ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಮಾಗಿಯ ಕೋಗಿಲೆ ಇದು ಎದೆ ತೆರೆದು ಹಾಡಿದೆ
ಇನ್ನೊಂದು ಬೆಳಗಿಗೆ ಮನವ ಮಿಡಿದು ಹಾಡಿದೆ

ಈ ಹೊಳೆವ ಕಂಗಳಲಿ ಅದೋ ಬಂದಿದೆ ವಸಂತ
ಹೊಸ ಬಾಳಿನ ಹಾಡು ಬಾಗಿಲು ತೆಗೆದು ಹಾಡಿದೆ

ಹೂವಿನಂಥ ಕನಸು ಮೂಡಿ ಬಿರಿದ ಮೌನ
ಬರೆಯಲಾಗದ ಪದ್ಯ ಬಗೆ ಬಗೆದು ಹಾಡಿದೆ

ಬಿತ್ತಿ ಬೆಳೆದಿದ್ದು ಏನು, ನೆರಳಿಲ್ಲದ ಮರಗಳನ್ನೇ
ಹಾದಿಯ ಬೆಳಕನ್ನು ನೆನೆನೆನೆದು ಹಾಡಿದೆ

ಹಳದಿ ಬೆಳಕಿನ ಸಂಜೆ ತೆರೆದು ಹಾಡಿನ ಲೋಕ
ಇದರಲ್ಲಿ ಅದು ಆ-ಲಯವೆಂದು ಹಾಡಿದೆ

ಆ ನಗೆಯ ಹಿಂದೆ ಎಂಥ ಕಾಡುವ ಮಾಯೆ
ನನ್ನೊಳಗಿನ ಆಕಾಶಕ್ಕೆ ಎಷ್ಟೊಂದು ಹಾಡಿದೆ

ಎತ್ತಿದ ಕೈಗಳ ನಡುವೆ ಬಂಗಾರದ ಹಕ್ಕಿ ‘ಜಂಗಮ’
ಈ ಕ್ಷಣದ ಸತ್ಯಗಳ ಭಯ ತೊರೆದು ಹಾಡಿದೆ

ಡಾ. ಗೋವಿಂದ್ ಹೆಗಡೆ