ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಣು ಕಣಗಳ ಕಥೆ !!!

ಸೃಷ್ಟಿಯ ರಹಸ್ಯದ ಬಗ್ಗೆ ವಸ್ತು ನಿಷ್ಟವಾಗಿ ಬರೆದವರು ನಮ್ಮ ವಿಜ್ನಾನ ಲೇಖಕ ರಾಜೀವ್... ಕೂತೂಹಲಕಾರಿ ಲೇಖನ ನಿಮಗಾಗಿ..
ರಾಜೀವ್

ಸೃಷ್ಟಿಯ ರಹಸ್ಯ ವಿಜ್ಞಾನಕ್ಕೆ ತಿಳಿದಿಲ್ಲ ಬಹುಶಃ ಗೊತ್ತಾಗುವುದಿಲ್ಲವೆನೊ….!!!!! ಆದರೆ ವಿಜ್ಞಾನಕ್ಕೆ ಗೊತ್ತಿರುವುದು ಏನೆಂದರೆ ಸೃಷ್ಟಿ ಹೇಗೆ ಕೆಲಸ ಮಾಡುತ್ತೆ ಎನ್ನುವುದು. ಇದರ ಮೇಲೆ ಅನ್ವೇಷಣೆ ಮಾಡಿದ ವಿಜ್ಞಾನಿಗಳು ಹಲವಾರು ಥಿಯರಿ ಮಂಡಿಸಿದರು ಇದನು ಬಳಸಿ ಇಂಜಿನಿಯರ್ ಗಳು ಅವರ ತಿಯರಿಯನ್ನು ಪ್ರಾಕ್ಟಿಕಲ್ ಆಗಿ ಕೆಲಸ ಮಾಡುವಂತೆ ಮಾಡಿದರು. ಇಂದು ಮಾನವ ಚಂದ್ರನ ಮೇಲೆ ಕಾಲು ಇಡಲು ಸಾಧ್ಯವಾಗಿದ್ದು ವಿಜ್ಞಾನಿಗಳ ಅನ್ವೇಷಣೆ ಹಾಗು ಇಂಜಿನಿಯರ್ ಗಳ ತಂತ್ರಜ್ಞಾನ!!!

ರಾಜೀವ್, ವೈಜ್ನಾನಿಕ ಲೇಖಕರು

ಇದು ತುಂಬ ದೀರ್ಘವಾದ ವಿಚಾರ ಸಾಕಷ್ಟು ಜನ ಸೃಷ್ಟಿಯ ಬಗ್ಗೆ ಹಲವಾರು ಪ್ರಶ್ನೆಗಳು ಕೇಳುತ್ತಿರುತ್ತಾರೆ. ವಿಜ್ಞಾನ ಇದುವರೆಗು ಸೃಷ್ಟಿಯನ್ನು ಸಂಪೂರ್ಣ ತಿಳಿದುಕೊಂಡಿಲ್ಲ ಹಲವಾರು ಅನ್ವೇಷಣೆಗಳು ಅದರ ಮೇಲೆ ಇನ್ನು ನಡೆಯುತ್ತಿದ್ದು ಇನ್ನಷ್ಟು ವಿಚಾರಗಳ ನಮಗೆ ತಿಳಿಯಬೇಕಿದೆ.

ಇಡಿ ಬ್ರಹ್ಮಾಂಡದಲ್ಲಿ ಇರುವ ಅತ್ಯಂತ ದೊಡ್ಡ ನಕ್ಷತ್ರದಿಂದ ಹಿಡಿದು ನೀವು ನೋಡುತ್ತಿರುವ ಮೊಬೈಲ್ ವರೆಗು ಪ್ರತಿಯೊಂದು ಅಣುಗಳಿಂದ ಮಾಡಲಾಗಿದೆ. ಇದನ್ನು ಮೊದಲು ಕಣಾದ ಮಹರ್ಷಿಗಳು ಪರಮಾಣು ಅಂದರು ಆದರೆ ಅದು ವಿಭಾಗಿಸಲು ಬಹುದು ಅಂತ ಹನ್ನೆರಡನೆ ಶತಮಾನದಲ್ಲಿ ಮಧ್ವಾಚಾರ್ಯರು ಅಣುಭಾಷ್ಯದಲ್ಲಿ ತಿಳಿಸಿದರು ಅದರ ಮೇಲೆ ಭಾರತೀಯರ ಗಮನ ಹೋಗಲಿಲ್ಲ.

