- ನೀಲಿ ಅಗಾಧತೆ… - ಏಪ್ರಿಲ್ 11, 2021
- ಸಜೀವ ಹಿನ್ನೆಲೆಯೊಂದು… - ಏಪ್ರಿಲ್ 4, 2021
- ದೀಪಕ್ ಬಗೈರ್ ಕೈಸೇ, ಪರವಾನೆ ಜಲ್ ರಹೀ ಹೈ… - ಮಾರ್ಚ್ 21, 2021
ಮಾಲ್ ನಲ್ಲಿ ಯಾರಿಗಾಗಿಯೋ ಕಾದು ಕುಳಿತಿದ್ದೆ. ಪಕ್ಕದ ಬೆಂಚ್ ನಲ್ಲಿ ಹೌಸ್ ಕೀಪಿಂಗ್ ನ ಇಬ್ಬರು ಹೆಂಗಸರು ಕೆಲಸದ ಬ್ರೇಕ್ ನ ಮಧ್ಯೆ ಕೂತು ಹರಟುತ್ತಿದ್ದರು. ಒಬ್ಬಾಕೆ ಕುಡಿದು ಬಂದು ಆಕೆಯನ್ನು ಬಡಿಯುವ ಗಂಡನ ಬಗ್ಗೆ ಮತ್ತು ಆತನಿಂದ ಆಗುತ್ತಿದ್ದ ಹಿಂಸೆಯ ಬಗ್ಗೆ ಹೇಳುತ್ತಿದ್ದರೆ ಇನ್ನೊಬ್ಬಾಕೆ ಯಾರ ಸಹಾರೆಯೂ ಇಲ್ಲದೇ ತಾನೊಬ್ಬಳೇ ಎಲ್ಲವನ್ನೂ ನಿಭಾಯಿಸುತ್ತಿರುವ ಬಗ್ಗೆ ಅವಲತ್ತುಕೊಳ್ಳುತ್ತಿದ್ದಳು. ಒಬ್ಬಕೆ ಇದ್ದೂ ಇಲ್ಲದವನ ಕಥೆ ಹೇಳುತ್ತಿದ್ದರೆ ಇನ್ನೊಬ್ಬಾಕೆಯದು ಕೈಬಿಟ್ಟು ಹೋದವನ ಕಥೆ. ಇಬ್ಬರ ಬದುಕಿಗೆ ವ್ಯತ್ಯಾಸವಾದರೂ ಅನಿಸಿತು. ಇಷ್ಟಕ್ಕೂ ಇವು ಭಾರತದಲ್ಲಿ ವಿಶೇಷ ಘಟನೆಗಳು ಎಂದೇನೂ ಅಲ್ಲ. ಭಾರತದ ಬಹುತೇಕ ಹೆಂಗಸರ ಬದುಕು ಹೀಗೇ ಸಾಗುವುದು.
ತೀರಾ ಮೂರ್ನಾಲ್ಕು ತಿಂಗಳಲ್ಲಿ ಕಂಡ ನಾಲ್ಕೈದು ಮಹಿಳೆಯರ ಸಾವುಗಳು ಕಣ್ಮುಂದೆ ತೇಲಿ ಹೋದವು. ಆ ನಾಲ್ಕೈದು ಮಹಿಳೆಯರು ಬಹುತೇಕ ಸುಸ್ಥಿತಿಯಲ್ಲಿರುವ ಕುಟುಂಬಗಳಿಗೆ ಸೇರಿದವರು. ಇವರನ್ನು ಆಳವಾಗಿ ಬಾದಿಸಿದ್ದು ಎಲ್ಲಾ ಇದ್ದ ಖಾಲಿತನವಾ ಅಥವಾ ಇಲ್ಲದಿರುವ ಒಂದನ್ನೇ ಎಲ್ಲವಾಗಿಸಿಕೊಂಡರಾ.
ಆದರೆ ಕಣ್ಮುಂದೆ ಇದ್ದ ಅವರ ಇಡೀ ಲೋಕ ಚೂರುಚೂರಾದಾಗಿ ” ಏನೂ ಇಲ್ಲದ” ಸ್ಥಿತಿಯಲ್ಲಿ
ಒಬ್ಬರೇ ಬಡಿದಾಡುತ್ತಾ ಸಾಗಿದ ಮಹಿಳೆಯರ ಬದುಕು, ಎಲ್ಲರ ಬದುಕಿನ ಜರ್ಜರಗೊಳಿಸುವ ಕ್ಷಣಗಳಲ್ಲಿ ಬಹುಶಃ ನಕ್ಷತ್ರಗಳಂತೆ ಬೆಳಕು ಚಲ್ಲುವಂತದು.
