- ಕಾಡು ಹೂಗಳು - ಏಪ್ರಿಲ್ 23, 2022
- ಆ ಎರಡು ಹಕ್ಕಿಗಳು (Those two birds..) - ಫೆಬ್ರುವರಿ 5, 2022
- ಹುಚ್ಚು ಹುಡುಗಿಯ ಪ್ರೇಮ ಗೀತೆ… - ಜನವರಿ 22, 2022
Wild flowers…
They never asked for
A specific place to bloom,
But still,as per their
likes and strength
Blossomed,
Some in pots,
And some in plats,
Got away with water and manure
To satiate their hunger.
The moment the lips brimmed with smiles,
The bosom filled with fragrance
And the colourful petals bloomed,
Price was fixed at a distant market.
But,Whether for good or evil
Some remained in the backyard
as if cursed by someone.
Happily smiling and grinning
In long hairs and buns,
Pandals and stages
And in garlands and bouquets,
Expired soon by fierceful vying.
The nameless red,yellow,
deep blue colours
At the mountain clefts
That can never be admired
and nurtured by anyone,
Are refusing to root
Deep down in the town
By the fear of getting
Their innate smiles faded.
By Smitha Amrithraj..
Translated by Samatha.R
ಕಾಡು ಹೂಗಳು
ಅವೇನು ಕೇಳಲಿಲ್ಲ ತಾವು
ಅರಳಿಕೊಳ್ಳಲು ಇಂತದೇ
ತಾವು ಬೇಕೆಂದು
ಆದರೂ ಅವರವರ ಇಷ್ಟಕ್ಕೆ ತಕ್ಕ
ಸಾಮರ್ಥ್ಯಕ್ಕೆ ತಕ್ಕಂತೆ..
ಕೆಲವು ಕುಂಡದಲ್ಲಿ ಅರಳಿಕೊಂಡವು
ಇನ್ನು ಕೆಲವು ಪಾತಿಯಲ್ಲಿ
ಹಸಿವೆಯೆಂಬುದು ಗೊತ್ತೇ ಆಗದಂತೆ
ನೀರು ಗೊಬ್ಬರ ಹದವರಿತು ದಕ್ಕಿಸಿಕೊಂಡವು.
ತುಟಿ ತುಂಬ ನಗು ತುಳುಕಿಸಿಕೊಂಡು
ಒಡಲ ತುಂಬ ಕಂಪು ತುಂಬಿಕೊಂಡು
ಬಣ್ಣ ಬಣ್ಣದ ಪಕಳೆಗಳು
ಬಿರಿದದ್ದೊಂದೇ ತಡ..
ದೂರದ ಮಾರುಕಟ್ಟೆಯಲ್ಲಿ
ಬೆಲೆ ನಿಗದಿಯಾಯಿತು
ಪಾಪಕ್ಕೋ,ಪುಣ್ಯಕ್ಕೋ,ಶಾಪಗ್ರಸ್ಥರಂತೆ
ಕೆಲವು ಹಿತ್ತಲಿನಲ್ಲಿಯೇ ಉಳಿದುಕೊಂಡವು.
ಸಂಭ್ರಮದ ಸಡಗರದ ನಗು
ತುರುಬಿನಲ್ಲಿ,ಉದ್ದಜಡೆಯಲ್ಲಿ
ಮಂಟಪದಲ್ಲಿ,ವೇದಿಕೆಯಲ್ಲಿ
ಹಾರ ತುರಾಯಿಗಳಲ್ಲಿ
ಅಕಾಲಿಕ ಅವಸಾನ
ಪೈಪೋಟಿಯ ಜಿದ್ದಿನಲ್ಲಿ.
ಅಲ್ಲಿ ಬೆಟ್ಟದಿರುಕಲಿನಲ್ಲಿ
ಯಾರ ದೇಖರೇಖಿಯೂ ಇಲ್ಲದೆ
ಹೆಸರಿಲ್ಲದ ಕೆಂಪು,ಹಳದಿ,ಕಡುನೀಲಿ
ಬಣ್ಣನೆಗೂ ಸಿಗದ ಬಣ್ಣಗಳು
ಊರಿನೊಳಗೆ ಬೇರನ್ನೂರಲು
ಸುತರಾಂ ಒಪ್ಪುತ್ತಲೇ ಇಲ್ಲ
ಬಣ್ಣದೊಳಗಿನ ಸಹಜ ನಗು
ಮಾಸಬಹುದೆಂಬ ದಿಗಿಲಿವೆಯೆಂಬಂತೆ.
ಸ್ಮಿತಾ ಅಮೃತ್ ರಾಜ್.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್