1940 ರಿಂದ 1960ರವರೆಗೂ ಅಣುಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ಕಣ ಭೌತಶಾಸ್ತ್ರ(Particle physics) ತಿಳಿಸಿತು ನಂತರ ಬಂದ ಜೆಜೆ ಥಾಂಮ್ಸನ್, ರುಥರ್ ಫೋರ್ಡ್ ಹಾಗು ಜೇಮ್ಸ್ ಛಾಡ್ವಿಕ್ ಅಣುವಿನಲ್ಲಿ ನ್ಯೂಟ್ರಾನ್, ಪ್ರೋಟಾನ್ ಇದ್ದು ಅದು ಅಣುವಿನ ಮಧ್ಯಭಾಗ ನ್ಯೂಕ್ಲಿಯಸ್ ನಿರ್ಮಿಸುತ್ತದೆ ಹಾಗು ಎಲೆಕ್ಟ್ರಾನ್ ಅದರ ಸುತ್ತ ಸುತ್ತುತ್ತದೆಯೆಂದು ನಿಮ್ಮ ಶಾಲೆಯಲ್ಲಿ ಪಾಠ ಮಾಡಿಯೆ ಇರುತ್ತಾರೆ.

19ನೇ ಹಾಗು 20ನೇ ಶತಮಾನದಿಂದ ಅಣುವಿನ ಆಕಾರದ ಬಗ್ಗೆ ಚರ್ಚೆಯಾಗುತ್ತಿದೆ ಅಂದಹಾಗೆ ಇದುವರೆಗು ಅಣುವಿಗೆ ಒಂದು ಭೌತಿಕ ಆಕಾರ ನೀಡಲಾಗಿಲ್ಲ ಇದಕ್ಕೆ ಕಾರಣ hiesenberg uncertainity principle. ಈ ಸಮಯದಲ್ಲಿ ನಮ್ಮ ಸಹಾಯಕ್ಕೆ ಬಂದುದೆ Particle accelerator  ಇದನ್ನು ಬಳಸಿ ಹಲವಾರು ರಹಸ್ಯ ತಿಳಿಯಲಾಯಿತು. ಆದರೆ ನಂತರ ಸ್ವಿಜರ್ಲ್ಯಾಂಡ್ ನಲ್ಲಿ ನಿರ್ಮಿಸಿದ Large hydric collider(LHC) ನ್ಯೂಟ್ರಾನ್ ಹಾಗು ಪ್ರೋಟಾನ್ ಅಣುವಿನ ಅಂತಿಮ ವಿಭಾಗವಲ್ಲ ಅಂತ ತಿಳಿಸಿಕೊಡ್ತು.

