ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಭಿಕ್ಷುಕ ಮತ್ತು ಅವನ ಶ್ವಾನ

ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ಹುಚ್ಚನಂತು ಅಲ್ಲ
ಕಳೆದು ಕೊಂಡಿರ ಬಹುದೇನೊ
ತನ್ನನು …

ಹುಡುಕ ಹೊರಟನೆ
ಎಂದು ಕೊಂಡರೆ
ಇಲ್ಲವೆ ಇಲ್ಲ
ಅಲ್ಲದ ‘ಅಲ್ಲಮ’ನೇ ಅವನು?
ಶೂನ್ಯಕ್ಕಿಂತಲೂ ಮೇಲೊಂದು
ಇರಬಹುದೊ ಎಂಬ ಪ್ರಶ್ನೆಗೆ
ಸವಾಲೆನಿಸಿಹನು
ಹಸಿದಿರ ಬಹುದೇ?
ಏನಿರ ಬಹುದೊ ಅವನ ಹುಡುಕಾಟ
ಒಂಟಿ ಇರುವೆನೆಂದಾದರೂ
ಅರಿದಿಹನೇ!

ತ್ಯಜಿಸಲಿಕ್ಕಾದರು,
ಎನಾದರು ಉಳಿಸಿರುವನೆ!
ಎಲ್ಲವನೂ ಬಿಟ್ಟಿರುವನೆ,
ನನ್ನದಲ್ಲವೆಂದು!
ಜ್ಞಾನದ ಸೂಕ್ಷ್ಮ
ಎಳೆಯ ಅರಿದಿಹನೆ?

ಅದೇನು ಕರ್ಮದ ನಂಟೊ
ಆ ಶ್ವಾನದ ಜೊತೆ ಜೊತೆಯಲೆ
ತನ್ನ ಅಳಿದುಳಿದ
ಪಯಣ ಸಾಗಿಸಿಹನು
ಆ ಸ್ನೇಹದ ಅಗಲು
ಒಂದು ನಿಮಿಷವಾದರು ಸಹಿಸನು
ತನ್ನನು ಸಹಿಸಲು
ಅಗಾಧ ಪ್ರಯತ್ನ ನಡೆಸಿಹನು.

ಯಾರಿಗೂ ಬೇಡವಾದ
ಜೀವಗಳೆದೆಷ್ಟಿರಬಹುದೊ
ಈ ಜೀವ ರಾಶಿಯಲಿ
ಅವನೆ ಬಿಟ್ಟನೊ
ಈ ಸಮಾಜವ! ಯಾರರಿವರು
ಪ್ರಶ್ನೆಗಳಲವಾರು
ಕಾರಣ ಒಂದೊ, ಹಲವೊ
ಹುಡುಕುತಿರುವನೊ
ಗೊತ್ತಿಲ್ಲದೆ ತನ್ನನು …