ಈ ಹಿಂದೆ ಅಷ್ಟಾಂಗ ಯೋಗದಲ್ಲಿನ ಏಳು ರೀತಿಯನ್ನು ಹೇಳಿದ್ದಾಯ್ತು. ಇನ್ನು ಅದರಲ್ಲಿನ ಎಂಟನೇ ಮತ್ತು ಕೊನೆಯ ಹಂತ ಸಮಾಧಿ ಸ್ಥಿತಿ.
ಸಮಾಧಿ ಅಂದರೆ, ಸಮ – ಸರಿಸಮಾನವಾದ, ಧಿ ಅರ್ಥಾತ್ ಬುದ್ಧಿ, ಸಮ ಚಿತ್ತದಲ್ಲಿ ಬುದ್ಧಿಯನ್ನು ಇರಿಸುವ ವಿಧಾನ. ಇನ್ನೊಂದು ರೀತಿಯಲ್ಲಿ ವೈಯಕ್ತಿಕವಾಗಿ ಅನಿಸುತ್ತದೆ ನೀವು ಹೆಣ್ಣು ಅಥವಾ ಗಂಡು… ಏನೇ ಆಗಿರಲಿ, ನಿಮ್ಮ ಒಳಗೆ ಈ ಎರಡು ಅಂಶಗಳನ್ನು ಸಮ ಪ್ರಮಾಣದಲ್ಲಿ ಇಡುವುದರ ಆದಿ, ಅಂದರೆ ಪ್ರಾರಂಭ ಕೂಡ ಇರಬಹುದು.
ಇದರಲ್ಲಿ ಮುಖ್ಯವಾಗಿ ಎರಡು ರೀತಿಯದ್ದು ಇರುತ್ತವೆ, ಅವು.
- ಸಬೀಜ ಸಮಾಧಿ ಅಥವಾ ಸವಿಕಲ್ಪ ಸಮಾಧಿ
- ನಿರ್ಬೀಜ ಅಥವಾ ನಿರ್ವಿಕಲ್ಪ ಸಮಾಧಿ
ಸಬೀಜ ಸಮಾಧಿ
ಇದರಲ್ಲಿ ಹಲವು ರೀತಿಯದ್ದು ಇವೆ, ಒಬ್ಬರು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳೊಣ, ಅವರಿಗೆ ಹಲವು ಸಂಗತಿಗಳು ಗೋಚರಿಸುತ್ತಿದ್ದರೆ ಅದು ಒಂದು ರೀತಿಯ ಸಮಾಧಿ.
ಕೆಲವರಿಗೆ ಯಾವುದಾದರೂ ಒಂದು ಚಿಂತನೆ ಇಲ್ಲವೇ ಉದ್ದೇಶ ಇರಬೇಕು, ಧ್ಯಾನ ಮಾಡಲು ಎನ್ನುವುದು ಸವಿಕಲ್ಪ ಸಮಾಧಿ.
ಪ್ರತಿದಿನ ನಿದ್ರೆ ಮಾಡುವುದು, ಒಂದು ರೀತಿ.
ಅದರಲ್ಲಿ ಕನಸುಗಳು ಬಂದು ನಿಮಗೆ ಹಲವು ದೈವಗಳು ಕಾಣುತ್ತವೆ, ಅಂದರೆ ಅದು ಒಂದು ಹಂತದ ಸಮಾಧಿ.
ಒಟ್ಟಾರೆಯಾಗಿ ಏಳು ರೀತಿಯಲ್ಲಿ ಸಬೀಜ ಸಮಾಧಿ ಸ್ಥಿತಿಗಳು ಇರಬಹುದು.
ಇನ್ನು ಎರಡನೆಯದಾಗಿ ನಿರ್ಬೀಜ ಅಥವಾ ನಿರ್ವಿಕಲ್ಪ ಸಮಾಧಿ.
ಇದಕ್ಕೆ ಬರುವುದಕ್ಕೆ ಮುನ್ನ ಹಲವು ರೀತಿಯ ಧ್ಯಾನಗಳ ಬಗ್ಗೆ ನೋಡುವುದಾದರೆ…
ಶಾಂಭವಿ
ಚಿತ್ತ್ ಶಕ್ತಿ ಧ್ಯಾನ
ಚಕ್ರಗಳ ಧ್ಯಾನ
ಕ್ರಿಯಾ ಧ್ಯಾನ
ಇವೆಲ್ಲವನ್ನೂ ಮೀರಿ ಎತ್ತರದ ಸ್ಥತರದಲ್ಲಿ ಇರುವುದು ‘ಶೂನ್ಯ ಧ್ಯಾನ’
ಯಾವುದಕ್ಕೆ ಆಕಾರ, ಗಾತ್ರವಿಲ್ಲ ಅದರ ಆಕಾರ.. ಗಾತ್ರವನ್ನು,
ಯಾವುದಕ್ಕೆ ರುಚಿಯಿಲ್ಲ ಅದರ ರುಚಿಯನ್ನು,
ಯಾವುದಕ್ಕೆ ಬಣ್ಣವಿಲ್ಲ ಅದರ ಬಣ್ಣವನ್ನು,
ಯಾವುದಕ್ಕೆ ಗಂಧವಿಲ್ಲ ಅದರ ವಾಸನೆಯನ್ನು, ಗ್ರಹಿಸುವುದು ಆಗಿದೆ.