LHC ವ್ಯಾಸ 25 ಕಿಮಿ ಇದ್ದು ಅದರೊಳಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಪ್ರೋಟಾನ್ ಅನ್ನು ಬೆಳಕಿನ ವೇಗದಲ್ಲಿ ಕಳುಹಿಸಲಾಗುತ್ತದೆ. ನೆನಪಿರಲ್ಲಿ ಬೆಳಕಿನ ವೇಗ ಪ್ರೋಟಾನಿಗು ಅಸಾಧ್ಯವಾದರು ಬೆಳಕಿನ ವೇಗದ ಶೇ.99.9999% ವೇಗವನ್ನು ಅದು ಪಡೆಯುವ ಲಕ್ಷ್ಮಣ ಹೊಂದಿದೆ.ಹೀಗೆ ಹೋದಂತಹ ಎರಡು ಪ್ರೋಟಾನ್ ಪರಸ್ಪರ ಡಿಕ್ಕಿ ಹೊಡೆಯುವ ಜಾಗದಲ್ಲಿ  ನೂರಕ್ಕು ಹೆಚ್ಚು ಸೆನ್ಸಾರ್ ಅಳವಡಿಸಿರುತ್ತಾರೆ ಹಾಗು ಇದನ್ನು ಫೋಟೊ ಹಿಡಿಯುವ ಸಲುವಾಗಿ ಜಗತ್ತಿನ ಅತ್ಯಂತ ವೇಗದ ಶಟ್ಟರ್ ಹೊಂದಿರು ಕ್ಯಾಮರ ಬಳಸಲಾಗುತ್ತೆ. ಡಿಕ್ಕಿ ಹೊಡೆದುಕೊಂಡು ಎರಡು ಪ್ರೋಟಾನ್ ವಿವಿಧ ಕಣಗಳನ್ನು ಸೃಷ್ಟಿಸುತ್ತದೆ ಆಶ್ಚರ್ಯ ಅಂದರೆ ಆ ಸಮಯದಲ್ಲಿ ಪ್ರೋಟಾನ್ ಬೇರೊಂದು ಕಣವಾಗಿ ಬದಲಾಗುತ್ತದೆ. ದುರದೃಷ್ಟವಶಾತ್ ನಾವು ಕೆಲವೊಂದು ಕಣಗಳನ್ನು ಮಾತ್ರ ನೋಡಲು ಸಾಧ್ಯವಾಯ್ತು ಆದರೆ ಇದರಿಂದ ಹಲವಾರು ಅಗೊಚರವಾದ ಕಣಗಳು ಹೊರಹೊಮ್ಮುತ್ತದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಹೀಗೆ  CERN ವಿಜ್ಞಾನಿಗಳು  Atlas ಎಂಬ ಮತ್ತೊ particle accelerator  ಅನ್ನು ಬಳಸುತ್ತಾರೆ ಅದರೆ ಅದು  LHC ಅಷ್ಟು ನಿಖರತೆ ಹೊಂದಿಲ್ಲ.

ಇದು ಪ್ರಯೋಗವಾಯಿತು ಇನ್ನು ಅದರಿಂದಾದ ಫಲಿತಾಂಶ ನೋಡೋಣ. ಅಣುವಿನೊಳಗೆ ಇರುವಂತಹ ಪ್ರೋಟಾನ್ ಹಾಗು ನ್ಯೂಟ್ರಾನ್ ಒಳಗೆ ಕ್ವಾರ್ಕ್ಸ್ (ಹೆಸರು ವಿಚಿತ್ರವಾಗಿದೆ ಕ್ಷಮಿಸಿ)! ಇರುತ್ತದೆ. ಪ್ರೋಟಾನ್ ಒಳಗೆ ಎರಡು upquarks ಹಾಗು ಒಂದು  downquarks ಇದ್ದು ಅದಕ್ಕೆ ಅದು ಪಾಸಿಟೀವ್ ಚಾರ್ಜ್ ಅನ್ನು ನೀಡುತ್ತೆ ಹಾಗು ನ್ಯೂಟ್ರಾನ್ ಒಳಗೆ 2 downquarks ಹಾಗು 1 up quarks ಇದ್ದು ಅದಕ್ಕೆ ಅದು ನ್ಯೂಟ್ರಲ್ ಆಗುತ್ತೆ ಚಾರ್ಜ್ ಇರಿವುದಿಲ್ಲ.

ಈ qurks ಮತ್ತೆ ವಿಭಜನೆ ಮಾಡಲು ಸಾಧ್ಯವಿಲ್ಲ ಕೆಲವೊಮ್ಮೆ up quarks, down quarks ಜೊತೆಗೆ charm quarks, strange quarks, top qurks ಹಾಗು  down quarks ಇರುತ್ತದೆಯಾದ್ರು ಅವು ಅಷ್ಟೊಂದು ಪ್ರಭಾವ ಬೀರುವುದಿಲ್ಲ ಅದರ ಜೀವಿತಾವಧಿ ಅತ್ಯಂತ ಕಡಿಮೆ ಈ quarks ಸಮೂಹವನ್ನೆ ನಾವು  ಫರ್ಮಿಯಾನ್ಸ್ ಸಮೂಹ ಅಂತೀವಿ.

