ಯುವ ಸಂಸ್ಕೃತ ವಿದ್ವಾಂಸ ಡಾ.ಪಿ.ವಿನಯಾಚಾರ್ಯ ರವರಿಗೆ ಡಿ.ಲಿಟ್ ಪದವಿ ಪ್ರದಾನ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕ ಯುವ ಸಂಸ್ಕೃತ ವಿದ್ವಾಂಸ ಡಾ.ಪಿ.ವಿನಯಾಚಾರ್ಯ ರವರಿಗೆ ನಾಗಪುರದ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದವರು ಇತ್ತೀಚೆಗೆ ನಡೆದ 9ನೇ ಘಟಿಕೋತ್ಸವದಲ್ಲಿ ಶ್ರೀಯುತರು ಸಲ್ಲಿಸಿದ ಮಧ್ವಾಚಾರ್ಯರ ಸರ್ವಮೂಲಗ್ರಂಥಗಳಲ್ಲಿ ಒಂದಾದ ‘ಮಿಥ್ಯಾತ್ವ ಅನುಮಾನ ಖಂಡನಂ’ ಕೃತಿಯ ಆಂಗ್ಲ ವ್ಯಾಖ್ಯಾನದ ಪ್ರೌಢ ಪ್ರಬಂದಕ್ಕೆ ಪ್ರತಿಷ್ಠಿತ ‘ವಿದ್ಯಾವಾಚಸ್ಪತಿ ‘ ಉಪಾಧಿಯೊಂದಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಿದೆ ಎಂದು ಕುಲಪತಿ ಡಾ.ಶ್ರೀನಿವಾಸ ವರಖೇಡಿರವರು ತಿಳಿಸಿರುತ್ತಾರೆ.
ಆನ್ಲೈನ್ ನಲ್ಲಿ ನಡೆದ ಘಟಿಕೋತ್ಸವದಲ್ಲಿ ಮಹಾರಾಷ್ರ್ರದ ರಾಜ್ಯಪಾಲರು, ಯೋಗ ಗುರು ಬಾಬಾ ರಾಮದೇವ್ ಮೊದಲಾದವರು ಭಾಗವಹಿಸಿದ್ದರು. ಶ್ರೀಯುತರು ಸಂಸ್ಕೃತದಲ್ಲಿ ವಿದ್ವತ್ , ಉತ್ತಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ) ವ್ಯಾಸರಾಜ ತೀರ್ಥರ ನ್ಯಾಯಾಮೃತದ ಕುರಿತು ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕೇವಲ ಅಧ್ಯಾಪನ ವೃತ್ತಿ , ಸಂಸ್ಕೃತ ಸಾಹಿತ್ಯದಲ್ಲಷ್ಠೆ ಅಲ್ಲದೇ ಕರ್ನಾಟಕ ಶಾಸ್ತ್ರೀಯ ಸಂಗೀತ , ವೀಣಾ- ವೇಣು ವಾದನ , ಗೀತರಚನೆಯಲ್ಲೂ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭಾವಂತ. ಹಲವಾರು ರಾಷ್ಟ್ರೀಯ – ಅಂತರಾಷ್ಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಭಾಗವಹಿಸಿ ನವ್ಯ ನ್ಯಾಯ – ತರ್ಕ- ವಿಚಾರದ ಬಗ್ಗೆ ಪ್ರೌಢ ಪ್ರಬಂಧ ಮಂಡಿಸಿದ್ದಾರೆ.
ವಿಶ್ವ ವ್ಯಾಸರಾಜ ಭಕ್ತರ ವೇದಿಕೆಯ ‘ಶ್ರೀ ವ್ಯಾಸರಾಜ ಸೇವ ಧುರಂದರ ‘ಮೊದಲಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಕಿರಿಯ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿ ಸಂಶೋಧನಾ ನಿರತರಾಗಿ ಯುವ ಸಮುದಾಯಕ್ಕೆ ತತ್ವಜ್ಞಾನದ ಪಾಠ- ಪ್ರವಚನದಲ್ಲಿ ತೊಡಗಿಸಿಕೊಂಡಿರುವ ಸಾರ್ಥಕ ಚೇತನ .
ಸಂಪರ್ಕ ಸಂ: 98453 24894
http://ksu.ac.in/en/dr-vinay/
ಹೆಚ್ಚಿನ ಬರಹಗಳಿಗಾಗಿ
ವಿವೇಕ ದರ್ಶನ
ಪಂಚ ದ್ರಾವಿಡ ಭಾಷಾ ಅನುವಾದಕರ ಸಂಘ ರಚನೆ
‘ರತಿಯ ಕಂಬನಿ’ ಉದುರುವ ಸಂಭ್ರಮ