ಕನ್ನಡ ಭಾಷೆ ಮತ್ತು ಸಾಹಿತ್ಯ ಸೇವೆಗೆ ಸಂದ ‘ಭಾರತೀಯ ನಾರಿ ರತ್ನ’ ಪ್ರಶಸ್ತಿ
ಬೆಂಗಳೂರು, ಆಗಸ್ಟ್ 28: ‘ಭಾರತೀಯ ರತ್ನ’ ಪ್ರಶಸ್ತಿಯು ಜಾಗತಿಕವಾಗಿ ಎಲ್ಲಾ ವಲಯಗಳಲ್ಲಿ ಶ್ರೇಷ್ಠ ಮಹಿಳಾ ಸಾಧಕರನ್ನು ಗುರುತಿಸುವಂಥ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.
ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಉನ್ನತ ಕೊಡುಗೆಗಳನ್ನು ನೀಡುತ್ತಿರುವ ಕೇರಳ ಮೂಲದ ಕನ್ನಡ ಕವಯತ್ರಿ, ಕನ್ನಡ – ಮಲಯಾಳಂ ಅನುವಾದಕಿ, ದ್ರಾವಿಡ ಭಾಷಾ ಅನುವಾದಕರ ಸಂಘ (ರಿ) ಅಧ್ಯಕ್ಷೆಯಾದ ಡಾ. ಸುಷ್ಮಾಶಂಕರ್ ಅವರು 2022ನೇ ಸಾಲಿನ ‘ಭಾರತೀಯ ನಾರಿ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಗ್ಲೋಬಲ್ ಸ್ಕಾಲ್ರ್ಸ್ ಫೌಂಡೇಷನ್’ ವತಿಯಿಂದ, ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಗೌರವ ಸನ್ಮಾನ ಮಾಡಲಾಗುತ್ತಿದೆ. ಆಗಸ್ಟ್ 28, ಭಾನುವಾರದಂದು ಪೂಣೆಯ ನೋವೋಟೆಲ್‍ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪದ್ಮಶ್ರೀ ವಿಜೇತ ಶ್ರೀಮತಿ ಗದ್ದಂ ಪದ್ಮಜ ರೆಡ್ಡಿಯವರು ಎಲ್ಲಾ ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಹೆಚ್ಚಿನ ಬರಹಗಳಿಗಾಗಿ
ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ
ಚಿಂತಾಮಣಿ ಕೊಡ್ಲೆಕೆರೆ ಹೊಸ ಕಥಾ ಸಂಕಲನ
ಮಾರನಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಸನ್ಮಾನ