- ಷೋರೂಂ ಬೈಕಿನ ಸ್ವಗತಗಳು - ಜುಲೈ 10, 2023
- ಕಾವ್ಯವೆಂದರೆ ಅದೇನದು? - ಫೆಬ್ರುವರಿ 5, 2022
- ಗರುಡ ಗಮನ ; ವೃಷಭ ವಾಹನ - ನವೆಂಬರ್ 28, 2021
ಉಸಿರುಗಟ್ಟಿ
ಧೂಳು ಹಿಡಿದು ನಿಂತಿದ್ದೆ
ದಾರಿಯಲ್ಲಿ ಅತ್ತಿಂದಿತ್ತ ಚಲಿಸುವ
ಮನುಷ್ಯರಂತೆ ಕಾಣುವ
ರೋಬೋಟುಗಳನ್ನು ನೋಡುತ್ತ
ಅಸಹನೆಯನ್ನು ಅದುಮಿಟ್ಟುಕೊಂಡಿದ್ದೆ
ವರ್ಷಕ್ಕೊಮ್ಮೆ ಪೂಜೆ
ಆಗ ಸಿಂಗಾರ ಶೃಂಗಾರ ಎಲ್ಲವೂ
ಮುಡಿಸಿದ ಹೂವು ಕೂಡ
ಒಂದು ದಿನಕ್ಕೆ ಮಾತ್ರವೇ
ಗೆಳೆಯರೆಲ್ಲ ಒಬ್ಬೊಬ್ಬರೇ ಖಾಲಿ
ನಾನು ನನ್ನೊಳಗೆ ಖಾಲಿ
ಓಲ್ಡ್ ಮಾಡೆಲ್ ಆಗಿ ನಿಂತಿದ್ದೆ
ಬಹುಶಃ ನಾನೇ ಕೊನೆಯ ಪೀಸು
ನನ್ನ ನೋಡುವವರಾರಿಲ್ಲ ಈ ಜಗದಲ್ಲಿ
ಗಂಟೆಗೆ ಎಂಬತ್ತರ ವೇಗ ದಾಟುವುದಿಲ್ಲ
ಹಳ್ಳ ದಿಣ್ಣೆಗಳಿಗೆ ಜಗ್ಗುವುದಿಲ್ಲ
ಬಿದ್ದರೂ ಹೆಚ್ಚು ಘಾಸಿಯಾಗುವುದಿಲ್ಲ
ಇಲ್ಲಿ ನಾನು ಒರಿಜಿನಲ್ ಎಂದು
ಒತ್ತಿ ಹೇಳಬೇಕಿಲ್ಲ
ಒಬ್ಬ ಬಂದ
ಮುಟ್ಟಿ ನೋಡಿದ
ಸ್ಟಾರ್ಟ್ ಮಾಡಿದ
ನಾನು ಒಂದೇ ಬಾರಿಗೆ ಸ್ಪಂದಿಸಲಿಲ್ಲ
ಬೇಸರ ಮಾಡಿಕೊಂಡು ಹೋದ
ನನ್ನ ಬಳಿ ಸೆಲ್ಫ್ ಇಲ್ಲ
ಕಿಕ್ಕರ್ ಹೊಡೆಯಲು ಶಕ್ತರಿಲ್ಲ
ತುಂಬಾ ಸ್ಮಾರ್ಟ್ ಆಗಿದ್ದಾರೆ ಜನ
ನಾನು ಓಲ್ಡ್ ಆದರೂ
ಇವರನ್ನು ಅರ್ಥಮಾಡಿಕೊಳ್ಳಬಲ್ಲೆ
ಇನ್ನೊಬ್ಬ ಬಂದ
ದೂರದಿಂದಲೆ ಮೊಬೈಲ್ ಹಿಡಿದು
ದಾಳಿ ಮಾಡುವವನಂತೆ ಸುತ್ತುವರೆದ
ನನ್ನನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ
ಅವನಂದುಕೊಂಡಹಾಗೆ ನಾನಿರಲಿಲ್ಲವೇನೋ..
ಬಂದವನು ಹಾಗೇ ಹೋದ
ದಿನಗಳು ಕಳೆದವು
ಮತ್ತೆ ಮೂವರು ಬಂದರು
ನನ್ನ ನೋಡಿ ಖುಷಿಪಟ್ಟರು
ಬೆನ್ನಿಗೆ ಟಪ್ ಟಪ್ ಎಂದು ಬಡಿದರು
ಮುಖವನ್ನು ಸವರಿದರು
ನಾನೇ ಬೇಕು ಎಂದು ಹಠ ಹಿಡಿದರು
ನಾನು ನಿಂತಿದ್ದ ಪಕ್ಕದ ಗೋಡೆ ಕಡೆ
ಅವರ ಗಮನ ಹೋಗಲಿಲ್ಲ
ಅಲ್ಲೊಂದು ಸೂಚನಾ ಫಲಕವಿತ್ತು
ಹೆಚ್ಚು ಹೊಗೆ ಬಿಡುವ ನನ್ನನ್ನು
ಬ್ಯಾನ್ ಮಾಡಲಾಗಿದೆ ಎಂದು ಬರೆದಿತ್ತು!
*****
ಬೆನ್ನಿಗೆ – ಸೀಟು
ಮುಖವನ್ನು – ಡೂಮ್
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