ಇನ್ನು ನಿರ್ವಿಕಲ್ಪ ಸಮಾಧಿ, ಎಂದರೆ ಆ ಸ್ಥಿತಿಯಲ್ಲಿ ಇರುವವರಿಗೆ ಧ್ಯಾನದಲ್ಲಿ ಏನು ಗೋಚರಿಸುವುದಿಲ್ಲ, ಸರಳಿ ಕರಸಿ ಹೇಳುವುದಾದರೆ ನೀವು ಆಳವಾದ ನಿದ್ರೆಯಲ್ಲಿ
ಇರುವ ಸ್ಥಿತಿಯನ್ನು, ಎಚ್ಚರದ ಸ್ಥಿತಿಯಲ್ಲಿ ತಲುಪುವುದು. ಈ ಸ್ಥಿತಿಯಲ್ಲಿರುವ ಸಾಧಕರಿಗೆ ಒಂದು ಉದ್ದೇಶ ಇರುವುದಿಲ್ಲ ಧ್ಯಾನ ಮಾಡಲು.
ಹಾಗೂ ನಮ್ಮ ದೇಹದಲ್ಲಿ ಮಾಂಸ ಮತ್ತು ಚರ್ಮಗಳು ಭೂಮಿಯನ್ನು, ಖನಿಜಗಳು, ರಕ್ತ, ದ್ರವ ಹಾಗೂ ನೀರು ಮತ್ತು ಹಣ್ಣುಗಳು ಮತ್ತು ತರಕಾರಿಗಳಿಂದ ನೀರಿನಂಶಗಳು ಜಲವನ್ನು, ಇದು ಎಪ್ಪತ್ತು ಪ್ರತಿಶತಃ ಇದೆ, ಇನ್ನು ಜಠರ ಮತ್ತು ಕಣ್ಣು ಅಗ್ನಿಯನ್ನು
ಗಾಳಿ ದೇಹದ ಪ್ರತಿಯೊಂದು ಭಾಗದಲ್ಲಿ ಇರುವುದು ಇದು ವಾಯುವನ್ನು. ಮತ್ತು ಪ್ರತಿಯೊಂದು ಮೂಳೆ ಕೂಡುವ ಭಾಗಗಳು, ಅಣುವಿನ ಮಧ್ಯೆ ಒಂದು ಕಾಲಿ ಜಾಗವಿದ್ದು (space) ಇದು ಆಕಾಶ ದ್ರವ್ಯ (Either) ವನ್ನು ಪ್ರತಿನಿಧಿಸುತ್ತವೆ.
ಇದನ್ನು ಹೇಳಿದ ಕಾರಣ ಈ ಹಿಂದಿನ ಬರಹದಲ್ಲಿ ಹೇಳಿದ ಪೂರಕ, ಕುಂಭಕ, ರೇಚಕದ ಕ್ರಿಯೆ ಇದರಲ್ಲಿ ಕುಂಭಕದಲ್ಲಿ ರೇಚಕ ಮಾಡುವುದು, ಅಂದರೆ ಅಲ್ಲಿಂದ ಎಲ್ಲವನ್ನೂ ತೆಗೆದು ಸಂಪೂರ್ಣವಾಗಿ ಖಾಲಿ ಮಾಡುವುದು. ಹೇಗೆ ಅಂದರೆ, ನೀವು ಒಂದು ಕೋಣೆಯನ್ನು ಖಾಲಿ ಮಾಡಿದ್ದಿರಿ ಎಂದುಕೊಳ್ಳಿ. ಅಲ್ಲಿ ನೀವು ವಸ್ತುಗಳನ್ನು ಮಾತ್ರ ಆಚೆ ಇಡುತ್ತಿರಾ ತಾನೆ? ಆದರೆ ಇಲ್ಲಿ ಹೇಳಿದ್ದು ವಸ್ತುಗಳ ಜೊತೆಗೆ ಕೋಣೆಯ ಉಷ್ಣಾಂಶ, ತೇವಾಂಶ ಮತ್ತು ಗಾಳಿಯನ್ನು ಸಹ ತೆಗೆದುಬಿಡುವುದು.
ಹಾಗೆ ನೀವು ಎಂದು ಗುರುತಿಸಿಕೊಂಡಿರುವ ನಿಮ್ಮ ಎಲ್ಲಾ ಗುರುತುಗಳನ್ನು ಕುಂಭಕದಲ್ಲಿ ರೇಚಕ ಮಾಡುವುದು.
ಬಹುಶಃ ಇದನ್ನು ಶೂನ್ಯದಲ್ಲಿನ ನಿರ್ವಿಕಲ್ಪ ಎನ್ನಬಹುದು, ಪ್ರಸ್ತುತ ಇದೆ ಸ್ಥಿತಿಯಲ್ಲಿ ಇವ ಕೂರುವುದು, ಆ ಮಾತು ಬೇರೆ.
ಇನ್ನು ಮುಂದಿನ ಬರಹದಲ್ಲಿ ಚಕ್ರಗಳ ಬಗ್ಗೆ ನೋಡೋಣ.
(ಮುಂದುವರಿಯುವುದು)
ಸೂಚನೆ : ವೈಯಕ್ತಿಕ ಮಾರ್ಗದರ್ಶನ ಇಲ್ಲದೆ ಅಭ್ಯಾಸ ಮಾಡುವುದು ಬೇಡ.
ಹೆಚ್ಚಿನ ಬರಹಗಳಿಗಾಗಿ
דירות דיסקרטיות בקריות במיקום מרכזי And The Mel Gibson Effect
The Secret For נערות ליווי בבאר שבע למסיבות פרטיות Revealed in Seven Simple Steps
What The Pope Can Teach You About ליווי בחינם בירושלים עם תמונות אמיתיות