ಇನ್ನು ಇದರ ಜೊತೆಗೆ ನಮಗೆ ಲೆಪ್ಟಾನ್ಸ್ ಸಮೂಹವು ದೊರೆಯಿತು ಅದರ ಗುಂಪಲ್ಲಿ ಮೊದಲು ಕಂಡುಹಿಡಿಯಲಾದ ಕಣವೆ ಎಲೆಕ್ಟ್ರಾನ್. ಇದು ಉಳಿದೆರಡರಂತೆ ಇರದೆ ಬ್ರಹ್ಮಾಂಡದಲ್ಲಿ ಸ್ವಾತಂತ್ರ್ಯವಾಗಿ ಚಲಿಸುತ್ತದೆ ಹಾಗು  negtive charge( – )ಹೊಂದಿದೆ ಆದರೂ ಹೆಚ್ಚಾಗಿ ನ್ಯೂಕ್ಲಿಯಸ್ ಸುತ್ತ ಸುತ್ತುತ್ತು ಜಗತ್ತಿನ ಎಲ್ಲವನ್ನು ರಚೆನೆ ಮಾಡಿದೆ. ಒಟ್ಟಾರೆ ಸೃಷ್ಟಿ up quarks, down qurks ಹಾಗು  electron ಮಾತ್ರದಿಂದವಾಗಿದೆ ಎನ್ನಬಹುದು.

ಆದರೆ ಸಂಗತಿ ಇಲ್ಲಿಯೆ ನಿಲ್ಲಲ್ಲಿಲ್ಲ ಈ ಎಲೆಕ್ಟ್ರಾನ್ ಜೊತೆಗೆ ಅದಕ್ಕಿಂತ ತೂಕ ಕಡಿಮೆಯಾದ ಕಣಗಳಿವೆ ಅವೆ ಮ್ಯುಆನ್(muon) ಹಾಗು ಟಾವ್(tau) ಅವನ್ನು ಎಲೆಕ್ಟ್ರಾನಿನ ತಮ್ಮಂದಿರು ಅಂತಾರೆ ಅವು ಮತ್ತೊಂದು ಎಲೆಕ್ಟ್ರಾನ್ ಆದರೂ ಅದರ ಜೀವಿತಾವಧಿ ತುಂಬ ಕಡಿಮೆಯಿದ್ದು ಬಹು ಬೇಗನೆ ಎಲೆಕ್ಟ್ರಾನ್ ಆಗಿ ಪರಿವರ್ತನೆ ಹೊಂದುತ್ತವೆ ಇದರ ಜೊತೆಗೆ ನ್ಯೂಟ್ರಿನೊ ಎಂಬುದು ಕೂಡ ಇದೆ ಇವು ನ್ಯೂಟ್ರಾನಿನ ಹಾಗೆ ಸ್ಥಿರ.

ಎಲೆಕ್ಟ್ರಾನ್, ಮ್ಯುಆನ್ ಹಾಗು ಟವ್ ಇವುಗಳೊಂದಿಗೆ ನ್ಯೂಟ್ರಾನ್ ಮೈತ್ರಿ ಮಾಡಿಕೊಂಡು ಎಲೆಕ್ಟ್ರಾನ್ ನ್ಯೂಟ್ರಿನೋ, ಮ್ಯುಆನ್ ನ್ಯೂಟ್ರಿನೋ ಹಾಗು ಟವ್ ನ್ಯೂಟ್ರಿನೊ ಎಂಬ ಮೂರು ಕಣಗಳನ್ನು ರಚಿಸಿಕೊಂಡಿವೆ ಇದು leptons  ಸಮೂಹ ಇವು ಸ್ವಾತಂತ್ರ್ಯವಾಗಿ ಚಲಿಸುತ್ತ ಇರುತ್ತವೆ.

ಇನ್ನು ಇವು ವಿವಿಧ ಪ್ರಕೃತಿಯ ನಾಲ್ಕು ಬಲಗಳನ್ನು  ನಿತ್ಯವಾಗಿ ಸಂವಹನ ನಡೆಸುತ್ತಿರುತ್ತದೆ.

