ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಳೆ ಜೋಕು, ಹೊಸ ನಗೆ :-)

ಜೋಕು ಹಳೆಯದಾದರೇನು..ನಗೆಯು ನವ ನವೀನಾ...! ನಗೆಯ ಟಾನಿಕ್ ಒಂದು ಚಮಚ ನಿಮಗಾಗಿ... :-)

ಹೆಂಡತಿ : ರೀ….. ಅಂಗಡಿಗೆ ಹೋಗಿ ಒಂದು ಕೆ.ಜಿ.  ಸಕ್ಕರೆ ತನ್ನಿ….
ಗಂಡ : ನಿನ್ನ ತುಟಿಯಲ್ಲಿ ಅಷ್ಟು ಸಕ್ಕರೆ ಇರೋವಾಗ ಬೇರೆ ಸಕ್ಕರೆ ಬೇಕೇನೆ ?
ಹೆಂಡತಿ : ನಿಮ್ಗೆ ಓಕೆ, ಆದ್ರೆ ನಿಮ್ಮ ಫ್ರೆಂಡ್ಸ್ ಬಂದ್ರೆ ???

ಗಂಡ : ಪಕ್ಕದ ಮನೆಯವರು ಅವರ ಗಂಡನ ತಿಥಿಗೆ ಕರೆದಿದ್ದಾರೆ, ನೀನು ಹೋಗಿ ಬಾ.
ಹೆಂಡತಿ : ನಾನು ಹೋಗಲ್ಲ. ನಾನು ಒಮ್ಮೆಯಾದರೂ ನನ್ನ ಗಂಡನ ತಿಥಿಗೆ ಅವರನ್ನು
ಕರೆಯಲಿಲ್ಲ.
ನಾನು ಹ್ಯಾಗೆ ಹೋಗುವುದು?

ಹೆಂಡತಿ: ರೀ…. ಒಂದು ವಿಷಯ ಹೇಳ್ತೀನಿ, ಹೊಡೆಯೋದಿಲ್ಲ ಅಂತ ಮಾತು ಕೊಡಿ?
ಗಂಡ: ಎನೇ ಹೀಗೆ ಹೇಳ್ತೀಯಾ, ನಾನು ನಿಂಗೆ  ಯಾವಾತ್ತಾದ್ರೂ ಹೊಡ್ದಿದ್ದೀನಾ, ಹೇಳು ಏನು
ವಿಷಯ?
ಹೆಂಡತಿ: ನಂಗೀಗ ಮೂರು ತಿಂಗ್ಳು !
ಗಂಡ: ಇದು ಖುಷಿಯ ವಿಷಯ ಕಣೇ, ಇದಕ್ಕೆಲ್ಲ ಯಾವ ಗಂಡ ಹೆಂಡತಿಗೆ ಹೊಡೀತಾನೆ?
ಹೆಂಡತಿ: ಕಾಲೇಜ್‍ನಲ್ಲಿದ್ದಾಗ ಅಪ್ಪಂಗೆ ಹೀಗೆ  ವಿಷಯ ಹೇಳಿದ್ದೆ, ಆವಾಗ ಅಪ್ಪ ತುಂಬಾ
ಹೊಡ್ದಿದ್ರು !!!

ರಾಮ : ಲೋ ಶಾಮ ನೆನ್ನೆ ನನ್ನ ಹೆಂಡತಿಯ ಕಣ್ಣಿಗೆ ಕಸ ಬಿದ್ಧು ೫೦೦ ರೂ ಕರ್ಚಾಯಿತು
ಕಣೋ ???
ಶಾಮ : ಅಯ್ಯೌ ಅಷ್ಟೇನ ನೆನ್ನೆ ನನ್ನ ಹೆಂಡತಿಯ  ಕಣ್ಣಿಗೆ ಸೀರೆ ಬಿದ್ಧು ೫೦೦೦
ಖರ್ಚಾಯಿತು. !!!

ರಾತ್ರಿ ಕರೆಂಟು ಹೋಗಿತ್ತು !
ಆಗ ಮಂಕ ಹೆಂಡತಿಗೆ ಹೇಳಿದ : ಲೇ ಫ್ಯಾನ್ ಆದ್ರೂ ಹಾಕೆ………. !!!
ಮಂಕಿ : ಆಡಿದ್ರಲ್ಲ ಮಂಕುತನದ ಮಾತು ! ಫ್ಯಾನ್ ಹಾಕಿದ್ರೆ ಕ್ಯಾಂಡಲ್
ಆರಿಹೋಗಲ್ವ ? ? ?

ರಾಮು : ಏನಮ್ಮ ನಿನ್ನ ಗಂಡ ಚೆನ್ನಾಗಿದ್ದಾನ?
ಮೀನಾಕ್ಷಿ : ಏನ್ ಸ್ವಾಮಿ ಏಕವಚನದಲ್ಲಿ  ಮಾತನಾಡಿಸ್ತಿರಿ.
ರಾಮು : ಓಹ್, ಏನಮ್ಮ ನಿನ್ನ ಗಂಡಂದಿರೆಲ್ಲಾ  ಚೆನ್ನಾಗಿದ್ದಾರ ???