19 ರ ವಯಸ್ಸಿಗೇ ಮೂರು ಮಕ್ಕಳು. ನಾಲ್ಕನೆಯದು ಹೊಟ್ಟೆಯಲ್ಲಿರುವಾಗ ಭಾರಿ ಮಳೆಯ ರಾತ್ರಿ ಗಂಡ ಆಕೆಯನ್ನು ಕತ್ತು ಹಿಡಿದು ಆಚೆಗೆ ತಳ್ಳುತ್ತಾನೆ. ರೈಲ್ವೇ ಪ್ಲಾಟ್ ಫಾರಂ ನ ಪಾಲಾಗುವ ಆಕೆಯ ಬದುಕು. ತನಗೂ ಮುಂಚೆ ತುಂಡು ಬ್ರೆಡ್ಡಿಗೆ ಪರಾದಾಡುವ ಅಲ್ಲಿನ ಹಾಲವಾರು ಅನಾಥ ಮಕ್ಕಳ ತಾಯಿಯಾಗುತ್ತಾ ಸಾಗುತ್ತಾಳೆ. ಇಂದು ಸಹಸ್ರಾರು ಮಕ್ಕಳಿಗೆ ಬದುಕು ಕಲ್ಪಿಸಿದ ತಾಯಿ ಆಕೆ. ಬಹುಶಃ ನೂರಾರು ಕರುಳೂ ಹೊತ್ತು ಇಳಿಗಿಳಿದ್ದಿಳೊ ಏನೋ. ಆಕೆಯೇ “ ಸಿಂಧು ತಾಯಿ ಸಪ್ಕಾಲ್”.
ಬಾಲ್ಯ ವಿವಾಹ, ದಿನ ನಿತ್ಯದ ಕಿರುಕುಳ ಕ್ರೌರ್ಯ. ಎಲ್ಲಾ ಬಿಟ್ಟು ತವರಿಗೆ ಬಂದರೆ ಅಲ್ಲೂ ತಿರಸ್ಕಾರ. ಹೀಗೆ ಬದುಕು ಕಟ್ಟಿಕೊಳ್ಳಲು ಸಿಕ್ಕ ಎಲ್ಲಾ ಕೆಲಸ ಮಾಡುತ್ತಾ ಸಾಗುವ ಆಕೆ ಇಂದು ದೊಡ್ಡ ಉದ್ಯಮಿಯಾಗಿ ಬೆಳೆದ ಹಾದಿ ಮಾತ್ರ ಕರ್ಮ ಕಠೋರ. ಆಕೆಯೇ ಮುಂಬೈನ ಕಲ್ಪನಾ ಸರೋಜ್.
ಆಕ್ಸಿಡೆಂಟ್ ಆದಾಗ ಆಕೆಯ ಗಂಡ ತರಚಿದ ಗಾಯಗಳೊಂದಿಗೆ ಪಾರಾದರೆ ಈಕೆಯ ದೇಹ ಹಲವು ತುಣುಕುಗಳಾಗಿ ಛಿದ್ರಗೊಂಡಿತ್ತು. ಅಲ್ಲಿಂಧ ಎರಡು ವರ್ಷ ಆಸ್ಪತ್ರೆಯ ಗೋಡೆಯನ್ನೇ ದಿಟ್ಟಿಸುತ್ತಾ ಕಳೆದಳು. ಈಕೆಯನ್ನು ಜತನ ಮಾಡಬೇಕಾದ ಈಕೆಯ ಗಂಡ ಜತನ ಮಾಡುವುದು ದೂರ ತಿರುಗಿ ಸಹ ನೋಡದೇ ಇನ್ನೊಂಧು ಮದುವೆಯಾದ. ಆಗಿನ ಆಕೆಯ ಮಾನಸಿಕ ಘೋರಕ್ಕೇ ಬಹುಶಃ ಶಬ್ದಗಳಿಲ್ಲ. ಆದರೆ ಆಕೆಯ ಅಮ್ಮ ಅಮ್ಮು ಅಣ್ಣಂದಿರು ನೀಡಿದ ಸ್ಥೈರ್ಯದಿಂದ ಆಸ್ಪತ್ರೆಯ ಹಾಸಿಗೆಯ ಮೇಲೇ ಆಕೆಯ ಎಲ್ಲಾ ಭಾವನೆಗಳನ್ನು ಕ್ಯಾನ್ವಾಸ್ ಮೇಲೆ ಕುಂಚ ಎಳೆಯುತ್ತಾ ಸಾಗಿತು. ಇಂದು ಪ್ರಸಿದ್ದ ‘ ಮುನಿಬಾ ಕ್ಯಾನ್ವಾಸ್ ‘ ನ ಸ್ಥಾಪಕಿ. ಆಕೆಯೇ ಮುನಿಬಾ ಕ್ವಾನ್ವಾಸ್.