ವಿಜ್ಞಾನಿಗಳ ಪ್ರಕಾರ ಬ್ರಹ್ಮಾಂಡದಲ್ಲಿ ನಾಲ್ಕು ಬಲಗಳಿವೆ(force)
1. ಶಕ್ತಿಯುತವಾದ ಬಲ(strong force).
2. ಅಶಕ್ತಿಯುತ ಬಲ(weak force).
3. ವಿದ್ಯುತ್ – ಆಯಸ್ಕಾಂತೀಯ ಬಲ(electromagnetic force).
4. ಗುರುತ್ವಾಕರ್ಷಣಾ ಬಲ

ಈ ನಾಲ್ಕು ಬಲಗಳಿಂದಲೆ ಬ್ರಹ್ಮಾಂಡದ ಎಲ್ಲಾ ಕ್ರಿಯೆಗಳು ನಡೆಯುವುದು  ಬಲಗಳೇನೊ ಇವೆ ಹಾಗಾದರೆ ಈ ಬಲಗಳಿಗೆ ಕಾರಣವು ಇರಲೇಬೇಕು ಅದಕ್ಕೆಂದೆ ಈ ಹಿಂದೆ ನಾನು ಕಣಗಳಲ್ಲಿನ ಎರಡು ಪ್ರಭೇದ ತಿಳಿಸಿದೆ. ಲೆಪ್ಟಾನ್ಸ್(ಎಲೆಕ್ಟ್ರಾನ್, ಮ್ಯುಆನ್ ಹಾಗು ಟವ್) ಸ್ವಾತಂತ್ರ್ಯವಾಗಿರುವ ಕಣಗಳು ಹಾಗು ಫರ್ಮಿಯಾನ್ಸ್(ಎಲ್ಲಾ ಕ್ವಾರ್ಕ್ ಸಮೂಹ) ನ್ಯೂಟ್ರಾನ್ ಹಾಗು ಪ್ರೋಟಾನ್ ಒಳಗೆ ಇರುವಂತಹದು.

ಈ ಬಲಗಳೆಲ್ಲ ಇವುಗಳ ಮೇಲೆಯೆ ಅವಲಂಭಿತವಾಗಿದೆ:

1. ಶಕ್ತಿಯುತ ಬಲ(Strong force)
ಇದು ನ್ಯೂಟ್ರಾನ್ ಹಾಗು ಪ್ರೋಟಾನ್ ಒಳಗೆ ಇರುವಂತಹ ಬಲ ಬ್ರಹ್ಮಾಂಡದಲ್ಲೆ ಅತ್ಯಂತ ಶಕ್ತಿಶಾಲಿ ಬಲವಾಗಿದ್ದು ಇದನ್ನು ಬೇರ್ಪಡಿಸಿದರೆ ಅಗಾಧವಾದ ಶಕ್ತಿ ಉತ್ಪತ್ತಿಯಾಗುತ್ತದೆ ಹೀಗಾಗಿಯೆ ಇದಕ್ಕೆ  strong force  ಹೆಸರು ನೀಡಲಾಗಿದೆ. ನ್ಯೂಟ್ರಾನ್ ಹಾಗು ಪ್ರೋಟಾನ್ ಒಳಗೆ up – down qurks ಇರುತ್ತೆ ಈ ಪ್ರೋಟಾನ್ ಹಾಗು ನ್ಯೂಟ್ರಾನ್ ಗಳನ್ನು  ಹಿಡಿದು ನಿಲ್ಲಿಸುವುದು ಗ್ಲೂಆನ್ ಎಂಬ ಮತ್ತೊಂದು ಕಣ ಹೆಸರಲ್ಲೆ ‘ಗ್ಲೂ’ ಇದೆ ನಾವು ಗ್ಲೂವನ್ನು ಅಂಟಿಸಲು ಬಳಸುತ್ತೇವೆ ಇದು ಕೂಡ ಹಾಗೆಯೆ ನ್ಯೂಟ್ರಾನ್ ಹಾಗು ಪ್ರೋಟಾನ್ ಅನ್ನು ಹಿಡಿದು ನ್ಯೂಕ್ಲಿಯಸ್ ರಚಿಸುತ್ತದೆ.

