ಇತ್ತೀಚಿನ ಬರಹಗಳು: ರಾಮ್ ಕುಮಾರ್ ಡಿ.ಟಿ. (ಎಲ್ಲವನ್ನು ಓದಿ)
- ನನ್ನಲ್ಲೊಂದು ಕಡಲು - ಏಪ್ರಿಲ್ 11, 2021
- ಅಪರಿಚಿತ - ಏಪ್ರಿಲ್ 5, 2021
- ಆದಿ ಮತ್ತು ಅಂತ್ಯ - ಡಿಸಂಬರ್ 30, 2020
ಉಸಿರಿಗೂ ಉಸಿರಿದೆಯೇ!
ನೆಮ್ಮದಿಯ ನಿಟ್ಟುಸಿರಿದೆಯೇ?
ಜೀವವಿದು, ಕಲ್ಪನೆಯ ಬಾಹ್ಯಾಕಾಶ
ಮೀರಿದ ಜೀವನದಿಯಿದು
ಜೀವಕ್ಕೆ ಪ್ರಥಮ ಆಗಮ ಉಸಿರು
ಕೊನೆಯ ನಿರ್ಗಮವೂ, ಉಸಿರೇ
ಇದರ ಹಿಡಿತಕ್ಕೆ ಎಣೆಯೆಲ್ಲಿ?
ಈ ಜೀವಕ್ಕೆ ಉಸಿರಿದು,
ಜೀವವಿದು, ದೈವವಿದು
ಆತ್ಮಕ್ಕೂ ಉಸಿರಿರಬಹುದೇ!
ನಾಮವಷ್ಟೇ ಅಸ್ಪಷ್ಟ
ಇರುವಿಕೆ ನಿರಮ್ತರ
ಇರಬಹುದೇ,
ಆತ್ಮಕ್ಕೂ ಉಸಿರಿರಬಹುದೇ?
ಇರಬಹುದೇ,
ಉಸಿರಿಗೂ ಉಸಿರಿರಬಹುದೇ?
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