ಇವು ಮೂರ್ನಾಲ್ಕು ನಿದರ್ಶನಗಳಷ್ಟೇ.
ಮೇಲಿನ ಹೌಸ್ ಕೀಪಿಂಗ್ ನ ಮಹಿಳೆಯರು ಮೇಲಿನ ಉದಾಹರಣೆಗಳಿಗಿಂತ ಯಾವ ಕೋನದಲ್ಲೂ ಕಡಿಮೆಯಾಗಿ ಕಾಣುವುದಿಲ್ಲ. ಬದುಕು ಇವರ ಮುಂದೆ ತೆರೆದಿಡುತ್ತಾ ಸಾಗಿದ ಅಗಣಿತ ದುರ್ಬರಗಳಿಗೆ ಪದಗಳ ಅಭಾವವಾಗಬಹುದು. ಮದುವೆಯಾಗಿದೆ ಎಂಬ ಒಂದೇ ಒಂದು ಕಾರಣಕ್ಕೆ ಎಲ್ಲಾ ಕ್ರೌರ್ಯಗಳನ್ನೂ , ಲೋಲುಪತನ , ಕುಡಿತ…ಹೀಗೇ ಎಲ್ಲವನ್ನೂ ಸಹಿಸಿ ಸಹಿಸುತ್ತಲೇ ಬದುಕುತ್ತಿರುವ ಅದೆಷ್ಟು ಮಹಿಳೆಯರಿಲ್ಲ.
ಹೀಗೆ ಇನ್ನು ಭರಿಸಲಾಗದು, ಎನ್ನಿಸಿ ಮಾನಸಿಕ ಘಾತದಿಂದ ಹೊರಬರುವ ವೇಳೆ ಛಿದ್ರಗೊಂಡ ಆತ್ಮದ ಚೂರುಗಳೊಂದಿಗೆ ಮುಂದೆ ಜವಾಬ್ದಾರಿ ಹೊರಬೇಕಾದ ಜೀವಗಳನ್ನು ಬಗಲಿಗೆ ಸಿಕ್ಕಿಸಿಕೊಂಡು ಹೊರಬಿದ್ದಿರುತ್ತಾಳೆ. ಇಂಥ ನೋವಿನೊಂದಿಗೆ ಸದಾ ಆಕೆ ಭರಿಸಬೇಕಾದದ್ದು ಸುತ್ತಲಿನ ಸಮಾಜ. ಅನುಕಂಪ ಕರುಣೆ ತೋರಿಸುವ ನೆಪದಲ್ಲಿ ಇನ್ನಷ್ಟು ಆಕೆಯ ಮನಸ್ಸು ಗೀರುವ ಕೆಲಸ ಅತೀವ ಆಸ್ಥೆಯಿಂದ ಮಾಡುವ ಸುತ್ತಲಿನವರು. ಆದರೆ ವಾಸ್ತವವಾಗಿ ಹೀಗೆ ಮಾತಾಡುವ ಸುತ್ತಲಿನವರಿಗಿಂತ ಸಹಸ್ರ ಪಟ್ಟು ಎತ್ತರದಲ್ಲಿರುತ್ತಾರೆ ಇಂಥ ಮಹಿಳೆಯರು.
ದಿನವೂ ಕ್ರೌರ್ಯವನ್ನೇ ಉಣ್ಣುವ ಬದಲು, ತನ್ನ ಆತ್ಮ ಗೌರವ- ಆತ್ಮ ಸಮ್ಮಾನಕ್ಕಾಗಿ ಸ್ವತಂತ್ರ ಹೆಜ್ಜೆ ಹಾಕಿದವರು. ತಮ್ಮ ಇಚ್ಛೆಗಳನ್ನು ಹತ್ತಿಕ್ಕಿ ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಾ ಬದುಕುವವರು. ಇಂಥವರನ್ನು ಅಳೆಯಲು ಬುದ್ದಿ ಉಪಯೋಗಿಸುವ ಬದಲು ಅವರ ಧೈರ್ಯವನ್ನು ಮೆಚ್ಚಿ ಒಂದಷ್ಟು ಒಳ್ಳೆಯ ಮಾತುಗಳನ್ನು ಹೇಳಬಹುದು. ಇದೂ ಸಾಧ್ಯವಿಲ್ಲದಿದ್ದಲ್ಲಿ ಸುಮ್ಮನಿರಬಹುದು.