2. ಅಶಕ್ತಿಯುತ ಬಲ(weak force)
ಯುರೇನಿಯಂ ಬಗ್ಗೆ ನಿಮಗೆ ಗೊತ್ತೆ ಇದೆ ಇದು ಒಂದು ರೇಡಿಯೋ ಆಕ್ಟೀವ್ ವಸ್ತು ಅಂದರೆ ಅದು ಬೆಳಕನ್ನು ಹೀರುತ್ತ ಗಾಮಾ ಕಿರಣವನ್ನು ಹೊರಹಾಕುತ್ತೆ(ಬ್ಲಾಕ್ ಬಾಡಿ ರೇಡಿಯೇಶನ್) ಇದನ್ನು ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಸಲಾಗುತ್ತೆ. ಇದರ ಜೊತೆಗೆ ಸೂರ್ಯನು ಸಹ ಇದೆ ತರಹದಲ್ಲೆ ಕೆಲಸ ಮಾಡುವುದು. ಇಂತಹ ವಸ್ತುಗಳ ಒಳಗೆ  weak force ಹೊಂದಿದ್ದು ಗಾಮಾ ವಿಕಿರಣ ಹೊರಹಾಕುವುದು ಇದಕ್ಕೆ ಕಾರಣವಾದ ಕಣಗಳೆ W ಬೋಸಾನ್ ಹಾಗು Z ಬೋಸಾನ್

3. ವಿದ್ಯುತ್ ಆಯಸ್ಕಾಂತೀಯ ಬಲ(Electromagnetic force)
ಇದರ ಬಗ್ಗೆ ಬಹುಶಃ ಎಲ್ಲಾರಿಗೂ ಗೊತ್ತಿರುತ್ತದೆ ಒಂದು ಕರೆಂಟ್ ತಂತಿ ಇದಕ್ಕೆ ಉದಾಹರಣೆ ಹಾಗು ಅದರಲ್ಲಿ ಕರೆಂಟ್ ಚಲಿಸಲು ಅದರೊಲಗೆ ಇರುವಂತಹ electron ಕಾರಣ(ಸಾಮಾನ್ಯವಾಗಿ ಅವುಗಳ ಚಾರ್ಜ್ ಕಾರಣ). ಇನ್ನು ಸೋಲಾರ್ ಬಗ್ಗೆ ಗೊತ್ತಿರಲೆ ಬೇಕು ಸೂರ್ಯನಿಂದ ಬರುವ ಬೆಳಕು ಸೋಲಾರ್ ತಟ್ಟೆಗಳ ಮೇಲೆ ಬಿದ್ದು ಅದರೊಳಗೆ ಇರುವಂತಹ ಸಿಲಿಕಾನ್ ಅಥವ ಜೆರಮೇನಿಯಂ electron  ಬಿಡುಗಡೆ ಮಾಡುತ್ತೆ ಇದನ್ನು ನೀರು ಕಾಯಿಸಲು ಬಳಸಬಹುದು ಅಥವ ಬಲ್ಬ್ ಅಂಟಿಸಲು ಬಳಸಬಹುದು. ಇನ್ನೊಂದು ಉದಾಹರಣೆಯೆಂದರೆ ಒಂದು ತಂತಿಯನ್ನು ವೃತ್ತಾಕಾರದಲ್ಲಿ ಹಲವಾರು ಸುತ್ತು ಬರುವಂತೆ ಸುತ್ತಿ ಅದರೊಳಗೆ ಒಂದು ಕಬ್ಬಿಣದ ಧಾಳವನ್ನು ಜೋರಾಗಿ ಪ್ರವೇಶಿಸಿ ತೆಗದರೆ ಅಲ್ಲು ಚಿಕ್ಕ ಮಟ್ಟದಲ್ಲಿ ವಿದ್ಯುತ್  ಉತ್ಪತ್ತಿಯಾಗುತ್ತೆ. ವಿದ್ಯುತ್ ಇರುವ ತಂತಿಯ ಸುತ್ತ ಆಯಸ್ಕಾಂತಿಯ ವಲಯ ಇರುತ್ತೆ ಇದು ಆಯಸ್ಕಾತದಂತೆ ವರ್ತಿಸುತ್ತೆ. ಹೀಗೆ ವಿದ್ಯುತ್ ಹಾಗು ಆಯಸ್ಕಾಂತ ಒಂದು ವಲಯಗಳನ್ನು ಹೊಂದಿವೆ ಎಲ್ಲೆಲ್ಲ electron ಚಲಿಸುವುದು ಅಲ್ಲೆಲ್ಲ ಆಯಸ್ಕಾಂತ ಹಾಗು ವಿದ್ಯುತ್ ವಲಯಗಳು ಇರಲೆಬೇಕು. ಇನ್ನೊಂದು ಸಂಗತಿಯೆಂದರೆ  ಬೆಳಕ್ಕಲ್ಲಿರುವ ಫೋಟಾನ್ ಎಂಬ ಕಣಗಳು(ತರಂಗವೂ ಹೌದು) ಸೆಮಿಕಂಡಕ್ಟರ್ ಮೇಲೆ ಬಿದ್ದಾಗ  electron  ಅನ್ನು ಬಿಡುಗಡೆ ಮಾಡತ್ತದೆ.

