ಅಮಾವಾಸ್ಯೆ, ಗೊತ್ತೆಯಿಲ್ಲ ಪಾಪ.
ಚಂದದ ಹುಡುಗನಿಗೆಷ್ಟೊ
ಚಂದದ ಹುಡುಗಿಯರು
‘ಮಧುಪಾನ ಪಾತ್ರೆ ನಿನ್ನೊಡಲು’
ಅವರೂ ಇವನೊಂದಿಗೆ ಮಧು
ಮಧುಶಾಯಿಗಳು
ಮತ್ತೂ ಒಬ್ಬಳು ಸಿಕ್ಕಿದಳು
ಹುಣ್ಣೆಮೆಯಂಥ ಹುಡುಗಿ
ಅವಳೊಡನೆ ರಾತ್ರಿಗಳೆಲ್ಲ
ಶುಕ್ಲ ಪಕ್ಷವೇ, ಕೃಷ್ಣಪಕ್ಷವಿಲ್ಲವೇ ಇಲ್ಲ
ಅಮಾವಾಸ್ಯೆಯ ವಿಷಯ ಬಿಡಿ.
ಜಗವೀಗ… ಮಧು… ಮಧು… ಮಧು
ಅವಳು ಇವನ ವಧುವಲ್ಲದ ವಧು..ಮಧು.
ಅವರು
ಭೂಮಿಯಲಿ, ಕಡಲಲಿ, ಆಕಾಶದಲಿ
ಕೊನೆಗೆ ವ್ಯೋಮದಲಿ ಸಕಲದಲಿ
ಹಾಡಾಗಿದ್ದರು, ಸಿರಿ ಹಸೆಯಾಗಿದ್ದರು.
ಒಂದು ದಿನ ಅವಳೆದ್ದು ಹೋದಳು
ಅಮಾವಾಸ್ಯೆ ಅಮರಿಕೊಂಡಿತು
ಮಧು ಬಟ್ಟಲ ತಳ ತೂತಾಗಿತ್ತು
ಚಂದದ ಹುಡುಗ ಇಲ್ಲವಾಗಿದ್ದ.
ಗೊಂದಲವೋ ಗೊಂದಲ
ಹೇಗಿದ್ದ ಹುಡುಗ ಹೇಗೆ ಇಲ್ಲವಾದ
ಹೊಟ್ಟೆಕಿಚ್ಚಿಲಿ ಚಂದ್ರ ಅವನ ಕದ್ದನೆ.
ಚಂದದವನ ಬಟ್ಟಲಿಗೆ ಮಧು
ತುಂಬಿತುಂಬಿ ಖಾಲಿಯಾದ
ಹುಣ್ಣಿಮೆ ನುಂಗಿತೆ.
ಹುಣ್ಣಿಮೆಯಾದ ಹುಡುಗಿಯನು
ಕಂಡು ಕರುಬಿ ಅಮಾವಾಸ್ಯೆ
ಅನಾಮತ್ತಾಗಿ ಅಮರಿಕೊಂಡಿತೆ
ಅಂತೂ ಹುಡುಗ ಇಲ್ಲವಾದ.
ತಮಗಾಗಿ
ಇದ್ದ ಒಂದು ಅಮಾವಾಸ್ಯೆಯನು ಇಲ್ಲವಾಗಿಸಿದ ಹುಡುಗಿಗೆ
ಸೆಟೆಗೊಂಡು ನಕ್ಷತ್ರಗಳು
ಚಂದದ ಹುಡುಗನ ಹಾರಿಸಿಬಿಟ್ಟಿತೇ.
ಚಂದದ ಹುಡುಗನ ಬೆನ್ನಿಗರು
ತೋರುತ್ತ ಉಗುರು
ಬಗೆದೂ ಬಗೆದು ಹುಡುಕಿದರು
ಸಿಕ್ಕ ಹುಣ್ಣಿಮೆಯ ಹುಡುಗಿಗೆ
ಮಖ ಮೈಯ್ಯೆಲ್ಲಾ ಪರಚಿಬಿಟ್ಟರು
ಮಿಕ್ಕೆಲ್ಲ ಮರೆತುಬಿಟ್ಟರು.
ಹುಡುಗ ಇಲ್ಲವಾಗಿದ್ದ
ಗೊಂದಲದ ಮನೆಯಾಗಿದ್ದ
ರಾಜಧಾನಿಯ ರಾಯರುಗಳ
ಕಚ್ಚಿದ ಗೊದ್ದವಾಗಿದ್ದ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