ನಮ್ಮ ದೇಶದಲ್ಲಿ ಮುವ್ವತ್ತೈದಕ್ಕೆ ಗಂಡನನ್ನು ಕಳೆದುಕೊಂಡ ಅಥವಾ ಭರಿಸಲಾರದ ಬಂಧದಿಂದ ಹೊರಬಂದರೂ ಮತ್ತೆ ಮದುವೆಯೇ ಆಗದೇ ಮಕ್ಕಳನ್ನೇ ಬದುಕು ಮಾಡಿಕೊಂಡ ಅದೆಷ್ಟು ಲಕ್ಷ ಮಹಿಳೆಯರಿದ್ದಾರೆ. ಇಲ್ಲೂ ಹಬೆಯಾಡುವುದು ಆಕೆಯ ಹೆಣ್ತನದ ವಿಶಾಲತೆ , ಕರುಣೆ ಮಮತೆ- ತಾನು ಮದುವೆಯಾದರೆ ಮಕ್ಕಳ ಗತಿ??? ಇದೊಂದು ಆಕೆಯ ಸಮಸ್ತ ಭಾವನೆಗಳ ಬಲಿ ಪಡೆದು ಬದುಕುವಂತೆ ಮಾಡುತ್ತದೆ.
ನಿಜಕ್ಕೂ ಹೀಗೆ ಎಲ್ಲಾ ದುರ್ಬರಗಳಿಂದ ಹೊರಬಂದು ಎಲ್ಲವನ್ನೂ ಒಬ್ಬರೇ ನಿಭಾಯಿಸುತ್ತಾ ಬದುಕುವ ಮಹಿಳೆಯರು ವಿಶಾಲ ನಸುಗಪ್ಪು ಆಗಸದ ನಕ್ಷತ್ರಗಳು. ಅವು ಒಂಟಿಯಾಗಿ ಕಾಣಿಸುವುದು ದಿಟವಾದರೂ ಉರಿದು ಹೊಳೆಯುವ ನಕ್ಷತ್ರಗಳು. ಎಲ್ಲಾ ಜವಾಬ್ದಾರಿ ನಿಭಾಯಿಸುತ್ತಾ ಕುಸಿದು ಕುಳಿತಾಗ ಧೈರ್ಯ ತುಂಬಿ ಏಳಿಸಲು ತನ್ನರೆಂದು ಒಬ್ಬರೂ ಇಲ್ಲದ, ತಮ್ಮನ್ನೆ ತಾವು ಏಳಿಸಿಕೊಂಡು ಮುನ್ನೆಡೆವ ಇಂಥ ಮಹಿಳೆಯರು ಇವರ ಧೈರ್ಯ ಮತ್ತು ಸಮಸ್ತ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಬದುಕುವ ಛಾತಿ ಬಹು ಏರು ಎತ್ತರದಲ್ಲಿ ಕಾಣುತ್ತದೆ.
ಎಲ್ಲಾ ದುರ್ಬರಗಳನ್ನೂ ಮೀರಿ ನಿಂತ ನಿಮ್ಮ ದಿಟ್ಟತೆ ನಿಮ್ಮ ಆತ್ಮ ಸಮ್ಮಾನ- ಆತ್ಮ ಗೌರವಕ್ಕಾಗಿ ಒಬ್ಬರೇ ಎಲ್ಲವನ್ನೂ ಎದುರಿಸುವ ನಿಮ್ಮ ಬದುಕಿನ ರೀತಿ ಬಹು ಗೌರವಾನ್ವಿತವಾದದ್ದು ಮತ್ತು ಅಭಿನಂತನಾರ್ಹವಾದದ್ದು. ಅಂತ ಎಲ್ಲಾ ಮಹಿಳೆಯರಿಗೂ ಈ ಲೇಖನ ಮಹಿಳಾ ದಿನದಂದು ಸಮರ್ಪಣೆ.
ಮಂಜುಳಾ ಡಿ. -ಲೇಖಕರು
ಸಿದ್ದಯ್ಯ ಪುರಾಣಿಕ ರವರ ಈ ಸಾಲುಗಳು ಹೀಗೆ ಧೈರ್ಯ ತೋರಿದ ಎಲ್ಲಾ ಮಹಿಳೆಯರಿಗಾಗಿ…
ಹಣ್ಣಾಗದಿಹ ಹೂವು, ಹೊನ್ನಾಗದಿಹ ಶಿಲೆಯು, ಮಣ್ಣಾಗದಿಹ ಮರಳು ವ್ಯರ್ಥವೆನಬೇಡl
ಇನ್ನಾವುದೋ ಸಾರ್ಥಕತೆಯವಕೆ; ನಿನ್ನೊಳು
ಧನ್ಯತೆಯ ನಿಕ್ಷೇಪ – ಮರುಳಸಿದ್ಧ.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..