4. ಗುರುತ್ವಾಕರ್ಷಣೆ ಬಲ(gravitational force)
ಗುರುತ್ವಾಕರ್ಷಣೆಯ ಬಲದ ಬಗ್ಗೆಯೂ ಸಹ ಗೊತ್ತಿರಲೆ ಬೇಕು ಈ ಮೇಲಿನ ಬಲಗಳಿಗೆ ಹೋಲಿಸಿದರೆ ಗುರುತ್ವ ಅತ್ಯಂತ ಕಡಿಮೆ ಬಲಯಿರುವಂತಹದು. ಮೇಲಿನ ಬಲಗಳು ಕೇವಲ ಹತ್ತಿರದ ಅಂತರಕ್ಕೆ ಮಾತ್ರ ಪ್ರಭಾವ ಬೀರುತ್ತದೆ. ಎರಡು ದೂರದ ನ್ಯೂಟ್ರಾನ್ ಯಾವತ್ತಿಗೂ ಯಾವ ಪ್ರಭಾವವನ್ನು ಬೀರುವುದಿಲ್ಲ. ಆದರೆ ಗುರುತ್ವದ ಬಲ ಸೂರ್ಯನಿಂದ ಹಿಡಿದು ಕಟ್ಟ ಕಡೆಯ ಆಕಾಶಕಾಯವಾದ ಪ್ಲೂಟೊ ಮೇಲು ಇರುತ್ತದೆ. ಆದರೆ ಗುರುತ್ವಕ್ಕೆ ಕಾರಣವಾದ ಕಣವಿದಯೆ? ಇದಕ್ಕೆ ಉತ್ತರ ಗೊತ್ತಿಲ್ಲ ಕೆಲವರು ಹೇಳುವಂತೆ  graviton  ಕಾರಣ ಅಂತ ಆದರೆ ಈ ಕಣ ಇದುವರೆಗು ಸಿಕ್ಕಿಲ್ಲ.

ಕೆಳಗಿನ ಚಿತ್ರಗಳನ್ನು ಗಮನಿಸಿ ಅದರಲ್ಲಿ ನಿಮಗೆ ಮೇಲಿನದು ಸುಲಭವಾಗಿ ಅರ್ಥವಾಗುತ್ತದೆ.

ಹೀಗಾಗಿ ಬ್ರಹ್ಮಾಂಡದ ಎಲ್ಲಾ ಬಲಗಳಿಗೂ ಕಾರಣವಾದ ಈ ಚಿಕ್ಕ ಕಣಗಳನ್ನು ಒಂದು ಕಡೆ ಸೇರಿಸಿ ವಿಜ್ಞಾನಿಗಳು standard model of fundamental particles(ಭೌತಿಕ ಕಣಗಳ ಮಾಡಲ್)  ಅಂತ ಹೆಸರು ನೀಡಿದರು ಆದರೆ ಇದರಲ್ಲಿ ಗುರುತ್ವಾಕರ್ಷಣೆಯ ಬಲ ಮಾತ್ರ ಇಲ್ಲ ಅದೊಂದು ಬಿಟ್ಟು ಉಳಿದ ಬಲಗಳೆಲ್ಲ ಇದರಲ್ಲಿ ಒಳಗೊಂಡಿದೆ. ಕಣಗಳು ಈ ಬಲಗಳೊಂದಿಗೆ ಸಂವಹಣ ನಡೆಸುತ್ತಲೆ ಇರುತ್ತದೆ ಸದಾ ಅವು ದ್ರವ್ಯರಾಶಿಗಳೊಂದಿಗೆ ಸಂವಹಣದಲ್ಲೆ ಇರುತ್ತಾ ಜಗತ್ತನ್ನು ನಡೆಸುತ್ತದೆ.

ಒಟ್ಟಾರೆಯಾಗಿ ಬ್ರಹ್ಮಾಂಡವನ್ನು ಮೂರು ಕಣಗಳು(ಎಲೆಕ್ಟ್ರಾನ್  , ಕ್ವಾರ್ಕ್ ಗಳಯ)ನಾಲ್ಕು  ಬಲಗಳು( ಶಕ್ತಿಯುತವಾದ ಬಲಗಳು, ಅಶಕ್ತವಾದ ಬಲಗಳು, ವಿದ್ಯುತ್ ಆಯಸ್ಕಾಂತೀಯ ಬಲಗಳು ಹಾಗು ಗುರುತ್ವ ಬಲ) ಜೊತೆ ಸಂವಹಣವನ್ನು ನಾಲ್ಕು ಬೋಸಾನ್(w ಹಾಗು z ಬೋಸಾನ್, ಗ್ಲೂಆನ್, ಫೋಟಾನ್) ಮೂಲಕ ನಡೆಸುತ್ತ ಬ್ರಹ್ಮಾಂಡದ ಎಲ್ಲಾ ಕ್ರಿಯಗಳಿಗೆ ಕಾರಣವಾಗಿದೆ. ಇವನ್ನು ಹೊರೆತುಪಡಿಸಿ ಇರುವ ಡಾರ್ಕ್ ಮ್ಯಾಟರ್ ಹಾಗು ಡರ್ಕ್ ಎನಾರ್ಜಿ ಸಮಸ್ತ ಸೃಷ್ಟಿಯನ್ನು ನಡೆಸುತ್ತಿದೆ.

ಸೃಷ್ಟಿಯ ರಹಸ್ಯ ವಿಜ್ಞಾನಕ್ಕೆ ತಿಳಿದಿಲ್ಲ ಬಹುಶಃ ಗೊತ್ತಾಗುವುದಿಲ್ಲವೆನೊ….! ಆದರೆ ವಿಜ್ಞಾನಕ್ಕೆ ಗೊತ್ತಿರುವುದು ಏನೆಂದರೆ ಸೃಷ್ಟಿ ಹೇಗೆ ಕೆಲಸ ಮಾಡುತ್ತೆ ಎನ್ನುವುದು ಇದರ ಮೇಲೆ ಅನ್ವೇಷಣೆ ಮಾಡಿದ ವಿಜ್ಞಾನಿಗಳು ಹಲವಾರು ಸಿದ್ದಾಂತಗಳನ್ನು ಮಂಡಿಸದರು ಇದನ್ನು ಬಳಸಿ ಇಂಜಿನಿಯರ್ ಗಳು ಅವರ ಸಿದ್ಧಾಂತವನ್ನು ಪ್ರಯೋಗಾತ್ಮಕವಾಗಿ ಕೆಲಸ ಮಾಡುವಂತೆ ಮಾಡಿದರು ಇಂದು ಮಾನವ ಚಂದ್ರನ ಮೇಲೆ ಕಾಲು ಇಡಲು ಸಾಧ್ಯವಾಗಿದ್ದು ವಿಜ್ಞಾನಿಗಳ ಅನ್ವೇಷಣೆ ಹಾಗು ಇಂಜಿನಿಯರ್ ಗಳ ತಂತ್ರಜ್ಞಾನ!